ಬೆಂಗಳೂರು[ಜ.20]  ಸ್ನೇಹಿತರ ನಡುವೆ ಸಣ್ಣ ಪುಟ್ಟ ಗಲಾಟೆಯಾಗಿದೆ. ಆನಂದ್ ಸಿಂಗ್ ಗೆ ಕಣ್ಣಿಗೆ ಸಣ್ಣ ಗಾಯ ಆಗಿದೆ. ಯಾವುದೇ ಸ್ಟೀಚ್ ಗಳನ್ನು ಹಾಕಿಲ್ಲ. ಆಪರೇಷನ್ ಕಮಲದ ವಿಚಾರವಾಗಿ ಗಲಾಟೆ ಮಾಡಕೊಂಡಿಲ್ಲ ಎಂದು ಸಚಿವ ಜಮೀರ್ ಅಹಮದ್ ಸ್ಪಷ್ಟನೆ ನೀಡಿದ್ದಾರೆ.

 ಅಪೋಲೋ ಆಸ್ಪತ್ರೆಗೆ ಆಗಮಿಸಿ ಆನಂದ್‌ ಸಿಂಗ್ ಆರೋಗ್ಯ ವಿಚಾರಿಸಿದ ಜಮೀರ್, ಮಾತ ಮಾತಲ್ಲಿ ಜಗಳ ಆಗಿದೆ. ಒಂದೂ ಸ್ಟಿಚ್ ಬಿದ್ದಿಲ್ಲ. ಅವರು ಆತ್ಮೀಯ ಸ್ನೇಹಿತರು. ಭೀಮಾನಾಯ್ಕ, ಗಣೇಶ್ ನಾಯ್ಕ, ಆನಂದ್ ಸಿಂಗ್ ಆತ್ಮೀಯ ಸ್ನೇಹಿತರು. ನಾನು ಅಖಂಡ ಶ್ರೀನಿವಾಸ್ ಮೂರ್ತಿ ಇಬ್ರೂ ಸ್ನೇಹಿತರು. ನಾನು ಹಾಗೂ ಸೀನಣ್ಣ( ಅಖಂಡ ಶ್ರೀನಿವಾಸ್ ಮೂರ್ತಿ) ನಾವಿಬ್ರೂ  ಹೇಗೆ ಅನ್ನೋದು ನಿಮಗೆ ಗೊತ್ತು ನಾವೂ ಆಗಾಗ ಗಲಾಟೆ ಮಾಡಿಕೊಂಡಿದಿವಿ. ಆಪರೇಶನ್ ಕಮಲ ವಿಚಾರವಾಗಿ ಅವರು ಹೊಡೆದಾಡಿಕೊಂಡಿಲ್ಲ ಎಂದರು.

ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ಮಾರಾಮಾರಿಗೆ ಅಸಲಿ ಕಾರಣವೇನು..

ನೀವು ತಿಳಿದ ಹಾಗೆ ದೊಡ್ಡ ಗಲಾಟೆ ಅಲ್ಲ. ಆನಂದ್ ಸಿಂಗ್ ನಾಳೆ ಬೆಳಿಗ್ಗೆ ಡಿಸ್ಚಾರ್ಜ್  ಆಗಬಹುದು ಎಂದು ಜಮೀರ್ ಹೇಳಿದರು. ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರ ನಡುವಿನ ಜಗಳ ರಾಜಕಾರಣದಲ್ಲಿ ಹೇಳಿಕೆ, ಪ್ರತಿಕ್ರಿಯೆಗಳ ಸರಮಾಲೆಗೆ ಕಾರಣವಾಗಿದೆ.