District Ministers ಜಿಲ್ಲಾ ಉಸ್ತುವಾರಿ ಸಚಿವರ ಹೊಸ ಪಟ್ಟಿ ರಿಲೀಸ್, ಅಶೋಕ್, ಆನಂದ್‌ ಸಿಂಗ್‌ಗೆ ಬಿಗ್ ಶಾಕ್

* ಜಿಲ್ಲಾ ಉಸ್ತುವಾರಿ ಸಚಿವರ ಹೊಸ ಪಟ್ಟಿ ರಿಲೀಸ್
*28 ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿದ ರಾಜ್ಯ ಸರ್ಕಾರ
* ಅಶೋಕ್, ಆನಂದ್‌ ಸಿಂಗ್‌ಗೆ ಬಿಗ್ ಶಾಕ್

Karnataka district IN charge ministers list released By Bommai government rbj

ಬೆಂಗಳೂರು, (ಜ.24): ಕೊವಿಡ್ ಉಸ್ತುವಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನ (District incharge Ministers) ನೇಮಿಸಿ ಸರ್ಕಾರ ಆದೇಶ ಹೊರಡಿಸಿದ್ದು.  31 ಜಿಲ್ಲೆಗಳ ಪೈಕಿ 28 ಸಚಿವರುಗಳಿಗೆ ಸಿಎಂ ಹಂಚಿಕೆ ಮಾಡಿದ್ದಾರೆ.

ಅದರಲ್ಲೂ ಪ್ರಮುಖವಾಗಿ ಆರ್ ಅಶೋಕ್‌ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಶ್ರೀರಾಮುಲು ವಾಪಸ್‌ ಬಳ್ಳಾರಿಗೆ ಬಂದಿದ್ದು, ಆನಂದ್‌ ಸಿಂಗ್ ಹಿನ್ನಡೆಯಾಗಿದೆ. 

* ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಬೆಂಗಳೂರು ನಗರ
* ಗೋವಿಂದ ಕಾರಜೋಳ ಬೆಳಗಾವಿ ಜಿಲ್ಲಾ ಉಸ್ತುವಾರಿ, 
* ಕೆ.ಎಸ್.ಈಶ್ವರಪ್ಪ-ಚಿಕ್ಕಮಗಳೂರು 
* ಬಿ.ಶ್ರೀರಾಮುಲು-ಬಳ್ಳಾರಿ
* ವಿ.ಸೋಮಣ್ಣ-ಚಾಮರಾಜನಗರ 
* ಉಮೇಶ್ ಕತ್ತಿ-ವಿಜಯಪುರ
* ಎಸ್.ಅಂಗಾರ-ಉಡುಪಿ 
* ಆರಗ ಜ್ಞಾನೇಂದ್ರ-ತುಮಕೂರು 
* ಡಾ.ಅಶ್ವತ್ಥ್ ನಾರಾಯಣ-ರಾಮನಗರ
* ಸಿ.ಸಿ.ಪಾಟೀಲ್-ಬಾಗಲಕೋಟೆ
* ಪ್ರಭು ಚವ್ಹಾಣ- ಯಾದಗಿರಿ
* ಮುರುಗೇಶ್ ನಿರಾಣಿ- ಕಲಬುರಗಿ
* ಎಸ್‌.ಟಿ. ಸೋಮಶೇಖರ್- ಮೈಸೂರು
* ಬಿ.ಸಿ.ಪಾಟೀಲ್-ಚಿತ್ರದುರ್ಗ ಮತ್ತು ಗದಗ
* ಭೈರತಿ ಬಸವರಾಜ್-ದಾವಣಗೆರೆ
* ಡಾ.ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ ಜಿಲ್ಲೆ
* ಕೆ.ಗೋಪಾಲಯ್ಯ-ಹಾಸನ, ಮಂಡ್ಯ 
* ಶಶಿಕಲಾ ಜೊಲ್ಲೆ-ವಿಜಯನಗರ 
* ಎಂಟಿಬಿ ನಾಗರಾಜ್-ಚಿಕ್ಕಬಳ್ಳಾಪುರ 
* ಕೆ.ಸಿ.ನಾರಾಯಣಗೌಡ-ಶಿವಮೊಗ್ಗ 
* ಬಿ.ಸಿ.ನಾಗೇಶ್-ಕೊಡಗು 
* ವಿ.ಸುನಿಲ್ ಕುಮಾರ್-ದಕ್ಷಿಣ ಕನ್ನಡ 
* ಹಾಲಪ್ಪ ಆಚಾರ್-ಧಾರವಾಡ
* ಶಂಕರ ಪಾಟೀಲ್ ಮುನೇನಕೊಪ್ಪ-ರಾಯಚೂರು, ಬೀದರ್, 
* ಮುನಿರತ್ನ-ಕೋಲಾರ
"
ಬೆಂಗಳೂರು ನಗರ ಸಿಎಂ ಬಳಿ 
ಬೆಂಗಳೂರು ನಗರ ಉಸ್ತುವಾರಿ ಯಾರಿಗೂ ನೀಡದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿಗೆ ಭಾರಿ ಪೈಪೋಟಿಯಿತ್ತು. ಅಶ್ವತ್ಥ್ ನಾರಾಯಣ, ವಿ. ಸೋಮಣ್ಣ, ಅಶೋಕ್ ನಡುವೆ ತೀವ್ರ ಪೈಪೋಟಿ ನಡೆದಿತ್ತು.ಆದರೆ ಬೆಂಗಳೂರು ನಗರ ಉಸ್ತುವಾರಿಯನ್ನು ಸದ್ಯ ಮುಖ್ಯಮಂತ್ರಿ ಬೊಮ್ಮಾಯಿ ತಮ್ಮಲ್ಲಿಯೇ ಉಳಿಸಕೊಂಡಿದ್ದಾರೆ.

ರಾಮುಲುಗೆ ಒಲಿದ ಬಳ್ಳಾರಿ 
ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಬಂದಾಗಿನಿಂದಲೂ ತಮಗೆ ಬಳ್ಳಾರಿ ಉಸ್ತುವಾರಿ ಕೊಡಿ ಎಂದು ಶ್ರೀರಾಮುಲು ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಈ ಬಗ್ಗೆ ಈ ಹಿಂದೆ ಸಿಎಂ ಆಗಿದ್ದ ಬಿಎಸ್‌ವೈ ಬಳಿ ಅಸಮಾಧಾನ ಹೊರಹಾಕಿದ್ರು. ಇದೀಗ ಕೊನೆಗೂ ಬಳ್ಳಾರಿ ಉಸ್ತುವಾರಿ ಪಡೆಯುವಲ್ಲಿ ಶ್ರೀ ರಾಮುಲು ಯಶಸ್ವಿಯಾಗಿದ್ದಾರೆ. 

ಆನಂದ್ ಸಿಂಗ್, ಅಶೋಕ್‌ಗೆ ಬಿಗ್ ಶಾಕ್
ಬಿಜೆಪಿ ಸರ್ಕಾರದ ಪ್ರಮುಖ ಸಚಿವರಲ್ಲಿ ಅಶೋಕ್ ಸಹ ಒಬ್ಬರು. ಯಡಿಯೂರಪ್ಪನವರ ಆಪ್ತ ಗುಂಪಿನಲ್ಲಿ ಗುರುತಿಸಿಕೊಂಡವರು. ಆದ್ರೆ, ಬೊಮ್ಮಾಯಿ ಸರ್ಕಾರ ಅವರಿಗೆ ಯಾವುದೇ ಜಿಲ್ಲಾ ಉಸ್ತುವಾರಿ ನೀಡಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ. ಇನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆನಂದ್‌ ಸಿಂಗ್ ತಮ್ಮ ಜಿಲ್ಲೆಯ ಉಸ್ತುವಾರಿ ಸಿಕ್ಕಿಲ್ಲ. ಅವರಿಗೆ ಕೊಪ್ಪಳ ನೀಡಲಾಗಿದೆ. ಇನ್ನು ವಿಜಯನಗರ ಜಿಲ್ಲಾ ಉಸ್ತುವರಿಯನ್ನಾಗಿ ಶಶಿಕಲಾ ಜೊಲ್ಲೆ ಅವರನ್ನ ನೇಮಿಸಲಾಗಿದೆ.

"

ಸ್ವಂತ ಜಿಲ್ಲೆ ಸಚಿವರ ಬದಲಾವಣೆ
ಯೆಸ್‌....ಈ ಹಿಂದೆ ಸ್ವಂತ ಜಿಲ್ಲೆಯ ಉಸ್ತುವಾರಿಗಳನ್ನ ಬದಲಾವಣೆ ಮಾಡಲಾಗಿದೆ, ಶಿವಮೊದಿಂದ ಅಶ್ವರಪ್ಪ ಅವರಿಗೆ ಕೋಕ್ ನೀಡಿ ಚಿಕ್ಕಬಳ್ಳಾಪುರ ನೀಡಲಾಗಿದೆ. ಅಲ್ಲದೇ ಸುಧಾಕರ್ ಅವರಿಗೆ ಚಿಕ್ಕಳ್ಳಾಪುರ ಬಿಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ನೀಡಲಾಗಿದೆ. ಇನ್ನು ಚಿಕ್ಕಬಳ್ಳಾಪುರಕ್ಕೆ ಎಂಟಿಬಿ ನಾಗರಾಜ್ ಅವರನ್ನ ಉಸ್ತುವಾರಿಯನ್ನಾಗಿ ಮಾಡಲಾಗಿದೆ.

  

Latest Videos
Follow Us:
Download App:
  • android
  • ios