ತುಮಕೂರು- ಶಿರಾ ಮಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿ: ಶಾಸಕ ಅರವಿಂದ ಬೆಲ್ಲದ್‌

ರಾಜ್ಯಕ್ಕೆ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತುಮಕೂರು-ಶಿರಾ ನಡುವೆ ಸ್ಥಾಪನೆಯಾದರೆ, ಅದರಿಂದ ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ಸೇರಿದಂತೆ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಮನವಿ ಮಾಡಿದ್ದಾರೆ. 
 

An international airport should be built between Tumakuru and Sira Says MLA Aravind Bellad gvd

ಸುವರ್ಣ ವಿಧಾನಸಭೆ (ಡಿ.19): ರಾಜ್ಯಕ್ಕೆ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತುಮಕೂರು-ಶಿರಾ ನಡುವೆ ಸ್ಥಾಪನೆಯಾದರೆ, ಅದರಿಂದ ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ಸೇರಿದಂತೆ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಮನವಿ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆ ಕುರಿತಂತೆ ನಿಯಮ 68ರ ಅಡಿಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಉತ್ತರ ಕರ್ನಾಟಕವು ದಕ್ಷಿಣ ಕರ್ನಾಟಕಕ್ಕಿಂತ ಹಿಂದಿದೆ. ಉತ್ತರ ಕರ್ನಾಟಕದ ಜನರ ಸರಾಸರಿ ಆದಾಯದಲ್ಲಿ ಕಡಿಮೆಯಿದೆ. 

ಪ್ರವಾಸೋದ್ಯಮವು ಸಾಕಷ್ಟು ಹಿಂದುಳಿದಿದೆ. ಉತ್ತರ ಕರ್ನಾಟಕದಲ್ಲಿ ಹಲವು ತಾಣಗಳಿದ್ದರೂ, ಅಭಿವೃದ್ಧಿಗೆ ಆದ್ಯತೆ ದೊರೆತಿಲ್ಲ. ಅದರ ಜತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಸರ್ಕಾರದಿಂದ ಒತ್ತು ದೊರೆತಿಲ್ಲ. ಎಲ್ಲವೂ ಬೆಂಗಳೂರು ಕೇಂದ್ರೀಕೃತ ಅಭಿವೃದ್ಧಿಯಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಅಧಿಕಾರಿಗಳ ಪೈಕಿ ಶೇ 12ರಷ್ಟು ಮಾತ್ರ ಗೆಜೆಟೆಡ್‌ ಮತ್ತು ಶೇ. 8ರಷ್ಟು ನಾನ್ ಗೆಜೆಟೆಡ್‌ ಅಧಿಕಾರಿಗಳಿದ್ದಾರೆ. ಇದು ಉತ್ತರ ಕರ್ನಾಟಕ ಹಿಂದುಳಿದಿರುವುದಕ್ಕೆ ಉದಾಹರಣೆಯಾಗಿದೆ ಎಂದರು.

ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗ ಆರಂಭಿಸಲು ಸಂಸದ ಸುನೀಲ್‌ ಬೋಸ್‌ ಮನವಿ

ಅಖಂಡ ಕರ್ನಾಟಕ ಅಭಿವೃದ್ಧಿಯ ದೃಷ್ಟಿಯಿಟ್ಟುಕೊಡು ಸರ್ಕಾರ ಕೆಲಸ ಮಾಡಬೇಕಿದೆ. ದೊಡ್ಡ ಕೈಗಾರಿಕೆಗಳೆಲ್ಲವೂ ಬೆಂಗಳೂರಿಗೆ ಸೇರುತ್ತಿವೆ. ಅವುಗಳನ್ನು ಉತ್ತರ ಕರ್ನಾಟಕದತ್ತ ಬರುವಂತೆ ಮಾಡಬೇಕಿದೆ. ಆ ಉದ್ದೇಶದೊಂದಿಗೆ ಕೆಲಸ ಮಾಡದ ಕಾರಣದಿಂದಲೇ ಟೊಯೋಟಾ, ಏಥರ್‌ ಎನರ್ಜಿ ಸೇರಿದಂತೆ ಮತ್ತಿತರ ಸಂಸ್ಥೆಗಳು ಬೆಂಗಳೂರಿನಿಂದ ಬೇರೆ ರಾಜ್ಯಕ್ಕೆ ವರ್ಗಾವಣೆಗೊಂಡವು. ಅವುಗಳನ್ನು ಉತ್ತರ ಕರ್ನಾಟಕದಲ್ಲಿ ಸ್ಥಾಪಿಸುವ ಕೆಲಸ ಸರ್ಕಾರ ಮಾಡಬಹುದಿತ್ತು. ಇನ್ನು ಉತ್ತರ ಕರ್ನಾಟಕದ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಗಾಗಿ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಕನಿಷ್ಠ ತುಮಕೂರು-ಶಿರಾ ನಡುವೆ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಸಾಕ್ಷರತಾ ಪ್ರಮಾಣ ಶೇ. 73.36ರಷ್ಟು ಮಾತ್ರವಿದೆ. ಅದೇ ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ ಶೇ. 85ಕ್ಕಿಂತ ಹೆಚ್ಚಿದೆ. ಶಾಲೆಗಳ ಕೊರತೆ, ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಇಚ್ಛಾಶಕ್ತಿಯ ಕೊರತೆ ಕಾರಣದಿಂದಾಗಿ ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಕಾಂಗ್ರೆಸ್‌ ಮತ್ತು ಜನತಾದಳ ಸರ್ಕಾರಗಳೇ ಕಾರಣ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಎಸ್‌.ಎಂ. ಕೃಷ್ಣ, ಸಿದ್ದರಾಮಯ್ಯ ಅವರಂತಹ ದೂರದೃಷ್ಟಿ ಹೊಂದಿದ ಮುಖ್ಯಮಂತ್ರಿಗಳಿಂದಾಗಿ ಇಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ. 

ಆದರೆ, ಬಿಜೆಪಿ ಮುಖ್ಯಮಂತ್ರಿಗಳಲ್ಲಿ ದೂರದೃಷ್ಟಿತ್ವ ಕಡಿಮೆಯಿತ್ತು. ಅಲ್ಲದೆ, ನೀರಾವರಿ ಯೋಜನೆ ಅನುಷ್ಠಾನದಲ್ಲೂ ಹಿಂದೆ ಬಿದ್ದಿದ್ದಾರೆ ಹಾಗೂ ಕೇಂದ್ರ ಸರ್ಕಾರ ನೆರವು ನೀಡುತ್ತಿಲ್ಲ ಎಂದು ಹೇಳಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ಎಚ್‌.ಡಿ. ರೇವಣ್ಣ, ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿಯಾಗಲು ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಕೈಗೊಂಡ ಕಾರ್ಯಕ್ರಮಗಳೂ ಕಾರಣ ಎಂದು ಹೇಳಿದರು. ಬಿಜೆಪಿ ಶಾಸಕರೂ ಕೂಡ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಕ್ಕೆ ಆಕ್ಷೇಪಿಸಿ, ಸಿದ್ದರಾಮಯ್ಯ ಅವರ ಮೇಲೆ ಪ್ರೀತಿಯಿದ್ದರೆ ಹೊಗಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅದರ ನೆಪದಲ್ಲಿ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಟೀಕಿಸುವುದು ಸರಿಯಲ್ಲ. ಮಾಡಿರುವ ಕೆಲಸವನ್ನು ಒಪ್ಪಿಕೊಳ್ಳಬೇಕು ಎಂದರು.

ಸ್ಪೀಕರ್‌ ವಿರುದ್ಧ ಕಾಂಗ್ರೆಸ್‌ ಶಾಸಕಿ ಗರಂ: ರಾತ್ರಿ 9 ಗಂಟೆ ನಂತರವೂ ಪ್ರಶ್ನೋತ್ತರ ಕಲಾಪ ಆರಂಭಿಸದ ಸ್ಪೀಕರ್‌ ಯು.ಟಿ. ಖಾದರ್‌ ವಿರುದ್ಧ ಕಾಂಗ್ರೆಸ್‌ ಶಾಸಕಿ ರೂಪಕಲಾ ಶಶಿದರ್‌ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೂ ಮೊದಲು ಸ್ಪೀಕರ್‌ ಆಸನದಲ್ಲಿ ಕುಳಿತಿದ್ದ ಡೆಪ್ಯೂಟಿ ಸ್ಪೀಕರ್‌ ವಿರುದ್ಧವೂ ಗರಂ ಆದ ರೂಪಕಲಾ, ನೀವು ಮಾತನಾಡುವವರಿಗೆ ಸಮಯ ನಿಗದಿ ಮಾಡಿ. ಪ್ರಶ್ನೋತ್ತರ ಮತ್ತು ಗಮನ ಸೆಳೆಯುವ ಸೂಚನೆಯನ್ನು ಯಾವಗ ತೆಗೆದುಕೊಳ್ಳುತ್ತೀರಿ ಎಂಬುದನ್ನಾದರೂ ಹೇಳಿ. ಆಗಲೇ ನಾವು ಬರುತ್ತೇವೆ. ಸುಮ್ಮನೇ ಮಾತು ಕೇಳುತ್ತಾ ಕೂರಲಾಗುವುದಿಲ್ಲ ಎಂದು ಹೇಳಿದರು. ಅದೇ ಸಮಯದಲ್ಲಿ ಯು.ಟಿ. ಖಾದರ್‌ ಬಂದಾಗ, ಅವರ ಬಳಿಯೂ ಅದೇ ರೀತಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಚಿರಂಜೀವಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಜೂ.ಎನ್‌​ಟಿಆರ್‌ಗೆ ಈ ಸ್ಟಾರ್ ವಾರ್ನಿಂಗ್ ಕೊಟ್ಟಿದ್ದರಂತೆ!

ರಾಯರೆಡ್ಡಿ ಮಾತನಾಡದಂತೆ ತಡೆಯಲು ಸಚಿವರ ಯತ್ನ!: ಬಸವರಾಜ ರಾಯರೆಡ್ಡಿ ಮಾತನಾಡುವಂತೆ ಸ್ಪೀಕರ್‌ ಸೂಚನೆ ನೀಡಿದಾಗ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು, ಅವರಿಗೆ ಗುರುವಾರ ಬೆಳಗ್ಗೆ ಮಾತನಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ 2 ಗಂಟೆಗಳ ಕಾಲ ಮಾತನಾಡುತ್ತಿರುತ್ತಾರೆ ಎಂದು ಹೇಳಿದರು. ಅದಕ್ಕೆ ಧ್ವನಿಗೂಡಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ರಾಯರೆಡ್ಡಿ ಅವರಿಗೆ ಬೆಳಗ್ಗೆ ಮಾತನಾಡುವುದಕ್ಕೆ ಅವಕಾಶ ನೀಡುವುದು ಸೂಕ್ತ ಎಂದರು.

Latest Videos
Follow Us:
Download App:
  • android
  • ios