ಕಾಂಗ್ರೆಸ್ ವಿರುದ್ಧದ ಹೇಳಿಕೆಗಳು ಪ್ರಚೋದನಾಕಾರಿಯಾಗಿದ್ದು, ನಾಚಿಕೆಗೇಡಿನ ಹೇಳಿಕೆಗಳಾಗಿವೆ. ದೇಶದ ಮೊದಲ ಗೃಹ ಸಚಿವರಿಂದ ನಿಷೇಧಿಸಲ್ಪಟ್ಟಿದ್ದ ಸಂಘಟನೆಗೆ (ಆರ್‌ಎಸ್‌ಎಸ್) ನಿಷ್ಠರಾಗಿರುವ ಗೃಹ ಸಚಿವರು ಸೋಲಿನ ಭಯದಿಂದ ಬೆದರಿಕೆ ಹೇಳಿಕೆ ನೀಡುತ್ತಿದ್ದಾರೆ: ಜೈರಾಮ್ ರಮೇಶ್
ನವದೆಹಲಿ(ಏ.27): 'ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿ ರಿವರ್ಸ್‌ಗೇರ್‌ನಲ್ಲಿ ಸಾಗಲಿದೆ ಹಾಗೂ ರಾಜ್ಯದಲ್ಲಿ ಗಲಭೆಗಳು ಸೃಷ್ಟಿಯಾಗಲಿವೆ’ ಎಂಬ ಅಮಿತ್ ಶಾ ಹೇಳಿಕೆಗೆ ಕಿಡಿಕಾರಿರುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಇಂತಹ ಹೇಳಿಕೆಗಳ ಮೂಲಕ ಶಾ ಅವರು ಮತದಾರರನ್ನು ಬೆದರಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಬುಧವಾರ ಮಾತನಾಡಿದ ಜೈರಾಮ್, ‘ಕಾಂಗ್ರೆಸ್ ವಿರುದ್ಧದ ಹೇಳಿಕೆಗಳು ಪ್ರಚೋದನಾಕಾರಿಯಾಗಿದ್ದು, ನಾಚಿಕೆಗೇಡಿನ ಹೇಳಿಕೆಗಳಾಗಿವೆ. ದೇಶದ ಮೊದಲ ಗೃಹ ಸಚಿವರಿಂದ ನಿಷೇಧಿಸಲ್ಪಟ್ಟಿದ್ದ ಸಂಘಟನೆಗೆ (ಆರ್‌ಎಸ್‌ಎಸ್) ನಿಷ್ಠರಾಗಿರುವ ಗೃಹ ಸಚಿವರು ಸೋಲಿನ ಭಯದಿಂದ ಬೆದರಿಕೆ ಹೇಳಿಕೆ ನೀಡುತ್ತಿದ್ದಾರೆ’ ಎಂದಿದ್ದಾರೆ.
‘ಒಂದು ದೇಶ ಒಂದು ಹಾಲು’ ಘೋಷಣೆ ಮಾಡಲು ಬಿಜೆಪಿಗೆ ಬಿಡುವುದಿಲ್ಲ: ಜೈರಾಂ ರಮೇಶ್
ಕರ್ನಾಟಕದ ದೇವರಹಿಪ್ಪರಗಿಯಲ್ಲಿ ಮಂಗಳವಾರ ಸಾರ್ವಜನಿಕ ರಾರಯಲಿಯನ್ನುದ್ದೇಶಿಸಿ ಮಾತನಾಡಿದ ಶಾ, ‘ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕುಟುಂಬ ರಾಜಕಾರಣ ಹಾಗೂ ಗಲಭೆಗಳಿಗೆ ರಾಜ್ಯ ತುತ್ತಾಗುತ್ತದೆ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ’ ಎಂದಿದ್ದರು.
