ಬೆಳಗಾವಿ, (ಜ.17): ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಅಸಮಾಧಾನಿತ ಶಾಸಕರಿಗೆ ದೆಹಲಿಗೆ ಬರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಲಾವ್ ನೀಡಿದ್ದಾರೆ.

"

ಹೌದು...ಸಚಿವ ಸ್ಥಾನ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಶಾಸಕ ಅರವಿಂದ ಬೆಲ್ಲದ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜೊತೆ ಬೆಳಗಾವಿಯಲ್ಲಿ ಅಮಿತ್ ಶಾ ಅವರನ್ನ ಭೇಟಿ ಮಾಡಿದರು. 

ಸಿಡಿದೆದ್ದ ರೇಣುಕಾಚಾರ್ಯ: ಶಕ್ತಿ ಪ್ರದರ್ಶನಕ್ಕೆ ಮುಂದಾದ ಅತೃಪ್ತ ಶಾಸಕರು

ಈ ವೇಳೆ  ಅಸಮಾಧಾನ ಶಾಸಕರ ಪ್ರತಿನಿಧಿಯಾಗಿ ಹೋಗಿದ್ದ ಶಾಸಕ‌ ಅರವಿಂದ್ ಬೆಲ್ಲದ್‌ಗೆ ದೆಹಲಿಗೆ ಬನ್ನಿ ಮಾತಾಡೋಣ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಅಮಿತ್ ಶಾ ಊಟ ಮಾಡುತ್ತಿದ್ದಂತೆ ಪ್ರತ್ಯೇಕ ಮಾತುಕತೆ ಮಾಡಬೇಕೆಂದುಕೊಂಡು ಕೆಲ ಶಾಸಕರು ಬಂದಿದ್ದರು. ಆದ್ರೆ,  ಅರವಿಂದ್ ಬೆಲ್ಲದ್ ಕೇವಲ ಹಾರ ಹಾಕಿ ವಾಪಾಸ್ ಆಗಿದ್ದು, ಅಸಮಾಧಾನಿತ ಶಾಸಕರುಗಳಿಗೆ ನಿರಾಸೆಯಾಗಿದೆ. 

ಹಾಗಾದ್ರೆ, ಸಿ.ಟಿ.ರವಿ ನೇತೃತ್ವದಲ್ಲಿ ದೆಹಲಿಯಲ್ಲಿ ಶಮನವಾಗುತ್ತಾ ರೆಬಲ್ ಶಾಸಕರ ಅಸಮಾಧಾನ ಎನ್ನುವುದನ್ನು ಕಾದುನೋಡಬೇಕಿದೆ.