Asianet Suvarna News Asianet Suvarna News

ರಾಜ್ಯದಲ್ಲಿ ಸಿಎಂ ಬದಲಾವಣೆ ನಿಶ್ಚಿತ? ಸಂಶಯ ಮೂಡಿಸಿದೆ ಬಿಎಸ್‌ವೈ ನಡೆ!

* ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ನಿಶ್ಚಿತವಾ...?

* ಯಡಿಯೂರಪ್ಪ ಅವರ ಸೂಚನೆಯೊಂದು ಅಂತಹದೊಂದು ಸಂಶಯಕ್ಕೆ ಮುನ್ನುಡಿ....?

* ನಾಯಕತ್ವದ ಬದಲಾವಣೆ ಚರ್ಚೆಯ ಮಧ್ಯೆಯೇ ಸಚಿವಾಲಯದ ಸಿಬ್ಬಂದಿಗಳಿಗೆ ಭೋಜನ ಕೂಟ ಆಯೋಜನೆ

Amid Leadership Changes Rumors CM BS Yediyurappa Arrange Lunch Party For CMO Officials pod
Author
Bangalore, First Published Jul 19, 2021, 11:11 AM IST

ಬೆಂಗಳೂರು(ಜು.19): ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ ವಿಚಾರ ಕಾವು ಪಡೆದಿದೆ. ಬಿಎಸ್‌ವೈ ದೆಹಲಿಯಿಂದ ಮರಳಿದ ಬಳಿಕ ಈ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ಇದಕ್ಕೆ ತಕ್ಕಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ರದ್ದು ಎನ್ನಲಾದ ಆಡಿಯೋ ಕೂಡಾ ಈ ಮಾತಿಗೆ ಮತ್ತಷ್ಟು ಬಲ ಕೊಟ್ಟಿದೆ. ಆದರೀಗ ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿ. ಎಸ್‌ ಯಡಿಯೂರಪ್ಪರವರು ಖುದ್ದು ತಾವೇ ನೀಡಿದ ಸೂಚನೆಯೊಂದು ಈ ಸಂಧಶಯಕ್ಕೆ ಮುನ್ನುಡಿ ಹಾಕಿದೆ.

ಹೌದು ನಾಯಕತ್ವದ ಬದಲಾವಣೆ ಚರ್ಚೆಯ ಮಧ್ಯೆಯೇ ಸಿಎಂ ಬಿ. ಎಸ್. ಯಡಿಯೂರಪ್ಪ ಸಚಿವಾಲಯದ ಸಿಬ್ಬಂದಿಗಳಿಗೆ ಜುಲೈ 15ರಂದು ಭೋಜನ ಕೂಟ ಆಯೋಜಿಸಿದ್ದಾರೆ. ಅಲ್ಲದೇ ಭೋಜನಕೂಟಕ್ಕೆ ಆಗಮಿಸುವಂತೆ ಸಿಎಂ ಕಚೇರಿ ಸಿಬ್ಬಂದಿಗಳಿಗೆ ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ. ಏಕಾಎಕಿ ಯಡಿಯೂರಪ್ಪ ನೀಡಿರುವ ಈ ಆಹ್ವಾನ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡುತ್ತಾರಾ? ಎಂಬ ಅನುಮಾನ ಮೂಡಿಸಿದೆ.

ಸಹಜವಾಗಿ  ಅವಧಿ ಮುಗಿದ ಬಳಿಕ ಸಚಿವಾಲಯದ ಸಿಬ್ಬಂದಿಗಳಿಗೆ ಭೋಜನ ಕೂಟ ಆಯೋಜನೆ ಮಾಡೋದು ಸಂಪ್ರದಾಯ. ಆದರೆ ಅವಧಿಗೆ ಮುನ್ನವೇ ಭೋಜನ ಕೂಟವನ್ನು ಆಯೋಹಿಸಿರುವ ಸಿಎಂ‌ ಕ್ರಮ, ಅವಧಿಗೆ ಮುನ್ನವೇ ಸಿಎಂ‌ ಬದಲಾವಣೆ ಆಗ್ತಾರಾ ಎಂಬ ಸಂಶಯ ಮೂಡಿಸಿದೆ. 

Follow Us:
Download App:
  • android
  • ios