ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸಂಪುಟಕ್ಕೆ ಸರ್ಜರಿ ಸಂಪುಟ ಪುನಾರಚನೆಗೆ ಮುಂದಾದ ಸಿಎಂ ನವೀನ್ ಪಟ್ನಾಯಕ್  ನಾಳೆ 12 ಗಂಟೆಗೆ ಹೊಸ ಸಚಿವರ ಪ್ರಮಾಣವಚನ

ಒಡಿಶಾ(ಜೂ.04): ಒಡಿಶಾದಲ್ಲಿ ರಾಜೀಕಯ ಸಂಚಲನ ಸೃಷ್ಟಿಯಾಗಿದೆ. ನವೀನ್ ಪಟ್ನಾಯಕ್ ನೇೃತ್ವದ ಒಡಿಶಾ ಸರ್ಕಾರ ಸಂಪುಟ ಪುನಾರಚನೆಗೆ ನಿರ್ಧರಿಸಿದೆ. ಪರಿಣಾಮ ಸಂಪುಟದ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ನಾಳೆ(ಜೂ.05) ಮಧ್ಯಾಹ್ನ 12ಗಂಟೆಗೆ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಒಡಿಶಾದ ಆಡಳಿತರೂಢ ಬಿಜು ಜನತಾದಳ (BJD) ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತ ಬ್ರಜ್‌ರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ BJD ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ನವೀನ್ ಪಟ್ನಾಯಕ್ ನಿರ್ಧರಿಸಿದ್ದಾರೆ.

Karnataka Cabinet Expansion: ಬೊಮ್ಮಾಯಿ ಸಂಪುಟ ಸರ್ಜರಿ ನಡೆಯೋದೆ ಡೌಟ್‌?

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೊರತು ಪಡಿಸಿ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ನಾಳೆ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕೆಲ ಸಚಿವರನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ಖಾತೆ ಬದಲಾವಣೆಯಾಗುವ ಸಾಧ್ಯತೆ ಇದೆ. ಇನ್ನು ಹೊಸ ಮುಖಗಳಿಗೆ ಅವಕಾಶ ನೀಡಲು ನವೀನ್ ಪಟ್ನಾಯಕ್ ನಿರ್ದರಿಸಿದ್ದಾರೆ. 

ಒಡಿಶಾ ವಿಧಾನಸಭೆ ಸಂಖ್ಯಾ ಬಲ 147. ಇದರಲ್ಲಿ ಆಡಳಿತರೂಢ ಬಿಜೆಡಿ 113 ಶಾಸಕರನ್ನು ಹೊಂದಿದೆ. ಇತ್ತ ಪ್ರತಿಪಕ್ಷ ಬಿಜೆಪಿ 22 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ 9 ಶಾಸಕರನ್ನು ಹೊಂದಿದೆ.

ಬ್ರಜ್‌ರಾಜನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಡಿ ಅಭ್ಯರ್ಥಿ ಅಲಕಾ ಮೊಹಾಂತಿ 66,000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ, ಹಿರಿಯ ರಾಜಕರಾಣಿ ಕಿಶೋರ್ ಪಟೆಲ್ ವಿರುದ್ಧ ಗೆಲುವು ಸಾಧಿಸಿದ್ದರು. 2019ರ ಬಳಿಕ ನಡೆದ ಒಡಿಶಾ ಉಪ ಚುನಾವಣೆಗಳಲ್ಲಿ ಈ ಗೆಲುವು ಗರಿಷ್ಠ ಅಂತರದ ಗೆಲುವಾಗಿದೆ.

ಯೋಗಿ ಸಂಪುಟದಲ್ಲಿ ಹೊಸ ಮುಸ್ಲಿಂ ಮುಖ, ಪ್ರಮುಖ ಜವಾಬ್ದಾರಿ ಪಡೆದ ಡ್ಯಾನಿಶ್ ಆಜಾದ್ ಅನ್ಸಾರಿ ಯಾರು?

ರಾಜ್ಯಸಭೆಗೆ ಒಡಿಶಾದಿಂದ ಮೂವರು ಸೇರಿ 41 ಮಂದಿ ಅವಿರೋಧ ಆಯ್ಕೆ
ಕಾಂಗ್ರೆಸ್ಸಿನ ಪಿ. ಚಿದಂಬರಂ, ಬಿಜೆಪಿಯ ಸುಮಿತ್ರಾ ವಾಲ್ಮೀಕಿ ಹಾಗೂ ಕವಿತಾ ಪಾಟೀದಾರ್‌, ಸ್ವತಂತ್ರ ಅಭ್ಯರ್ಥಿ ಕಪಿಲ್‌ ಸಿಬಲ್‌ ಹಾಗೂ ಆರ್‌ಜೆಡಿಯ ಮಿಸಾ ಭಾರತಿ ಸೇರಿದಂತೆ 41 ಅಭ್ಯರ್ಥಿಗಳು ಶುಕ್ರವಾರ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

57 ರಾಜ್ಯ ಸಭಾ ಸೀಟುಗಳಿಗಾಗಿ 15 ರಾಜ್ಯಗಳಲ್ಲಿ ಜೂ.10 ರಂದು ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳು ನಾಮಪತ್ರ ಹಿಂಪಡೆದುಕೊಳ್ಳಲು ಶುಕ್ರವಾರ ಕೊನೆಯ ದಿನವಾಗಿತ್ತು. 41 ಅಭ್ಯರ್ಥಿಯ ವಿರುದ್ಧ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರು ಅವಿರೋಧ ಆಯ್ಕೆಯಾಗಿ ಚುನಾವಣೆಗೆ ಮುನ್ನವೇ ವಿಜೇತರೆನಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ 11, ತಮಿಳುನಾಡಿನ 6, ಬಿಹಾರದ 5, ಆಂಧ್ರಪ್ರದೇಶದ 4, ಮಧ್ಯಪ್ರದೇಶ ಹಾಗೂ ಒಡಿಶಾದಲ್ಲಿ ತಲಾ 3, ಪಂಜಾಬ್‌,ಛತ್ತೀಸಗಢ, ತೆಲಂಗಾಣ, ಜಾರ್ಖಂಡಿನಲ್ಲಿ ತಲಾ 2 ಹಾಗೂ ಉತ್ತರಾಖಂಡದಲ್ಲಿ ಒಬ್ಬ ಅಭ್ಯರ್ಥಿ ರಾಜ್ಯಸಭೆಗೆ ಅವಿರೋಧ ಆಯ್ಕೆಯಾಗಿದ್ದಾರೆ.

41 ವಿಜೇತರಲ್ಲಿ 14 ಬಿಜೆಪಿಗರು, ಕಾಂಗ್ರೆಸ್‌ ಹಾಗೂ ವೈಎಸ್‌ಆರ್‌ ಕಾಂಗ್ರೆಸ್ಸಿನ 4 ಅಭ್ಯರ್ಥಿಗಳು, ಬಿಜೆಡಿ ಹಾಗೂ ಡಿಎಂಕೆ ತಲಾ 3 ಅಭ್ಯರ್ಥಿಗಳು, ಆಪ್‌, ಆರ್‌ಜೆಡಿ, ಟಿಆರ್‌ಎಸ್‌, ಎಐಎಡಿಎಂಕೆಯ ತಲಾ 2 ಅಭ್ಯರ್ಥಿಗಳು, ಜೆಎಂಎಂ, ಜೆಡಿಯು, ಆರ್‌ಎಲ್‌ಡಿ, ಎಸ್‌ಪಿಯ ತಲಾ ಒಬ್ಬ ಅಭ್ಯರ್ಥಿ ಹಾಗೂ ಸ್ವತಂತ್ರ ಅಭ್ಯರ್ಥಿ ಕಪಿಲ್‌ ಸಿಬಲ್‌ ಸೇರಿದ್ದಾರೆ.