ಕಾಂಗ್ರೆಸ್ ಹೊರಗಿಟ್ಟು ಮಮತಾ ಬ್ಯಾನರ್ಜಿ ಅಖಿಲೇಶ್ ಹೊಸ ರಂಗ ರಚನೆ, ಮೋದಿ ವಿರುದ್ಧ ಅಸ್ತ್ರ!
ಮುಂಬರುವ ಲೋಕಸಭಾ ಚುನಾವಣೆಗೆ ಈಗಲೇ ತಾಲೀಮು ಆರಂಭಗೊಂಡಿದೆ. ಇದೀಗ ಸಮಾಜವಾದಿ ಪಾರ್ಟಿ ಅಖಿಲೇಶ್ ಯಾದವ್, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೇಟಿಯಾಗಿದ್ದಾರೆ. ಇಷ್ಟೇ ಅಲ್ಲ ಕಾಂಗ್ರೆಸ್ ಹೊರಗಿಟ್ಟು ಹೊಸ ರಂಗ ರಚನೆಗೆ ಮುಂದಾಗಿದ್ದಾರೆ. ಈ ಮೂಲಕ ಮೋದಿ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಲು ಎಲ್ಲಾ ಸಿದ್ಧತೆ ನಡೆದಿದೆ.

ಕೋಲ್ಕತಾ(ಮಾ.17): ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಈಗಾಗಲೇ ತಯಾರಿ ಆರಂಭಿಸಿದೆ. ಇದೀಗ ಬಿಜೆಪಿ ಹಾಗೂ ಮೋದಿ ವಿರುದ್ಧ ಹಲವು ಪಕ್ಷಗಳು ಒಂದಾಗಿ ಹೋರಾಡಲು ಮನಸ್ಸು ಮಾಡಿದೆ. ಒಂದೆಡೆ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಹಾಗೂ ತೆಲಂಗಾಣ ಸಿಎಂ ಕೆಸಿ ರಾವ್ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸ ರಂಗ ರಚನೆ ಮಾಡಲು ಮುಂದಾಗಿದ್ದಾರೆ. ಅಖಿಲೇಶ್ ಯಾದವ್ ಕೋಲ್ಕಾತದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ವಿಶೇಷ ಅಂದರೆ ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಹೊಸ ರಂಗ ರಚಿಸಲು ಮುಂದಾಗಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಹೊಸ ರಂಗ ರಚನೆಯಾಗಲಿದೆ. ಈ ಹೊಸ ರಂಗದಲ್ಲಿ ಬಿಜೆಪಿ ವಿರೋಧಿ ಹಾಗೂ ಕಾಂಗ್ರೆಸ್‌ನಿಂದ ದೂರ ಉಳಿಯಲು ಬಯಸಿರುವ ಪಕ್ಷಗಳು ಕಾಣಿಸಿಕೊಳ್ಳಲಿದೆ. ಇಂದು ಮಹತ್ವದ ಭೇಟಿ ಫಲಪ್ರದವಾಗಿದೆ. ಇದೀಗ ಶೀಘ್ರದಲ್ಲೇ ಮಮತಾ ಬ್ಯಾನರ್ಜಿ ಹಾಗೂ ಅಖಿಲೇಶ್ ಯಾದವ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭೇಟಿಯಾಗಲಿದ್ದಾರೆ. ಒಡಿಶಾದಲ್ಲಿ ಅಧಿಕಾರದಲ್ಲಿರುವ ಬಿಜು ಜನತಾ ದಳದ ಮುಖ್ಯಸ್ಥರಾಗಿರುವ ಪಟ್ನಾಯಕ್ ಕೂಡ ಹೊಸ ರಂಗದಲ್ಲಿ ಸೇರಿಕೊಳ್ಳುವ ಸಾಧ್ಯತೆ ಇದೆ.
ಮಮತಾ ಬ್ಯಾನರ್ಜಿ ಟೀಕಿಸಿದ ಕಾಂಗ್ರೆಸ್ ವಕ್ತಾರ ಬಂಧನ, ಪಶ್ಚಿಮ ಬಂಗಾಳದಲ್ಲಿ ಹೈಡ್ರಾಮ!
ಬಿಜೆಪಿ ಪಕ್ಷ ರಾಹುಲ್ ಗಾಂಧಿಯನ್ನು ಮುಂದಿಟ್ಟುಕೊಂಡು ಇತರ ಪಕ್ಷದ ನಾಯಕರ ಹಣಿಯಲು ಮಾಸ್ಟರ್ ಪ್ಲಾನ್ ರೂಪಿಸಿದೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ಪದೇ ಪದೇ ಎದುರಾಳಿ ನಾಯಕ ಎಂದು ರಾಹುಲ್ ಗಾಂಧಿಯನ್ನು ಗುರುತಿಸುತ್ತಿದೆ. ರಾಹುಲ್ ಗಾಂಧಿಯನ್ನು ಮುಂದಿಟ್ಟುಕೊಂಡು ಬಿಜೆಪಿ ವಿಕ್ಷಗಳಿಗೂ ಠಕ್ಕರ್ ನೀಡುತ್ತಿದೆ ಎಂದು ಇದೀಗ ಮಮತಾ ಬ್ಯಾನರ್ಜಿ ಹಾಗೂ ಅಖಿಲೇಶ್ ಯಾದವ್ ಹೊಸ ರಂಗ ರಚನೆ ಮಾಡಿದ್ದಾರೆ.
ಬಿಜೆಪಿಯ ಅಜೆಂಡಾದಿಂದ ಕಾಂಗ್ರೆಸ್ ವಿಪಕ್ಷ ನಾಯಕ ಎಂದು ಭಾವಿಸಿದ್ದಾರೆ. ರಾಹುಲ್ ಗಾಂಧಿಯೇ ವಿಪಕ್ಷ ನಾಯಕ ಎಂದು ಹೇಳುತ್ತಿದ್ದಾರೆ. ವಿಪಕ್ಷವನ್ನು ಸಮರ್ಥಮವಾಗಿ ಮುನ್ನಡೆಸಬಲ್ಲ ನಾಯಕ ವಿಪಕ್ಷಗಳಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೊರಗಿಟ್ಟು ಹೊಸ ರಂಗ ರಚನೆಯ ಅವಶ್ಯಕತೆಯನ್ನು ಹಲವು ಪಕ್ಷಗಳು ಒತ್ತಿ ಹೇಳಿವೆ. ಇದು 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ದ ಹೋರಾಡಲು ಅತೀ ಅವಶ್ಯಕ ಎಂದು ಹಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ವಿಪಕ್ಷ ಶಕ್ತಿ ಪ್ರದರ್ಶನ: ಬಿಜೆಪಿ ವಿರುದ್ಧ ಪರ್ಯಾಯ ಶಕ್ತಿಗೆ ಕೆಸಿಆರ್ ಯತ್ನ
ಬಿಜೆಪಿ ವಿರುದ್ಧ ಹೋರಾಡಲು ಹೊಸ ರಂಗ ರಚನೆಯಾಗಿದೆ. ಕಾಂಗ್ರೆಸ್‌ನಿಂದ ಈ ಹೊಸ ರಂಗ ದೂರ ಉಳಿಯಲಿದೆ. ಬಿಜೆಪಿ ಸಿಬಿಐ, ಇಡಿ ಸೇರಿದಂತೆ ಹಲವು ಸಂಸ್ಥೆಗಳನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಬಿಜೆಪಿ ಸೇರಿಕೊಳ್ಳುವ ನಾಯಕರ ಕೇಸ್ ವಾಪಸ್ ಪಡೆಯಲಾಗುತ್ತದೆ. ಅವರ ಮೇಲೆ ಯಾವುದೇ ದಾಳಿ ಆಗುವುದಿಲ್ಲ. ಇದರ ವಿರುದ್ಧ ಹೊಸ ರಂಗ ಹೋರಾಟ ಮಾಡಲಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.ಈ ಮೂಲಕ ಆಮ್ ಆದ್ಮಿ ಪಾರ್ಟಿ ಹಾಗೂ ಮನೀಶ್ ಸಿಸೋಡಿಯಾ ವಿರುದ್ಧದ ದಾಳಿಯನ್ನು ಖಂಡಿಸಿದ್ದಾರೆ. ಇಷ್ಟೇ ಅಲ್ಲ ಹೊಸ ರಂಗದಲ್ಲಿ ಆಪ್ ಸೇರಿಸುವ ಸೂಚನೆಯನ್ನು ನೀಡಿದ್ದಾರೆ.