ದೇವರಂತೆ ಹೊತ್ತು ಬೀಗಿದ ಅಪ್ಪ: ಡಿಕೆಶಿಗೆ ಬರ್ತಡೇ ವಿಶ್ ಮಾಡಿದ ಮಗಳು ಐಶ್ವರ್ಯಾ
ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಪುತ್ರಿ ಐಶ್ವರ್ಯಾ 'ನೀ ನನ್ನ ಪರಮಾಪ್ತ' ಎನ್ನುತ್ತಲೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಇಂದು ಹುಟ್ಟುಹಬ್ಬ ಸಂಭ್ರಮ. ಇದಕ್ಕೆ ಅವರ ಪುತ್ರಿ ಐಶ್ವರ್ಯಾ ವಿಶೇಷವಾಗಿ ಶುಭ ಕೋರಿದ್ದಾರೆ.
ಸದಾ ಅಪ್ಪನ ಬಲಗೈಯಂತೆ ಜೊತೆಯಲ್ಲಿರುವ, ಚುನಾವಣೆಗಳಲ್ಲಿ ಅಪ್ಪ ಚಿಕ್ಕಪ್ಪನ ಪರ ಪ್ರಚಾರ ಮಾಡುವ- ಸುಲಲಿತವಾಗಿ ಮಾತಾಡುತ್ತಾ ಎಲ್ಲರ ಗಮನ ಸೆಳೆವ ಐಶ್ವರ್ಯಾ ತಂದೆಯ ಮುದ್ದಿನ ಮಗಳು.
ಇನ್ಸ್ಟಾಗ್ರಾಂನಲ್ಲಿ ಅಪ್ಪನೊಂದಿಗಿನ ತನ್ನ ಫೋಟೋಗಳನ್ನು ಕೊಲ್ಯಾಜ್ ವಿಡಿಯೋ ಮಾಡಿ ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯಗಳು ಅಪ್ಪ ❤️ ಎಂದಿದ್ದಾರೆ. ಈ ವಿಡಿಯೋಗೆ 'ದೇವರಂತೆ ನನ್ನ ಹೊತ್ತು ಬೀಗಿದಾತ
ಕಾಲಚಕ್ರ ಸುಳಿಗೆ ಸಿಲುಕುತಾ ಮಾಗಿದ
ಸೂರ್ಯನನ್ನೇ ಮರೆ ಮಾಡಿ ನೆರಳಾದ ಸಂತ
ಅಪ್ಪ ನನ್ನ ಅಪ್ಪ ನೀ ತುಂಬಾ ಅಪರೂಪ
ಅಪ್ಪ ನೀ ನನ್ನ ಪರಮಾಪ್ತ'
ಹಾಡನ್ನು ಹಿನ್ನೆಲೆಯಾಗಿ ಬಳಸಿದ್ದಾರೆ. ಫೋಟೋಗಳಲ್ಲಿ ಅಪ್ಪ ಮಗಳ ಬಾಂಧವ್ಯವನ್ನು ಕಾಣಬಹುದು.
ಅಬ್ಬಬ್ಬಾ! ಯಶ್ ನಟಿಸ್ತಿರೋ ರಾಮಾಯಣ ಭಾಗ 1 ಬಜೆಟ್ ಕೇಳಿದ್ರೆ ಹೌಹಾರ್ತೀರಿ! ಯಾವಾಗ ಬಿಡುಗಡೆ?
ಕಳೆದ ವರ್ಷ ಡಿಕೆಶಿ ಹುಟ್ಟುಹಬ್ಬದಂದು, 'ನೀವೊಬ್ಬರೇ ಹೀರೋ, ಯಾವಾಗಲೂ ಹೀರೋ ಆಗಿಯೇ ಇರುತ್ತೀರಿ' ಎಂದು ಐಶ್ವರ್ಯಾ ಬರೆದುಕೊಂಡಿದ್ದನ್ನು ಈಗ ನೆನಪಿಸಿಕೊಳ್ಳಬಹುದು.
ಅಪ್ಪನ ಮುದ್ದಿನ ಮಗಳಾಗಿರುವ ಐಶ್ವರ್ಯಾ, ನನ್ನನ್ನು ಗಂಡುಮಗನಂತೆ ಅಪ್ಪ ಬೆಳೆಸಿದ್ದಾರೆ. ನಾನು ಪ್ರತಿದಿನವೂ ರಾಜಕುಮಾರಿಯೇ, ನನ್ನನ್ನು ಹಾಗೆಯೇ ನೋಡಿಕೊಳ್ಳಲಾಗುತ್ತದೆ ಎಂದೊಮ್ಮೆ ಹೇಳಿದ್ದರು.
ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯನನ್ನು ವರಿಸಿರುವ ಐಶ್ವರ್ಯಾ ಡಿಕೆಶಿಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನು ಹೊತ್ತು ಸಮರ್ಥವಾಗಿ ನಡೆಸುತ್ತಿದ್ದಾರೆ. ಜೊತೆಗೆ, ಪ್ರೇರಣಾದಾಯಕ ಭಾಷಣಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ.