Asianet Suvarna News Asianet Suvarna News

UP Elections 2022 ಉ.ಪ್ರದೇಶದಲ್ಲಿ ನಡೆಯದ ಓವೈಸಿ ಮ್ಯಾಜಿಕ್‌

ಬಿಹಾರ, ಮಹಾರಾಷ್ಟ್ರದಂತೆ ಒಲಿಯಲ್ಲಿಲ್ಲ ಯುಪಿ

100 ಕಡೆ ಸ್ಪರ್ಧಿಸಿದರೂ ಒಂದರಲ್ಲೂ ಗೆಲ್ಲಲಿಲ್ಲ

2017ರಲ್ಲೂ ಸ್ಪರ್ಧೆ ಮಾಡಿದ್ದ 38 ಕ್ಷೇತ್ರಗಳನ್ನೂ ಸೋಲು

aimim chief asaduddin owaisi rejected again in up none of the 103 candidates won san
Author
Bengaluru, First Published Mar 11, 2022, 4:45 AM IST

ಲಖನೌ (ಮಾ.10): ಉತ್ತರಪ್ರದೇಶ (Uttar Pradesh) ರಾಜಕೀಯದಲ್ಲಿ ಹೊಸ ಶಕ್ತಿಯಾಗಿ ಉದಯಿಸುವ ಎಐಎಂಐಎಂ (AIMIM) ಪಕ್ಷದ ನಾಯಕ ಅಸಾಸುದ್ದೀನ್‌ ಒವೈಸಿ (Asaduddin Owaisi) ಅವರ ಕನಸಿಗೆ ಮತ್ತೆ ದೊಡ್ಡ ಪೆಟ್ಟು ಬಿದ್ದಿದೆ. ಹಲವು ಸಣ್ಣ ಪುಟ್ಟಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದ ಒವೈಸಿ ಅವರ ಪಕ್ಷ ಸ್ವತಃ 100 ಸ್ಥಾನಗಳಲ್ಲಿ ಕಣಕ್ಕೆ ಇಳಿದಿತ್ತು. ಆದರೆ ಒಂದೇ ಒಂದು ಸ್ಥಾನದಲ್ಲೂ ಅವರ ಅಭ್ಯರ್ಥಿಗಳು ಜಯ ಗಳಿಸಿಲ್ಲ. ಪಕ್ಷ ಕೇವಲ ಶೇ.0.43ರಷ್ಟುಮತ ಪಡೆದುಕೊಂಡಿದೆ.

ಈ ಬಾರಿಯ ಚುನಾವಣೆಯಲ್ಲಿ ಗೆಲುವು ಕಾಣುವ ದೃಷ್ಟಿಯಿಂದ ಓವೈಸಿ ಭಾರಿ ಪ್ರಚಾರ ನಡೆಸಿದ್ದರು. ಆಜಂಗಢ ಫಾರ್ಮಲದಿಂದ ಉತ್ತರ ಪ್ರದೇಶಲ್ಲಿ ಜಯಗಳಿಸುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದರು. ಜೊತೆಗೆ 11 ಹಿಂದೂಗಳಿಗೆ, ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದವರಿಗೂ ಟಿಕೆಟ್‌ ನೀಡಿ ಹೊಸ ಪ್ರಯೋಗ ಮಾಡಿದ್ದರು. ಅದು ಫಲ ಕೊಟ್ಟಿಲ್ಲ. ಜೊತೆಗೆ ಒವೈಸಿ ಬಹುವಾಗಿ ನಂಬಿದ್ದ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತ್ತು ಯಾದವ ಮತಗಳನ್ನು ಗಳಿಸಿಕೊಳ್ಳುವಲ್ಲಿ ಎಂದಿನಂತೆ ಸಮಾಜವಾದಿ ಪಕ್ಷ (samajwadi part )ಯಶಸ್ವಿಯಾದ ಕಾರಣ ಐಎಂಐ ದಯನೀಯ ಸೋಲು ಕಂಡಿದೆ.

2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ 38 ಸ್ಥಾನಗಳಲ್ಲಿ ಎಂಐಎಂ ಸ್ಪರ್ಧಿಸಿತ್ತಾದರೂ, ಒಂದೂ ಸ್ಥಾನ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ವರ್ಷವೂ ಅದು ಪುನರಾವರ್ತನೆಯಾಗಿದೆ. ಬಿಹಾರ (Bihar), ಮಹಾರಾಷ್ಟ್ರದಲ್ಲಿ (Maharastra) ಯಶಸ್ಸು ಉತ್ತರಪ್ರದೇಶದಲ್ಲೂ ಸಿಗಬಹುದು ಎಂಬ ಒವೈಸಿ ಕನಸು ಈ ಬಾರಿಯೂ ನನಸಾಗದೇ ಹೋಗಿದೆ.

ಯೋಗಿ ಸಂಪುಟದ 10 ಸಚಿವರಿಗೆ ಸೋಲು:  ಸಿಎಂ ಯೋಗಿ ಆದಿತ್ಯನಾಥ್‌ (Yogi adityanath) ಸಚಿವ ಸಂಪುಟದ 10 ಸಚಿವರು ಈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಅದರಲ್ಲೂ ಉಪ ಮುಖ್ಯಮಂತ್ರಿಯಾಗಿದ್ದ ಕೇಶವ್‌ ಪ್ರಸಾದ್‌ ಮೌರ್ಯ ಅವರೇ 7337 ಮತಗಳ ಅಂತರದಿಂದ ಆಘಾತಕಾರಿ ಸೋಲು ಕಂಡಿದ್ದಾರೆ.

ಸಿಎಂ ಯೋಗಿಗೆ 1ಲಕ್ಷ ಮತಗಳ ಅಂತರ ವಿಜಯ
ಲಖನೌ: ಇದೇ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಗೋರಕ್‌ಪುರ ಕ್ಷೇತ್ರದಲ್ಲಿ 1.03 ಲಕ್ಷಗಳ ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಶುಭವತಿ ಉಪೇಂದ್ರ ದತ್ತ ಶುಕ್ಲಾ ಅವರನ್ನು ಸೋಲಿಸಿದ್ದಾರೆ.

ಪಂಜಾಬ್‌ನಲ್ಲಿ ಆಪ್ ಕ್ಲೀನ್ ಸ್ವೀಪ್: ವಿಜಯೋತ್ಸವದಲ್ಲಿ ಕೇಜ್ರಿ ಆಡಿದ ಮಾತಿನ ಸತ್ಯಾಸತ್ಯತೆ ಏನು?
ಬಿಜೆಪಿಯ ಶರ್ಮಾಗೆ 2.14 ಲಕ್ಷ ಮತಗಳ ಅಂತರದ ಗೆಲುವು
ಗಾಜಿಯಾಬಾದ್‌:
ಉತ್ತರಪ್ರದೇಶದ ಗಾಜಿಯಾಬಾದ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸುನಿಲ್‌ ಕುಮಾರ್‌ ಶರ್ಮಾ (sunil kumar sharma)  ದಾಖಲೆಯ 2.14 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಶರ್ಮಾಗೆ 3.22 ಲಕ್ಷ ಮತ ಸಿಕ್ಕಿದ್ದರೆ, ಅವರ ಪ್ರತಿಸ್ಪರ್ಧಿ ಎಸ್‌ಪಿಯ ಅಮರ್‌ಪಾಲ್‌ಗೆ 1.08 ಲಕ್ಷ ಮತ ಸಿಕ್ಕಿದೆ.

Election Result 2022 ಮೈತ್ರಿ ಇಲ್ಲದೆ 20 ಕ್ಷೇತ್ರದಲ್ಲಿ ಗೆಲುವು, ಗೋವಾ ಸರ್ಕಾರ ರಚನೆಗೆ ಬಿಜೆಪಿ ಮಹೂರ್ತ ಫಿಕ್ಸ್!
ಯುಪಿ: 37 ವರ್ಷಗಳ ಬಳಿಕ ಆಡಳಿತ ಪಕ್ಷಕ್ಕೇ ಅಧಿಕಾರ
ಉತ್ತರಪ್ರದೇಶದಲ್ಲಿ ಸತತ ಎರಡನೇ ಬಾರಿ ಅಧಿಕಾರಕ್ಕೇರಿರುವ ಬಿಜೆಪಿ ಹೊಸ ದಾಖಲೆ ಬರೆದಿದೆ. 37 ವರ್ಷಗಳ ಇದೇ ಮೊದಲ ಬಾರಿಗೆ ಆಡಳಿತ ಪಕ್ಷವೇ ಮತ್ತೆ ಅಧಿಕಾರಕ್ಕೇರಿದೆ. 1985ರಿಂದ ಇಲ್ಲಿಯವರೆಗೂ ಉತ್ತರಪ್ರದೇಶದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತ ಪಕ್ಷ ಬದಲಾಗುತ್ತಲೇ ಬಂದಿತ್ತು. ಆದರೆ ಇದೀಗ ಆಡಳಿತ ಪಕ್ಷವೇ ಮತ್ತೆ ಆಡಳಿತದ ಚುಕ್ಕಾಣಿ ಹಿಡಿದಿದೆ. ಇನ್ನು ಯುಪಿಯಲ್ಲಿ ಬಿಜೆಪಿ ಸತತ ಎರಡನೇ ಬಾರಿ ಅಧಿಕಾರಕ್ಕೇರಿದ್ದೂ ಇದೇ ಮೊದಲು. ಈ ಹಿಂದೆ ಯುಪಿಯಲ್ಲಿ ಬಿಜೆಪಿ ಮೂರು ಬಾರಿ 1991, 1997 ಮತ್ತು 2017ರಲ್ಲಿ ಅಧಿಕಾರಕ್ಕೇರಿತ್ತು. ಇದೀಗ ಮತ್ತೊಮ್ಮೆ ಗದ್ದುಗೆ ಹಿಡಿದಿದ್ದಷ್ಟೇ ಅಲ್ಲದೇ 37 ವರ್ಷಗಳ ಬಳಿಕ ಸತತವಾಗಿ ಅಧಿಕಾರಕ್ಕೇರಿದ ಪಕ್ಷವಾಗಿ ಹೊರಹೊಮ್ಮಿದೆ.

Follow Us:
Download App:
  • android
  • ios