ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ನನ್ನ ಮುಖ ನೋಡಿ ಮತ ನೀಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್‌ ಶೋ ನಡೆಸಿದರು. ಎಷ್ಟುಸಲ ನಿಮ್ಮ ಮುಖ ನೋಡಬೇಕು.

ಬೆಂಗಳೂರು (ಮೇ.15): ‘ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ನನ್ನ ಮುಖ ನೋಡಿ ಮತ ನೀಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್‌ ಶೋ ನಡೆಸಿದರು. ಎಷ್ಟು ಸಲ ನಿಮ್ಮ ಮುಖ ನೋಡಬೇಕು. ನಿಮ್ಮ ಮುಖ ನೋಡಿ ನೋಡಿ ನಮಗೆ ಬೇಸರವಾಗಿದೆ ಎಂದು ಕರ್ನಾಟಕ ಜನತೆ ರಾಜ್ಯದ ಶ್ರೇಯಸ್ಸಿಗೆ ಮತ ಚಲಾಯಿಸಿದ್ದಾರೆ. ತನ್ಮೂಲಕ 35 ವರ್ಷಗಳಲ್ಲೇ ಅತಿ ಹೆಚ್ಚು ಬಹುಮತದಿಂದ ಗೆಲ್ಲಿಸಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಭಾರತ್‌ ಜೋಡೋ ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಗುಜರಾತ್‌ ಚುನಾವಣಾ ಪ್ರಚಾರದ ವೇಳೆ ನಾನು ಗುಜರಾತಿನ ಭೂಮಿ ಪುತ್ರ ಎಂದು ಮತ ಕೇಳಿದ್ದರು. ಗುಜರಾತ್‌ನಲ್ಲಿ ನಿಮಗೆ ಗುಜರಾತಿಗರು ಸ್ವಾಭಿಮಾನದಿಂದ ಮತ ನೀಡಿದ್ದರು. ಈಗ ಕರ್ನಾಟಕದಲ್ಲಿ ನನ್ನ ಸರದಿ ಬಂದಿದೆ. ಕರ್ನಾಟಕದ ಜನತೆ ನನಗೆ ಮತ ನೀಡುತ್ತಾರೆಯೇ ಹೊರತು ನಿಮಗೆ ನೀಡುವುದಿಲ್ಲ ಎಂದು ಮೋದಿ ಅವರಿಗೆ ಹೇಳಿದ್ದೆ. ಅದರಂತೆ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.

ಸಿದ್ದು VS ಡಿಕೆಶಿ: ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್‌ ಅಂಗಳಕ್ಕೆ

ಸಾಮೂಹಿಕ ನಾಯಕತ್ವದ ಫಲ: ಈ ಚುನಾವಣೆಯ ಗೆಲುವು ನನ್ನದು, ನನ್ನಿಂದ ಎಂಬುದು ಸರಿಯಲ್ಲ. ನಾನು ಇಲ್ಲದಿದ್ದರೆ ಮತ್ತೊಬ್ಬರು, ನೀವು ಇಲ್ಲದಿದ್ದರೆ ಮತ್ತೊಬ್ಬರು ಜವಾಬ್ದಾರಿ ನಿಭಾಯಿಸುತ್ತಾರೆ. ಇಂದಿನ ವಿಜಯ ಜನರ ವಿಜಯವೇ ಹೊರತು ಯಾವುದೇ ಒಬ್ಬ ವ್ಯಕ್ತಿಯ ಗೆಲುವಲ್ಲ. ಸಾಮೂಹಿಕ ನಾಯಕತ್ವದಿಂದ ಕೆಲಸ ಮಾಡಿದ್ದಕ್ಕೆ ಈ ಫಲಿತಾಂಶ ಬಂದಿದೆ. ನಾವು ಈಗಲೂ ಬೇರೆ ಬೇರೆಯಾಗಿಯೇ ಇದ್ದರೆ ಕಳೆದ ಬಾರಿ ಹೇಗೆ ಆಗಿತ್ತೋ ಈಗಲೂ ಅದೇ ಆಗುತ್ತಿತ್ತು ಎಂದು ಹೇಳಿದರು.

ಮೊದಲ ಸಂಪುಟದಲ್ಲೇ ಗ್ಯಾರಂಟಿ ಈಡೇರಿಕೆ: ರಾಜ್ಯದ ಜನತೆ ಕಾಂಗ್ರೆಸ್‌ ಮೇಲೆ ನಂಬಿಕೆಯಿಟ್ಟು ಮತ ನೀಡಿದ್ದಾರೆ. ಜನರಿಗೆ ವಿಶ್ವಾಸ ನೀಡಬೇಕಾದರೆ ಕೊಟ್ಟಗ್ಯಾರಂಟಿಯನ್ನು ಅನುಷ್ಠಾನಕ್ಕೆ ತರಬೇಕು. ಮೊದಲ ಸಂಪುಟದಲ್ಲೇ ಅದನ್ನು ಮಾಡಬೇಕು ಎಂದು ಕರೆ ನೀಡಿದರು.

ಸಿಎಂ ಹುದ್ದೆಗೆ ಡಿ.ಕೆ.ಶಿವಕುಮಾರ್‌-ಸಿದ್ದರಾಮಯ್ಯ ಬಿಗಿಪಟ್ಟು: ನೂತನ ಸಿಎಂ ಆಯ್ಕೆ ಕಾಂಗ್ರೆಸ್ಸಿಗೆ ಕಗ್ಗಂಟು

ರಾಗಾ ಹೋದ ಕ್ಷೇತ್ರಗಳಲ್ಲಿ ಶೇ.99 ಗೆಲುವು: ರಾಜ್ಯದ ಗೆಲುವಿನಲ್ಲಿ ಮೇಕೆದಾಟು ಪಾದಯಾತ್ರೆ ಕೂಡ ಮಹತ್ವದ್ದು. ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ಗಾಂಧಿ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದರು. ಅವರು ಸಂಚರಿಸಿದ ಮಾರ್ಗದಲ್ಲಿ ಶೇ.99 ರಷ್ಟುಸೀಟು ಗೆದ್ದಿದ್ದೇವೆ. ಇದು ಎಐಸಿಸಿ ಅಧ್ಯಕ್ಷನಾಗಿ ನನಗೂ ಹೆಮ್ಮೆ ಎಂದು ಹೇಳಿದರು.