ದೇಶದಲ್ಲಿ ಹೊಸ ಸಂವಿಧಾನ ರಚನೆಗೆ ಸಂಚು ನಡೀತಿದೆ; ಮೋದಿ ಮೇಲ್ನೋಟಕ್ಕೆ ರಕ್ಷಿಸುವ ಮಾತನಾಡ್ತಾರೆ: ಮಲ್ಲಿಕಾರ್ಜುನ ಖರ್ಗೆ
ದೇಶದಲ್ಲಿ ಈಗಿರುವ ಸಂವಿಧಾನವನ್ನು ಅಳಿಸಿಹಾಕಿ ಹೊಸ ಸಂವಿಧಾನವನ್ನು ರಚಿಸಲು ಸಂಚು ನಡೆಯುತ್ತಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಮೇಲ್ನೋಟಕ್ಕೆ ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೆಂಗಳೂರು (ಫೆ.25): ದೇಶದಲ್ಲಿರುವ ಅಸಮಾನತೆಯನ್ನು ತೊಡೆದುಹಾಕುವ ಬೇಡಿಕೆಯನ್ನು ಕೆಲವರು ತಿರುಗಿಮುರುಗಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದಾರೆ. ಕೆಲವು ನಮ್ಮ ನಮ್ಮಲ್ಲಿಯೇ ಒಳಗೊಳಗೆ ಜಗಳ ತಂದಿಡಲು ಮುಂದಾಗಿದ್ದಾರೆ. ಇದರೊಂದಿಗೆ ಸಂವಿಧಾನಕ್ಕೆ ತಿಲಾಂಜಲಿ ಇಟ್ಟು, ಬೇರೆ ಸಂವಿಧಾನ ರೂಪಿಸಲು ಸಂಚು ನಡೆಯುತ್ತಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಮೇಲ್ನೋಟಕ್ಕೆ ಸಂವಿಧಾನ ರಕ್ಷಣೆ ಮಾಡೋ ರೀತಿ ಮಾತನಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶದಲ್ಲಿ ಮಾತನಾಡಿದ ಅವರು, ಅಸಮಾನತೆ ತೊಡೆದುಹಾಕುವ ಬೇಡಿಕೆಯನ್ನು ಕೆಲವರು ತಿರುಗಿಮುರುಗಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದಾರೆ. ಈಗಾಗಲೇ ಅನೇಕ ದೇಶದಲ್ಲಿ ಡಿಕ್ಟೇಟರ್ ಶಿಪ್ (ಸರ್ವಾಧಿಕಾರ) ಬಂದಿದೆ. ಇಲ್ಲಿ ಕೇಳುವವರು ಯಾರೂ ಇಲ್ಲ. ಇದನ್ನು ಜನ ಅರಿತುಕೊಳ್ಳಬೇಕು. ಕೆಲವು ಜನ ನಮ್ಮಲ್ಲಿ ಒಳಗೊಳಗೆ ಜಗಳ ತಂದಿಡಲು ಮುಂದಾಗಿದ್ದಾರೆ. ಈ ಪ್ರಯತ್ನಗಳು ನಡೆಯುತ್ತಿವೆ. ಮುಖ್ಯವಾಗಿ ಸಂವಿಧಾನಕ್ಕೆ ತಿಲಾಂಜಲಿ ಇಟ್ಟು, ಬೇರೆ ಸಂವಿಧಾನ ರೂಪಿಸಲು ಸಂಚು ನಡೆಯುತ್ತಿದೆ. ಮೇಲ್ನೋಟಕ್ಕೆ ಮೋದಿ ಸಂವಿಧಾನ ರಕ್ಷಣೆ ಮಾಡೋ ರೀತಿ ಮಾತಾಡ್ತಾರೆ ಎಂದು ಆರೋಪಿಸಿದರು.
Breaking: ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಹೃದಯಾಘಾತಕ್ಕೆ ಬಲಿ
ದೇಶದಲ್ಲಿ ಸಂವಿಧಾನ ಅಳಿಸಬೇಕು, ಬದಲಾಯಿಸಬೇಕು ಅಂತ ಬಹಳ ಜನ ಪ್ರಯತ್ನ ಮಾಡ್ತಾ ಇದಾರೆ. ಮುಂದಿನ ಚುನಾವಣೆಯಲ್ಲಿ ನೀವೆಲ್ಲ ದಿಟ್ಟ ನಿರ್ಧಾರ ಮಾಡದೇ ಹೋದರೆ ದೇಶದಲ್ಲಿ ಡಿಕ್ಟೇಟರ್ ಶಿಪ್ (ಸರ್ವಾಧಿಕಾರ) ಮಾಡುವವರೇ ಅಧಿಕಾರಕ್ಕೆ ಬರ್ತಾರೆ. ನಿಮಗೆ ಡಿಕ್ಟೇಟರ್ ಶಿಪ್ ಬೇಕೋ, ಸಂವಿಧಾನ ಬೇಕೋ? ಯಾವುದೇ ಒಬ್ಬ ವ್ಯಕ್ತಿಗೆ ಒಂದು ಓಟು, ಒಂದೇ ಬೆಲೆ ನಮ್ಮ ಸಂವಿಧಾನದಲ್ಲಿ ಇದೆ. ಇಡೀ ಪ್ರಪಂಚದಲ್ಲಿ ಹೆಣ್ಣು ಮಕ್ಕಳಿಗೆ ಓಟು ಹಾಕುವ ಅಧಿಕಾರ ಇರಲಿಲ್ಲ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಮತದಾನದ ಹಕ್ಕು ತಂದರು ಎಂಬ ಮಾಹಿತಿ ನೀಡಿದರು.
ಇವರು ವಿರೋಧ ಪಕ್ಷಗಳ ಶಾಸಕರನ್ನು ಖರೀದಿಸುತ್ತಾರೆ. ಜನರಿಂದ ಆಯ್ಕೆಯಾದ ಶಾಸಕರನ್ನು ಹೀಗೆ ಖರೀದಿ ಮಾಡೋದು ಎಷ್ಟು ಸರಿ.? ಇದರಿಂದ ಸಂವಿಧಾನಕ್ಕೆ ಹೊಡೆತ ಬೀಳುತ್ತಿದೆ. ಇದೇ ಚಟ ಮುಂದುವರೆದರೆ ಮುಂದೆ ಈ ದೇಶದಲ್ಲಿ ಡಿಕ್ಟೇಟರ್ ಶಿಪ್ ಬಂದೇ ಬರುತ್ತದೆ. ಸಂವಿಧಾನ ಉಳಿದರೆ ದೇಶದಲ್ಲಿ ಐಕ್ಯತೆ ಉಳಿಯುತ್ತದೆ. ಪ್ರಜಾಪ್ರಭುತ್ವ ಉಳಿದರೆ ದೇಶದ ಎಲ್ಲರೂ ಸಮೃದ್ದಿಯಿಂದ ಬಾಳುತ್ತಾರೆ. ಆದರೆ ಸಂವಿಧಾನದ ಬಗ್ಗೆ ಕಾಳಜಿ ಇಟ್ಟು ಕೆಲಸ ಮಾಡುವ ಸರ್ಕಾರ ಕೇಂದ್ರದಲ್ಲಿ ಇಲ್ಲ. ಎಲ್ಲರೂ ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ನನ್ನ ಕೊನೆಯ ರಕ್ತದ ಹನಿ ಇರುವವರೆಗೂ ಸಂವಿಧಾನ ರಕ್ಷಣೆಗೆ ಸಿದ್ದ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳುತ್ತಿದ್ದರು. ಆದರೆ, ಇಲ್ಲಿ ರಕ್ತ ಕೊಡುವವರು ಯಾರಿದ್ದಾರೆ. ಮೋದಿಯಂತೂ ರಕ್ತ ಹೀರಲು ನಿಂತಿದ್ದಾರೆ. ನಾನು ರಾಜಕೀಯ ಮಾತಾಡ್ತಾ ಇಲ್ಲ. ಈಗ ನನ್ನ ಗ್ಯಾರಂಟಿ, ಅಂತ ಹೇಳ್ತಾರೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ನನ್ನ ಗ್ಯಾರಂಟಿ ಅಂತ ಹೇಳಿಕೊಳ್ತಾ ಇದಾರೆ. ನೀವು ದೇವರ ಪೂಜೆ ಮಾಡೋದಿದ್ರೆ ಮಾಡಿಕೊಳ್ಳಿ. ಆದರೆ, ವ್ಯಕ್ತಿ ಪೂಜೆ ಮಾಡಬೇಡಿ. ಸಂವಿಧಾನ ಯಾರಿಗಾಗಿ ಇದೆ. ದೇಶದ ಎಲ್ಲ ವರ್ಗದ ಜನರಿಗಾಗಿ ಇದೆ. ಕೇವಲ ಶೆಡ್ಯೂಲ್ ಕಾಸ್ಟ್ ಗಾಗಿ ಮಾತ್ರ ಅಲ್ಲ ಎಂದರು.
ಸುಳ್ಳಿನ ಬಿಜೆಪಿ ಕಾರ್ಖಾನೆಗೆ ಅಭಿವೃದ್ಧಿ ಉತ್ತರ: ಸಿಎಂ ಸಿದ್ದರಾಮಯ್ಯ
ದೇಶದ ಜನ ಮನುಷ್ಯರಾಗಲು ಸಂವಿಧಾನ ಅಗತ್ಯ:
ಕೆಲವರಿಗೆ ಬೈಬಲ್, ಕೆಲವರಿಗೆ ಖುರಾನ್, ಕೆಲವರಿಗೆ ಭಗವದ್ಗೀತೆ ಇಷ್ಟ ಇರಬಹುದು. ಆದರೆ ಇಡೀ ದೇಶದ ಜನ ಮನುಷ್ಯರಾಗಲು ಸಂವಿಧಾನ ಅಗತ್ಯವಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕು. ಇಲ್ಲವಾದ್ರೆ ನಿಮ್ಮನ್ನು ಕೇಳುವವರು ಇರಲ್ಲ. ಇಲ್ಲವಾದ್ರೆ 5000 ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ.
- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ