Asianet Suvarna News Asianet Suvarna News

ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಮೋದಿ-ಶಾ ಹೊಸ ಅಸ್ತ್ರ..!

ಈ ಬಾರಿಯೂ ಅಧಿಕಾರಿದ ಚುಕ್ಕಾಣಿ ಹಿಡಿಯಲು ಬೇಕಾದ ಎಲ್ಲಾ ಎಲೆಕ್ಷನ್ ತಂತ್ರಗಳನ್ನ ಒಂದೊಂದಾಗಿಯೇ ಹೆಣೆಯುತ್ತಿದೆ.ಇದಕ್ಕೆ ಪೂರಕವೆಂಬಂತೆ ಲೋಕಸಭೆ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಮೋದಿ-ಶಾ ಹೊಸ ಅಸ್ತ್ರ ರೂಪಿಸಿದ್ದಾರೆ. ಏನದು ಅಸ್ತ್ರ? 

Ahead of LS Polls, BJP Likey To Appoint Karnataka Dalit MLA As Floor Leader
Author
Bengaluru, First Published Nov 22, 2018, 3:39 PM IST

ಬೆಂಗಳೂರು,[ನ.22]: ಮುಂಬರುವ ಲೋಕಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಈ ಬಾರಿಯೂ ಅಧಿಕಾರಿದ ಚುಕ್ಕಾಣಿ ಹಿಡಿಯಲು ಬೇಕಾದ ಎಲ್ಲಾ ಎಲೆಕ್ಷನ್ ತಂತ್ರಗಳನ್ನ ಒಂದೊಂದಾಗಿಯೇ ಹೆಣೆಯುತ್ತಿದೆ.

ಅದರಲ್ಲಿ ಮುಖ್ಯವಾಗಿ ಈ ಬಾರಿ ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಮೋದಿ ಹಾಗೂ ಅಮಿತ್ ಶಾ, 28 ಕ್ಷೇತ್ರಗಳ ಪೈಕಿ ಕನಿಷ್ಠ ಏನಿಲ್ಲ ಅಂದ್ರೂ 20 ಸ್ಥಾನಗಳಲ್ಲಿ ಗೆಲ್ಲಬೇಕೆಂದು ರಾಜ್ಯ ಬಿಜೆಪಿಗೆ ಸಂದೇಶ ರವಾನಿಸಿದ್ದು, ಇದಕ್ಕೆ ಬೇಕಾದ ಕಾರ್ಯ ತಂತ್ರಗಳನ್ನ ಸಿದ್ಧತೆ ಮಾಡಿಕೊಳ್ಳುವಂತೆ ಹೈಕಮಾಂಡ್ ಸಂದೇಶ ರವಾನಿಸಿದೆ.

ಲೋಕಸಭಾ ಚುನಾವಣೆ: ರಾಜ್ಯದ 28 ಕ್ಷೇತ್ರಗಳಿಗೂ ಬಿಜೆಪಿ ಉಸ್ತುವಾರಿಗಳ ನೇಮಕ

ಹೈಕಮಾಂಡ್ ಆದೇಶದ ಮೇರೆಗೆ ಈಗಾಗಲೇ 28 ಕ್ಷೇತ್ರಗಳಿಗೂ ರಾಜ್ಯ ಬಿಜೆಪಿ ಪ್ರಬಾರಿ ಹಾಗೂ ಸಂಚಾಲಕರನ್ನ ನೇಮಿಸಿ ಆದೇಶ ಹೊರಡಿಸಿದೆ.  ಇದರ ಬೆನ್ನಲ್ಲಿಯೇ ಇದೀಗ ಅಮಿತ್ ಶಾ ಅವರು ಲೋಕಸಭಾ ಚುನಾವಣೆಯಲ್ಲಿ ದಲಿತ, ಲಿಂಗಾಯತ ಜಾತಿ ಸಮೀಕರಣಕ್ಕೆ ಮುಂದಾಗಿದ್ದಾರೆ. 

ಲಿಂಗಾಯತ ವೋಟ್ ಗಳನ್ನ ಸೆಳೆಯಲು ಲೋಕಸಭಾ ಚುನಾವಣೆಯವರೆಗೂ ಬಿ.ಎಸ್.ಯಡಿಯೂರಪ್ಪ ಅವರನ್ನ ಮುಂದುವರಿಸಲು ತೀರ್ಮಾನಿಸಿದ್ದಾರೆ. ಇನ್ನು ಕಾಂಗ್ರೆಸ್​​ ಅಹಿಂದ ಅಸ್ತ್ರಕ್ಕೆ ಪ್ರತ್ಯಸ್ತ್ರ ಬಿಡಲು  ಯಡಿಯೂರಪ್ಪರನ್ನು ಮುಂದಿಟ್ಟುಕೊಂಡೇ ದಲಿತ ನಾಯಕನಿಗೆ ಪಟ್ಟ ಕಟ್ಟುವ ಚಿಂತನೆ ನಡೆದಿದೆ.

ದಲಿತ ವೋಟ್ ಬ್ಯಾಂಕ್ ಸೆಳೆಯಲು ದಲಿತ ನಾಯಕ ಗೋವಿಂದ ಕಾರಜೋಳ ಅವರಿಗೆ ವಿಧಾನಸಭೆ ಪ್ರತಿಪಕ್ಷ ಸ್ಥಾನ ನೀಡಲು ಪಕ್ಷದಲ್ಲಿ ಚಿಂತನೆ ನಡೆಸಿದ್ದಾರೆ. ದಲಿತ ಎಡ ವರ್ಗದ ಮತಗಳ ಕ್ರೋಢಿಕರಣಕ್ಕಾಗಿ ಕಾರಜೋಳಗೆ ಪಟ್ಟ ಕಟ್ಟುವ ಪ್ಲಾನ್​ ಮಾಡಲಾಗಿದ್ದು, ಈ ಬಗ್ಗೆ ಗೋವಿಂದ ಕಾರಜೋಳಗೂ ಸೂಕ್ಷ್ಮವಾಗಿ ಪಕ್ಷದ ವರಿಷ್ಠರು ಮಾಹಿತಿ ನೀಡಿದ್ದಾರೆ.

ಕೇಂದ್ರ ನಾಯಕರ ಚಿಂತನೆ ಬಗ್ಗೆ ಸತಃ ಕಾರಜೋಳ ಅವರೇ ತಮ್ಮ ಆಪ್ತರ ಬಳಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಅವರ ದಲಿತಾಸ್ತ್ರ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

Follow Us:
Download App:
  • android
  • ios