ಚಿಕ್ಕೋಡಿ (ಫೆ.17): 5 ಜನ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಬರುವ ವಿಚಾರ ಮಾತನಾಡಿದ್ದೆ. ಹೆಸರು ಬಹಿರಂಗಪಡಿಸಲು ಹಲವರು ಸವಾಲು ಹಾಕಿದ್ದಾರೆ. 

ಆದರೆ, ರಾಜಕೀಯದಲ್ಲಿ ಹಾಗೆಲ್ಲ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದರು. 

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್‌ ಗೋಕಾಕ್‌ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಸ್ವಾಗತಿಸುತ್ತೇನೆ. ಅವರಿಗೆ ಮೈಂಡ್‌ ಔಟ್‌ ಆಗಿದೆ.  ಇನ್ನು ಮುಂದೆ ಅವರಿಗೆ ಹೆಚ್ಚು ಮಹತ್ವ ಕೊಡುವುದು ಬೇಡ ಎಂದು ಹೇಳಿದರು. 

24 ಗಂಟೆಯಲ್ಲಿ 5 ಕಾಂಗ್ರೆಸ್ ಶಾಸಕರ ರಾಜೀನಾಮೆ: ಹೊಸ ಬಾಂಬ್ ಸಿಡಿಸಿದ ಸಚಿವ .

ನಾನು ಬೆಳಗಾವಿ ಲೋಕಸಭಾ ಟಿಕೆಟ್‌ ಸುರೇಶ್‌ ಅಂಗಡಿಯವರ ಕುಟುಂಬಕ್ಕೆ ನೀಡಲು ಮನವಿ ಮಾಡಿದ್ದೇನೆ. ಆದರೆ, ಯಾರಿಗೆ ಟಿಕೆಟ್‌ ಕೊಡಬೇಕು ಎನ್ನುವುದು ಹೈಕಮಾಂಡ್‌ಗೆ ಬಿಟ್ಟವಿಚಾರ. ಯಾರೇ ಸ್ಪರ್ಧಿಸಲಿ ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆ ಎಂದರು.