ಮುಳಗುತ್ತಿರುವ ಹಡಗಿನಂತಿರುವ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಸಿದ್ದರಾಮೋತ್ಸವ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮೋತ್ಸವ ನಂತರ ಡಿಕೆಶಿ ಉತ್ಸವ ನಡೆದರೂ ಆಶ್ಚರ್ಯವಿಲ್ಲ ಎಂದು ಆರ್ ಅಶೋಕ್ ಹೇಳಿದ್ದಾರೆ.
ಮಾಲೂರು (ಜು.11): ಮುಳಗುತ್ತಿರುವ ಹಡಗಿನಂತಿರುವ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ತಮ್ಮ ವರ್ಚಸ್ಸು ಹೆಚ್ಚಿಸಕೊಳ್ಳಲು ಸಿದ್ದರಾಮೋತ್ಸವ ಮಾಡುತ್ತಿದ್ದಾರೆ. ಇದು ಮುಂದೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ವರ್ಸಸ್ ಡಿಕೆಸಿ ಫೈಟ್‌ಗೆ ನಾಂದಿ ಹಾಡಲಿದೆ ಎಂದು ಕಂದಾಯ ಸಚಿವ ಆರ್.ಆಶೋಕ್ ಹೇಳಿದರು.
ಅವರು ಮಾಲೂರುನಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ ಬೆಂಬಲಿಗರು ಬಿಜೆಪಿ ಸೇರ್ಪಡೆಯಾದ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮೋತ್ಸವ ನಂತರ ಡಿಕೆಶಿ ಉತ್ಸವ ನಡೆದರೂ ಆಶ್ಚರ್ಯವಿಲ್ಲ. ರಾಜ್ಯದಲ್ಲಿ ಅಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ 70 ಸೀಟುಗಳಿಗೆ ತೃಪ್ತಿ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಕ್ಷದ ವರ್ಚಸ್ಸಿಗಾಗಿ ಈ ರೀತಿ ಉತ್ಸವಗಳು, ರಾರಯಲಿಗಳನ್ನು ಕಾಂಗ್ರೆಸ್ ಹಮ್ಮಿಕೊಳ್ಳುತ್ತಿದೆ. ಮುಂದಿನ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ರಾಹುಲ್ ಮತ್ತೂ ಸೋನಿಯಾ ಗಾಂಧಿಯಿಂದ ಸಾಧ್ಯವಿಲ್ಲ. ಮುಂದಿನ ಪ್ರಧಾನಿ ಮೋದಿಯೇ ಆಗಲಿದ್ದಾರೆ ಎಂದರು.
ಅರಮನೆ ಮೈದಾನದಲ್ಲಿ ಜು.13ಕ್ಕೆ ಸಿದ್ದರಾಮೋತ್ಸವ ಪೂರ್ವಸಿದ್ಧತೆ ಸಭೆ
ಆಯಾ ಜಿಲ್ಲೆಯ ಉಸ್ತುವಾರಿ ಸಚಿವರುಗಳು ಪ್ರವಾಹ ಪ್ರವಾಹ ವೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಹ ಕಡಿಮೆಯಾದ ತಕ್ಷಣ ಬೆಳೆ ಹಾನಿ, ಸಾರ್ವಜನಿಕ ಆಸ್ತಿ ಹಾನಿಗಳಿಗೆ ಜಿಲ್ಲಾಧಿಕಾರಿಗಳೇ ಪಲಾನುಭವಿಗಳ ಖಾತೆಗೆ ಪರಿಹಾರ ಧನ ಹಾಕಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಸಂಸದರಾಗಲು ಸಹಕಾರ ನೀಡಿದ್ದ ಜೆಡಿಎಸ್‌ನ ಶಾಸಕರಾಗಿದ್ದ ಮಂಜುನಾಥ್ ಗೌಡ ಅವರನ್ನು ಮುಖ್ಯಮಂತ್ರಿ ಸಮ್ಮುಖದಲ್ಲೇ ಪಕ್ಷಕ್ಕೆ ಗೌರವಪೂರ್ವಕವಾಗಿ ಬರ ಮಾಡಿಕೊಂಡಿದೆ. ಹಾಲಿ ಸ್ಥಳೀಯ ಘಟಕದಲ್ಲಿ ಎರಡು ಬಣಗಳಾಗಿ ಇಬ್ಬರು ಆಕಾಂಕ್ಷಿಗಳಿದ್ದರೂ ಹೈಕಮಾಂಡ್ ಸೂಚಿವವರೇ ಅಂತಿಮ ವಾಗಿ ಅಭ್ಯರ್ಥಿಗಳಾಗಲಿದ್ದಾರೆ ಎಂದರು.
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ, ಸ್ಥಳ ವೀಕ್ಷಣೆ ಮಾಡಿದ ಕಾಂಗ್ರೆಸ್
ಸಿದ್ದರಾಮೋತ್ಸವಕ್ಕೆ ಟೀಕೆ ಅನವಶ್ಯಕ: ಕಾಂಗ್ರೆಸ್‌ನ ಹಿರಿಯ ನಾಯಕ (ಸಿದ್ದರಾಮಯ್ಯ)ರೊಬ್ಬರ ಜನ್ಮದಿನ ಆಚರಿಸುವ ಸಂದರ್ಭದಲ್ಲಿ ಟೀಕೆಗಳು ಅನಾವಶ್ಯಕ ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು.
ನಗದರಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿರಿಯ ನಾಯಕನ ಮೇಲಿರುವ ಅಭಿಮಾನದ ಕಾರಣಕ್ಕಾಗಿ ಜನ್ಮದಿನ ಆಚರಿಸಲಾಗುತ್ತಿದೆ. ಈ ನಾಡಿಗೆ ಅವರು ನೀಡಿದ ಅಭೂತಪೂರ್ವ ಸೇವೆ ಸ್ಮರಿಸಲು ಜನ್ಮದಿನ ಆಚರಣೆ ನಡೆಯುತ್ತಿದೆ ಎಂದರು.
ಪ್ರವಾಹದ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಣೆ ಕುರಿತು ಟೀಕೆಗೆ ಪ್ರತಿಕ್ರಿಯಿಸಿದ ಅವರು, ಈಗ ಪ್ರವಾಹ ಬಂದಿದೆ. ಹುಟ್ಟುಹಬ್ಬ ಆಚರಣೆಗೆ ಇನ್ನೂ ಸಮಯ ಇದೆ. ಆಗ ಪ್ರವಾಹ ತಗ್ಗಿರುತ್ತದೆ ಎಂದರು.
ಇದೇ ವೇಳೆ ಅಧಿಕಾರಕ್ಕಾಗಿ ಕಾಂಗ್ರೆಸ್ ಭಯೋತ್ಪಾದಕರ ಜೊತೆ ಕೈ ಜೋಡಿಸುತ್ತದೆ ಎಂಬ ಬಿಜೆಪಿಗರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಕಾರ್ಯಕರ್ತರೇ ಭಯೋತ್ಪಾದಕರಿದ್ದಾರೆ ಎಂದು ರಾಜಸ್ಥಾನ ಪ್ರಕರಣದಿಂದ ಕಂಡು ಬಂದಿದೆ. ಆ ಕುರಿತು ಮಾತನಾಡುವ ನೈತಿಕ ಹಕ್ಕು ಬಿಜೆಪಿಗೆ ಇದೆಯಾ? ಎಂದು ಕಿಡಿಕಾರಿದರು.
