ರಾಹುಲ್ ವಿಮಾನದಿಂದ ಪೈಲಟ್‌ ಹೊರಗೆ

ಏಕೋ ಏನೋ ರಾಹುಲ್‌ ಗಾಂಧಿ​ ಜಾಸ್ತಿ ನಂಬುತ್ತಿದ್ದ ಮಿತ್ರರೇ ಕೈಕೊಡುತ್ತಿದ್ದಾರೆ. ಮೊದಲಿಗೆ ಜ್ಯೋತಿರಾದಿತ್ಯ ಸಿಂಧಿ​ಯಾ, ಈಗ ಸಚಿನ ಪೈಲಟ್‌. ಆದರೆ ಜ್ಯೋತಿರಾದಿತ್ಯ ಕಾಂಗ್ರೆಸ್‌ ಸರ್ಕಾರ ಬೀಳಿಸಿ ಹೊರಗೆ ಬಂದರೆ, ಸಚಿನ್‌ ಪೈಲಟ್‌ ತಾನೇ ಕಟ್ಟಿದ ಮನೆಯಲ್ಲಿ ಏಕಾಂಗಿ ಆಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್‌ನ ಭವಿಷ್ಯದ ಅನಿಶ್ಚಯತೆಯ ಕಾರಣದಿಂದ ಹುಟ್ಟಿಕೊಂಡ ತಳಮಳ, ಅ​ಧಿಕಾರ ಹಿಡಿಯುವ ಗಡಿಬಿಡಿ.

After Rahul Gandhi Intervention Congress willing to give Sachin Pilot another Chance

ಏಕೋ ಏನೋ ರಾಹುಲ್‌ ಗಾಂಧಿ​ ಜಾಸ್ತಿ ನಂಬುತ್ತಿದ್ದ ಮಿತ್ರರೇ ಕೈಕೊಡುತ್ತಿದ್ದಾರೆ. ಮೊದಲಿಗೆ ಜ್ಯೋತಿರಾದಿತ್ಯ ಸಿಂಧಿ​ಯಾ, ಈಗ ಸಚಿನ ಪೈಲಟ್‌. ಆದರೆ ಜ್ಯೋತಿರಾದಿತ್ಯ ಕಾಂಗ್ರೆಸ್‌ ಸರ್ಕಾರ ಬೀಳಿಸಿ ಹೊರಗೆ ಬಂದರೆ, ಸಚಿನ್‌ ಪೈಲಟ್‌ ತಾನೇ ಕಟ್ಟಿದ ಮನೆಯಲ್ಲಿ ಏಕಾಂಗಿ ಆಗಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್‌ನ ಭವಿಷ್ಯದ ಅನಿಶ್ಚಯತೆಯ ಕಾರಣದಿಂದ ಹುಟ್ಟಿಕೊಂಡ ತಳಮಳ, ಅ​ಧಿಕಾರ ಹಿಡಿಯುವ ಗಡಿಬಿಡಿ. ಹೀಗಾಗಿಯೇ ಎದುರಾಳಿ ನಿಗದಿ ಮಾಡಿದ ಮಹೂರ್ತದಲ್ಲಿ ಯುದ್ಧ ಮಾಡಲು ಹೋಗಿ, ಅನವಶ್ಯಕ ಗಡಿಬಿಡಿಯಿಂದ ಸಚಿನ್‌ ಇದ್ದ ಅಧಿ​ಕಾರ ಜೊತೆಗೆ ಪ್ರತಿಷ್ಠೆ ಕೂಡ ಕಳೆದುಕೊಂದಿದ್ದಾರೆ. ಆ ಕಡೆ ಬಿಜೆಪಿ ಬಾಗಿಲು ತೆರೆಯದೆ, ಈ ಕಡೆ ಕಾಂಗ್ರೆಸ್‌ ಬಾಗಿಲು ಮುಚ್ಚಿ ಕಾಂಗ್ರೆಸನ ಭವಿಷ್ಯ ಎನಿಸಿಕೊಳ್ಳುತ್ತಿದ್ದ ಸಚಿನ 42ನೇ ವಯಸ್ಸಿಗೆ ಗೋಡೆಗೆ ಹೋಗಿ ಗುದ್ದಿಕೊಂಡಿದ್ದಾರೆ.

ಆ ಒಂದು ಅಂಶ ಬಯಲಾಗುವವರೆಗೆ ಚೀನಾ ಬೆದರಿತು ಎನ್ನುವುದು ತಪ್ಪಾದೀತು!

ಆದರೆ ಏನೂ ಮಾಡಲು ಆಗದೆ, ಹೇಳಲೂ ಆಗದೆ, ಜಗಳ ಬಗೆಹರಿಸಲೂ ಆಗದೇ ತನ್ನದೇ ಪಿತ್ರಾರ್ಜಿತ ಪಕ್ಷವಾದರೂ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಇಲ್ಲದ ರಾಹುಲ್‌ ಮತ್ತೊಬ್ಬ ಬುದ್ಧಿವಂತ ರಾಜಕಾರಣಿಯನ್ನು ಕಳೆದುಕೊಂಡಿದ್ದಾರೆ. ರಾಹುಲ್‌ ಗಾಂಧಿ​ಯ ಪರಿಸ್ಥಿತಿ ಶೇಕ್ಸ್‌ಪಿಯರ್‌ನ ನಾಟಕದ ಕಿಂಗ್‌ ಲಿಯರ್‌ನ ತರಹ ಆಗಿದೆ. ರಾಜ ನಂಬುತ್ತಿದ್ದ ಒಬ್ಬೊಬ್ಬರೇ ತಮ್ಮ ತಮ್ಮ ಮಹತ್ವಾಕಾಂಕ್ಷೆಗಳಿಗೆ ದೂರವಾದಾಗ, ರಾಜನನ್ನು ಯಾವತ್ತಿಗೂ ಇಷ್ಟಪಡದವರೇ ಸುತ್ತಮುತ್ತ ತುಂಬಿಕೊಳ್ಳುತ್ತಾ ಹೋಗುತ್ತಾರೆ.

ಆದರೆ ಇದರಲ್ಲಿ ರಾಜ್ಯ ಶಿಥಿಲವಾಗುತ್ತಾ ಹೋಗುತ್ತದೆ. ಬ್ರಿಟನ್‌ನಲ್ಲಿ ನಡೆಯಿತು ಎನ್ನಲಾದ ಈ ಕಥೆಯ ರೀತಿ ರಾಹುಲ್‌ ಅವರ ಅಯಶಸ್ವಿ ನಾಯಕತ್ವದಿಂದ ಕಾಂಗ್ರೆಸ್ಸನ್ನು ಒಬ್ಬೊಬ್ಬರೇ ಬಿಟ್ಟು ದೂರ ಹೋಗುತ್ತಿದ್ದಾರೆ. ತಾತ್ಕಾಲಿಕವಾಗಿ ಜಗಳದಲ್ಲಿ ಒಬ್ಬರು ಗೆದ್ದು, ಇನ್ನೊಬ್ಬರು ಸೋತರೂ ಶಿಥಿಲವಾಗುವುದು ಮಾತ್ರ ಕಾಂಗ್ರೆಸ್‌ ಪಕ್ಷ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

Latest Videos
Follow Us:
Download App:
  • android
  • ios