Asianet Suvarna News Asianet Suvarna News

ಸಿದ್ದುಗೆ ಕಾನೂನು ಪಾಠ ಹೇಳಿ ಸಚಿವರಾದ ಮೇಲೆ ಕಾಂಗ್ರೆಸ್ ಬಿಟ್ಟ ಕಾರಣ ಹೇಳಿದ 'ಕೌರವ'!

ಸಿದ್ದರಾಮಯ್ಯ ಮೇಲೆ ಬಿಸಿ ಪಾಟೀಲ್ ವಾಗ್ದಾಳಿ/ ಬೆಳಗಾವಿಯಲ್ಲಿ ವಾಗ್ದಾಳಿ ಮಾಡಿದ ನೂತನ ಸಚಿವ/ ನನಗೂ ಸಿಎಂ ಆಗುವ ಆಸೆ ಇದೆ/ ಪ್ರತಿಯೊಬ್ಬರೂ ಶಾಸಕ ಮಂತ್ರಿ ಆಗಬೇಕು/ ಸಿಎಂ ಇಬ್ರಾಹಿಂ ಒಬ್ಬ ಜೋಕರ್

After Karnataka cabinet expansion New Minister BC Patil slams Congress Leader Siddaramaiah in Belagavi
Author
Bengaluru, First Published Feb 10, 2020, 9:37 PM IST

ಬೆಳಗಾವಿ(ಫೆ. 10)  ನನಗೆ ಮುಖ್ಯಮಂತ್ರಿ ಹುದ್ದೆ ಕೊಟ್ಟರು ನಿಭಾಯಿಸ್ತಿನಿ. ಸಿಎಂ ಆಗೋ ಆಸೆಯಿದೆ  ಆದರೆ ಎಲ್ಲವೂ ಅಂದುಕೊಂಡಂತೆ ಆಗಲ್ಲ.ಉಮೇಶ್ ಕತ್ತಿ ಸಿಎಂ ಹುದ್ದೆ ಬಗ್ಗೆ ಏನು ಮಾತನಾಡಿದ್ದಾರೆ ಗೊತ್ತಿಲ್ಲ. ಪ್ರತಿಯೊಬ್ಬರಿಗೂ ಶಾಸಕ ಆಗಬೇಕು, ಮಂತ್ರಿ ಆಗಬೇಕು ಮತ್ತು ಸಿಎಂ ಆಗಬೇಕು ಅಂತಾ ಆಸೆಯಿರುತ್ತೆ ಎಂದು ನೂತನ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.

ಸಿದ್ದರಾಮಯ್ಯ ಏನೇನೋ ಮಾತಾಡ್ತಾರೆ. ಸಿದ್ದರಾಮಯ್ಯ ಕಾನೂನು ಕಲಿತವರು ಒಮ್ಮೊಮ್ಮೆ ಕಾನೂನು ಗೊತ್ತಿಲ್ಲ ಅಂತಾ ಹೇಳ್ತಾರೆ. ನನಗೆ  ಕಾನೂನು ಗೊತ್ತಿಲ್ಲ ಅಂದ್ರೆ 25 ವರ್ಷ ಪೊಲೀಸ್ ಅಧಿಕಾರಿ ಆಗಲು ಸಾಧ್ಯವಿತ್ತಾ? ಎಂದು ನೂತನ ಸಚಿವ ಬಿಸಿ ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

ಖಾತೆ ಹಂಚಿಕೆ ಅಂತಿಮ, ಯಾರ ಬಳಿ ಇದ್ದಿದ್ದು ಯಾರಿಗೆ, ಲಾಭ -ನಷ್ದ ಲೆಕ್ಕಾಚಾರ

ನಾನು ಚಾರ್ಜ್‌ಶೀಟ್ ಕೊಟ್ಟ ಬಳಿಕ ವಕೀಲರ ಕೆಲಸ ಆರಂಭ ಆಗುತ್ತಿತ್ತು. ನಾನು ಎಫ್‌ಐಆರ್ ಹಾಕಿ ಆರೋಪಿ ಅರೆಸ್ಟ್ ಮಾಡಿದ ಬಳಿಕವೇ ಲಾಯರ್ ಕೆಲಸ ಆರಂಭ ಆಗೋದು. ನಾವು ಸಿದ್ದರಾಮಯ್ಯ ಅವರ ಸಂತೋಷಕ್ಕೆ ಮಂತ್ರಿ ಆಗಿಲ್ಲ. ಜನತಾ ನ್ಯಾಯಾಲಯದಲ್ಲಿ ನಾವು ಅರ್ಹರಾಗಿದ್ದೇವೆ. ಸಿದ್ದರಾಮಯ್ಯ ನಡೆದುಕೊಂಡು ರೀತಿಗೆ ಬೇಜಾರಾಗಿ ಪಕ್ಷ ಬಿಟ್ಟು ಹೊರಗೆ ಬಂದಿದ್ದೇವೆ. ಸಿದ್ದರಾಮಯ್ಯ ಹೇಳಿಕೆ ಮತದಾರರಿಗೆ ಮಾಡಿದ ಅವಮಾನ ಎಂದು ಕಟುವಾದ ಶಬ್ದಗಳಲ್ಲೇ ವಾಗ್ದಾಳಿ ಮಾಡಿದರು.

ಯಡಿಯೂರಪ್ಪ ಮೂರುವರೆ ವರ್ಷ ಸಿಎಂ ಆಗಿ ಇರ್ತಾರೆ. ಮಹೇಶ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡದಿರುವುದು ನೋವಾಗಿದೆ. ಮಹೇಶ ಕುಮಟಳ್ಳಿಗೆ ಸಚಿವ ಸ್ಥಾನ ಯಾಕೆ ಕೊಟ್ಟಿಲ್ಲ ಗೊತ್ತಿಲ್ಲ. ಆದರೂ ಮಹೇಶ್ ಕುಮಟಳ್ಳಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು ಎಂದರು.

ಮಾಜಿ ಸಚಿವ ಸಿ.ಎಂ ಇಬ್ರಾಹಿಂ ನಾಲಿಗೆ ಮೇಲೆ ಹಿಡಿತವಿಲ್ಲ. ಇಬ್ರಾಹಿಂ ಮಾನಸಿಕ ಸ್ಥಿಮಿತ ಕಳೆದುಕೊಂಡು ಬಿಟ್ಟವರಂತೆ ಮಾತನಾಡುತ್ತಾರೆ. ಒಮ್ಮೆ ಕಾಂಗ್ರೆಸ್ ಗೆ ಬೈಯಿತಾರೇ, ಅಧಿಕಾರ ಕೊಟ್ಟರೇ ಕಾಂಗ್ರೆಸ್ ಹೊಗಳುತ್ತಾರೆ. ಇಬ್ರಾಹಿಂ ನಮಗೆ ಹೇಳುವ ನೈತಿಕತೆ ಇಟಟುಕೊಂಡಿಲ್ಲ ಎಂದು ಝಾಡಿಸಿದರು.

ಭದ್ರಾವತಿಯಿಂದ ಜನರು ಓಡಿಸಿದ್ದಾರೆ, ಇಬ್ರಾಹಿಂಗೆ ಎಲ್ಲಿಯೂ ಮನ್ನಣೆ ಇಲ್ಲ. ಇರಲಿ ಅಂತಾ ಕಾಂಗ್ರೆಸ್ ಪಕ್ಷದ ಲ್ಲಿ ಜೋಕರ್ ತರಹ ಇಟ್ಟುಕೊಂಡಿದ್ದಾರೆ ಎಂದರು. ಡಿಸಿಎಂ ಲಕ್ಷ್ಮಣ ಸವದಿ ಎಂಎಲ್‌‌ಸಿ ಆಗಿ ಆಯ್ಕೆ ಆಗ್ತಾರೆ. ಡಿಸಿಎಂ ಹುದ್ದೆ ಬಗ್ಗೆ ನಮ್ಮ ಗುಂಪಿನಲ್ಲಿ ಚರ್ಚೆ ಆಗಿಲ್ಲ ಎಂದು ಹೇಳಿದರು.

Follow Us:
Download App:
  • android
  • ios