ಬೆಂಗಳೂರು[ಫೆ.13]: ಅನರ್ಹತೆ ಅಸ್ತ್ರ ಎಸೆದಿದ್ದ ಬೆನ್ನಲ್ಲೇ ಬರೋಬ್ಬರಿ ಒಂದು ತಿಂಗಳ ಬಳಿಕ ಅತೃಪ್ತ ಶಾಸಕರು ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಮೈತ್ರಿ ಸರ್ಕಾರಕ್ಕೆ  ಶಾಕಿಂಗ್ ಸುದ್ದಿಯನ್ನೂ ನೀಡಿದ್ದಾರೆ. ಅಷ್ಟಕ್ಕೂ ಅತೃಪ್ತ ನಾಯಕರು ಸಿಡಿಸಿರುವ ಆ ಬಾಂಬ್ ಯಾವುದು? ಇಲ್ಲಿದೆ ವಿವರ

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅತೃಪ್ತರೊಲ್ಲಿ ಒಬ್ಬರಾದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ 'ನನ್ನನ್ನು ಅನರ್ಹ ಮಾಡೋದಾದರೆ ಮಾಡಲಿ. ನಾನು ರಾಜೀನಾಮೆಗೆ ಸಿದ್ಧನಿದ್ದೇನೆ. ನಾನು ಏಕಾಂಗಿಯಾಗಿದ್ದೇನೆ' ಎನ್ನುವ ಮೂಲಕ ಕಾಂಗ್ರೆಸ್ ಗೆ ರಮೇಶ್ ಜಾರಕಿಹೊಳಿ ಸವಾಲೆಸೆದಿದ್ದಾರೆ.

ಇತ್ತ ಕೆ. ಆರ್. ಪೇಟೆ ಕ್ಷೇತ್ರದ ಜೆಡಿಎಸ್‌ ಶಾಸಕ ಬಿ. ನಾಗೇಂದ್ರ ಕೂಡಾ ಪ್ರತಿಕ್ರಿಯಿಸಿದ್ದು, 'ನಾವೆಲ್ಲರೂ ಒಗ್ಗಟ್ಟಿದ್ದೇವೆ. ಹೀಗಂತ ನಾವು ಅತೃಪ್ತರಲ್ಲ, ನಾವೆಲ್ಲಅಸಮಾಧಾನಗೊಂಡವರು. ನಮ್ಮೊಂದಿಗೆ ಬಿ.ಸಿ. ಪಾಟೀಲ್ ಸಹ ಇದ್ದಾರೆ. ನಾವು ಪಕ್ಷ ತೊರೆಯುವ ಬಗ್ಗೆ ನಿರ್ಧರಿಸಿಲ್ಲ ಪಕ್ಷ ಬಿಡುವುದಾಗಿ ಎಲ್ಲಿಯೂ ಹೇಳಿಲ್ಲ. ಬೆಂಗಳೂರಿನಿಂದ ಬೇರೆ ಊರಿಗೆ ಹೋದರೆ ಅದು ಆಪರೇಷನ್ ಕಮಲವೇ?' ಎಂದು ಪ್ರಶ್ನಿಸಿದ್ದಾರೆ.