Asianet Suvarna News Asianet Suvarna News

ಆದಿಚುಂಚನಗಿರಿ ಶ್ರೀಗಳಿಂದ ತರಾಟೆ: ಉರಿಗೌಡ ನಂಜೇಗೌಡ ಸಿನಿಮಾ ಕೈಬಿಟ್ಟ ಮುನಿರತ್ನ

ರಾಜ್ಯದಲ್ಲಿ ತೀವ್ರ ಮುನ್ನೆಲೆಗೆ ಬಂದಿದ್ದ ಉರಿಗೌಡ, ನಂಜೇಗೌಡ ಸಿಮಿಮಾ ನಿರ್ಮಾಣ ಮಾಡಲು ಸಚಿವ ಮುನಿರತ್ನ ತೀರ್ಮಾನ ಮಾಡಿದ್ದರು. ಆದರೆ, ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಬಳಿಕ ಸಿನಿಮಾ ನಿರ್ಮಾಣ ಕೈಬಿಟ್ಟಿದ್ದಾರೆ.

Addressed by Adichunchanagiri swamiji Urigowda Nanjegowda movie dropped by Muniratna sat
Author
First Published Mar 20, 2023, 11:01 AM IST

ಮಂಡ್ಯ (ಮಾ.20): ರಾಜ್ಯದಲ್ಲಿ ತೀವ್ರ ಮುನ್ನೆಲೆಗೆ ಬಂದಿದ್ದ ಉರಿಗೌಡ, ನಂಜೇಗೌಡ ಸಿಮಿಮಾ ನಿರ್ಮಾಣ ಮಾಡಲು ಸಚಿವ ಮುನಿರತ್ನ ತೀರ್ಮಾನ ಮಾಡಿದ್ದರು. ಆದರೆ, ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಬಳಿಕ ಸಿನಿಮಾ ನಿರ್ಮಾಣ ಕೈಬಿಟ್ಟಿದ್ದಾರೆ.

ಟಿಪ್ಪು ಸುಲ್ತಾನನನ್ನು ಕೊಂದಿದ್ದಾರೆ ಎಂಬ ಒಕ್ಕಲಿಗ ವೀರರಾದ ಉರಿಗೌಡ, ನಂಜೇಗೌಡ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದ ಮುನಿರತ್ನ ಅವರನ್ನು ಆದಿಚುಂಚನಗಿರಿ ಶ್ರೀಗಳು ತಮ್ಮನ್ನು ಭೇಟಿಯಾಗುವಂತೆ ಸೂಚನೆ ನಿಡಿದ್ದರು. ಇದರ ಬೆನ್ನಲ್ಲೇ ಇಂದು ಬೆಳಗ್ಗೆ ಸ್ವಾಮೀಜಿಗಳನ್ನು ಭೇಟಿಯಾಗಿ ಚರ್ಚೆ ಆಡಿದ ನಂತರ ಸಿನಿಮಾ ನಿರ್ಮಾಣವನ್ನು ಕೈ ಬಿಟ್ಟಿದ್ದೇನೆ ಎಂದು ಸ್ವತಃ ಮುನಿರತ್ನ ಘೋಷಣೆ ಮಾಡಿದ್ದಾರೆ. ಈ ಮೂಲಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಾಥ್‌ ನೀಡಲು ಸಿದ್ಧಪಡಿಸುತ್ತಿದ್ದ ಉರಿಗೌಡ, ನಂಜೇಗೌಡ ಸಿನಿಮಾ ಪ್ರಯತ್ನಕ್ಕೆ ಬ್ರೇಕ್‌ ಬಿದ್ದಂತಾಗಿದೆ.

ಉರಿಗೌಡ, ನಂಜೇಗೌಡ ಸುಳ್ಳು ಸೃಷ್ಟಿ; ಒಕ್ಕಲಿಗರನ್ನು ಅವಮಾನಿಸುವ ಕುತಂತ್ರ: ರಾಜ್ಯ ಒಕ್ಕಲಿಗರ ಸಂಘ ಕಿಡಿ

ಮೇ 14 ರಂದು ಚಿತ್ರೀಕರಣ ಮುಹೂರ್ತವಿತ್ತು: 
ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿಯ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯೊಂದಿಗೆ ಚರ್ಚೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮುನಿರತ್ನ ಅವರು, ವೃಷಭ ಪ್ರೊಡಕ್ಷನ್ ಅಡಿಯಲ್ಲಿ ಮೇ 14 ಚಿತ್ರೀಕರಣದ ಮೂರ್ತ ಮಾಡಬೇಕು ಅಂದುಕೊಂಡಿದ್ದೆನು. ಮೈಸೂರು ಸಂಸ್ಥಾನಕ್ಕೆ ಬಹಳ ದೊಡ್ಡ ಸಿನಿಮಾ ಮಾಡಬೇಕೆಂಬ ನಿರೀಕ್ಷೆಯಿತ್ತು. ಟಿಪ್ಪು ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಚರ್ಚೆಯಾಗಿತ್ತು. ಕುಮಾರಸ್ವಾಮಿ ಅವರು ಮುನಿರತ್ನನಿಗೆ ಅಶ್ವತ್ಥ್ ನಾರಾಯಣ್ ಸಿನಿಮಾ ಮಾಡೋಕೆ ಹೇಳಿರಬೇಕು ಎಂದಿದ್ದರು. ಅಲ್ಲಿಯವರೆಗೆ ನನಗೆ ಆಲೋಚನೆ ಇರಲಿಲ್ಲ. ಕುಮಾರಸ್ವಾಮಿ ಅವರ ಹೇಳಿಕೆಯಿಂದಲೇ ಸಿನಿಮಾ ಮಾಡಲು ನಿರ್ಧಾರ ಮಾಡಿದ್ದೆನು ಎಂದು ಹೇಳಿದರು.

ಯಾರಿಗೋ ಮನಸ್ಸು ನೋಯಿಸಿ ಸಿನಿಮಾ ಮಾಡಲ್ಲ: ಉರಿಗೌಡ ನಂಚೇಗೌಡ ವಿಚಾರದಲ್ಲಿ ಒಂದಷ್ಟು ದಾಖಲೆ ಸಿಗುತ್ತಿವೆ ಒಂದಷ್ಟು ಸಿಗುತ್ತಿಲ್ಲ. ನನಗ ಚಿತ್ರ ಮಾಡಬೇಕು ಅನ್ನಿಸಿತು. ಸ್ವಾಮೀಜಿ ಅವರ ಜೊತೆ ಚರ್ಚೆ ಮಾಡಿದೆ. ಆಗ ನನಗೆ ಅನ್ನಿಸಿತು, ಯಾರಿಗೂ ಮನಸ್ಸು ನೋಯಿಸಿ ಸಿನಿಮಾ ಮಾಡಬಾರದು. ಸಿನಿಮಾ ಮಾಡಲು ಕಥೆಗಳು ತುಂಬಾ ಸಿಗುತ್ತದೆ. ಸ್ವಾಮೀಜಿ ಅವರಿಗೆ ಹೇಳಿದ್ದೇನೆ, ಯಾರ ಮನಸ್ಸು ನೋಯಿಸುವ ಉದ್ದೇಶ ನನ್ನದಲ್ಲ. ನಾನು ಈ‌ ಸಿನಿಮಾ ನಿರ್ಮಾಣವನ್ನು ಇಲ್ಲಿಯೇ ಕೈ ಬಿಡುತ್ತೇನೆ. ಬಿಜೆಪಿಯವನು ಅಂತಾ ನಾನು ಈ ಸಿನಿಮಾ ಮಾಡಲು ಹೋಗಲ್ಲ. ಶ್ರೀಗಳು ನೈಜತೆ ಇದ್ದರೆ ಅದರ ಬಗ್ಗೆ ಯೋಚನೆ ಮಾಡಿ ಎಂದು ಸೂಚಿಸಿದ್ದಾರೆ. ಹೀಗೆ, ಗೊಂದ ಇರುವಾಗ ಯಾವುದು ಸೂಕ್ತ ಎಂದು ಕೇಳಿದರು. ಆದ್ದರಿಂದ ಶ್ರೀಗಳ ಮಾತಿನಂತೆ ನಾನು ಸಿನಿಮಾ ಮಾಡುವುದನ್ನು ಕೈಬಿಟ್ಟಿದ್ದೇನೆ ಎಂದು ತಿಳಿಸಿದರು.

ಉರಿಗೌಡ, ನಂಜೇಗೌಡ ಸಿನಿಮಾ ವಿವಾದ: ಮುನಿರತ್ನಗೆ ಚುಂಚಶ್ರೀ ಬುಲಾವ್‌ !

ಸ್ವಾಮೀಜಿ ಮಾತಿನಿಂದಲೇ ಸಿನಿಮಾ ನಿರ್ಮಾಣ ಕೈಬಿಟ್ಟಿದ್ದೇನೆ: ಸಿನಿಮಾ ಮಾಡಬೇಕು ಎಂದುರೆ ನಾಲ್ಕಾರು ಹಾಡುಗಳನ್ನು ಹಾಕುತ್ತೇವೆ. ಹಾಡುಗಳನ್ನು ಹಾಕಿದ ನಂತರ ಕೆಲವರ ಮನಸ್ಸಿಗೆ ಬೇಜಾರು ಆಗಬಾರದು. ಕಾಂಟ್ರವರ್ಸಿ ಸಿನಿಮಾ ಮಾಡುವುದು ಬೇಡ ಎಂದುಕೊಂಡಿದ್ದೇನೆ. ನಾನು ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ ನಂತರ ಜಾತಿ ವೈಷಮ್ಯ ಉಂಟಾಗುವ ಸೂಚನೆ ಬಂದಿತು. ಕೆಲವರು ಸಿನಿಮಾ ಮಾಡುವುದು ಬೇಡ ಎಂದು ಹೇಳಿದ್ದರು. ಆದರೆ, ಈಗ ಆದಿಚುಂಚನಗಿರಿ ಸ್ವಾಮೀಜಿ ಅವರು ಯಾರ ಮನಸ್ಸಿಗೂ ನೋವು ಮಾಡದಂತಹ ಸಿನಿಮಾ ಮಾಡುವುಂತೆ ಸೂಚನೆ ನಿಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಸಿನಿಮಾವನ್ನು ಕೈಬಿಟ್ಟಿದ್ದೇನೆ. ಬಿಜೆಪಿ ಮಂಡ್ಯ ರಾಜಕಾರಣಕ್ಕಾಗಿ ಸಿನಿಮಾ ನಿರ್ಮಾಣದ ಮೂಲಕ ನನ್ನನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆಲೋಚನೆಯೇ ಇಲ್ಲ. ನಾನು 25 ವರ್ಷಗಳಿಂದ ಸಿನಿಮಾ ಮಾಡುತ್ತಿದ್ದೇನೆ. ಕೊನೆಯದಾಗಿ ಕುರುಕ್ಷೇತ್ರ ಸಿನಿಮಾ ಮಾಡಿದ್ದೇನೆ. ಇನ್ನು ಶ್ರೀಗಳ ಬಗ್ಗೆ ಅಪಾರ ಗೌರವವಿದ್ದು, ಅವರು ಹೇಳಿದ ಮೇಲೆ ಎರಡನೇ ಮಾತುಗಳನ್ನು ಹೇಳದೇ ಸಿನಿಮಾ  ನಿರ್ಮಾಣ ಕೈಬಿಡಲು ಒಪ್ಪಿಗೊಂಡಿದ್ದೇನೆ ಎಂದು ಮುನಿರತ್ನ ಅವರು ಹೇಳಿದರು. 

Follow Us:
Download App:
  • android
  • ios