Asianet Suvarna News Asianet Suvarna News

52 ಕೋಟಿ ಆಸ್ತಿ ಘೋಷಿಸಿದ್ದರೂ ಸ್ವಂತ ಮನೆ ಇಲ್ಲ ಎಂದ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ನಟ ಚೇತನ್!

ಕಳೆದ ನಾಲ್ಕು ದಶಕಗಳಿಂದ ಮುಂಚೂಣಿ ರಾಜಕಾರಣದಲ್ಲಿದ್ದೇನೆ. ಹೀಗಿದ್ದರೂ ನನಗೆ ಈಗ ಕಟ್ಟುತ್ತಿರುವ ಮನೆ ಬಿಟ್ಟು ಮೈಸೂರಿನಲ್ಲಿ ಒಂದು ನಿವೇಶನವೂ ಇಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

actor and social worker chetan ahimsa slams on cm siddaramaiah gvd
Author
First Published Aug 10, 2024, 6:39 PM IST | Last Updated Aug 10, 2024, 6:39 PM IST

ಬೆಂಗಳೂರು (ಆ.10): ಕಳೆದ ನಾಲ್ಕು ದಶಕಗಳಿಂದ ಮುಂಚೂಣಿ ರಾಜಕಾರಣದಲ್ಲಿದ್ದೇನೆ. ಹೀಗಿದ್ದರೂ ನನಗೆ ಈಗ ಕಟ್ಟುತ್ತಿರುವ ಮನೆ ಬಿಟ್ಟು ಮೈಸೂರಿನಲ್ಲಿ ಒಂದು ನಿವೇಶನವೂ ಇಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಂತ ಮನೆ ಹೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅದು  52 ಕೋಟಿ ಆಸ್ತಿ ಘೋಷಿಸಿದ್ದರೂ. ವಿಪರ್ಯಾಸವೆಂದರೆ, ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್/ಬಿಜೆಪಿ/ ಜೆಡಿಎಸ್ ನಲ್ಲಿನ ಅವರ ಬಂಡವಾಳಶಾಹಿ ಮಿತ್ರರು ಈಗಾಗಲೇ ಶ್ರೀಮಂತರಾಗಿರುವ ಸಿಎಂ ಸಿದ್ದರಾಮಯ್ಯ ಅವರಂಥವರಿಗೆ ಹೆಚ್ಚು ಸಂಪತ್ತು ಮತ್ತು ಭೂಮಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತಿದ್ದಾರೆ. ನಮ್ಮ ಸಮಾನತಾವಾದವು ಇಂತಹ ಉಳ್ಳವರ ಪರವಾದ ರಾಜಕೀಯವನ್ನು ಕಿತ್ತುಹಾಕಬೇಕು ಎಂದು ಬರೆದುಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ನ್ಯಾಯದ ಪರಿಕಲ್ಪನೆ ಇಲ್ಲ: 2023-24 ಮತ್ತು 2024-25ನೇ ಸಾಲಿನ ಎಸ್ಸಿ, ಎಸ್ಪಿ ಸಮುದಾಯಗಳ ಅಭಿವೃದ್ಧಿಗೆ ಸಂಜೀವಿನಿಯಾಗಬೇಕಿದ್ದ ಎಸ್‌ಸಿಎಸ್‌ಪಿ, ಟಿ.ಎಸ್.ಪಿ. ಯೋಜನೆಯ ಮೀಸಲು ಹಣವನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದು ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗೆ ಕುಂಠಿತವಾಗಿದೆ ಎಂದು ದೂರಿದರು. ಮೀಸಲು ಕ್ಷೇತ್ರದಿಂದ ನಮಗೇನು ಉಪಯೋಗ ಇಲ್ಲ ಎಂದು ಡಾ.ಬಿ.ಆ‌ರ್.ಅಂಬೇಡ್ಕರ್ ಅವರೇ 70 ವರ್ಷಗಳ ಹಿಂದೆ ಹೇಳಿದ್ರೂ ಅಲ್ಲಿಂದಲೂ ಕೂಡ ನಮಗೆ ಯಾವ ನ್ಯಾಯ ಸಿಕ್ಕಿಲ್ಲ. 
 


ಈ ಅಸಮಾನತೆಯ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಪಕ್ಷ ಮನುವಾದಿ, ಅಸಮಾನತೆವಾದಿ, ಶ್ರೀಮಂತರ ಪರವಾಗಿರುವ ಪಕ್ಷವಾಗಿದೆ. ಇಲ್ಲಿ ಬೆಳೆಯುವ ಸಚಿವ ಎಚ್‌.ಸಿ.ಮಹದೇವಪ್ಪ ಸೇರಿದಂತೆ ದಲಿತರು, ಆದಿವಾಸಿಗಳು, ಇಲ್ಲಿ ಬೆಳೆಯುವ ಪ್ರತಿಯೊಬ್ಬರೂ ಉದ್ದೇಶಪೂರ್ವಕವಾಗಿಯೇ ದ್ರೋಹ ಮಾಡಿದ್ದಾರೆ. ಯಾರು ಸಂಕಷ್ಟದಲ್ಲಿದ್ದಾರೆ ಅವರನ್ನು ಬೆಳೆಸಬೇಕು. ನಾನು ಸಾವಿರ ಗುಡಿಸಲಿಗೆ ಭೇಟಿ ನೀಡಿದ್ದೇನೆ. ಗುಡಿಸಲಿನಲ್ಲಿ ಮೇಲ್ವರ್ಗದವರು ಬದುಕುತ್ತಿಲ್ಲ. ದಲಿತರು, ಆದಿವಾಸಿಗಳು, ಅಲೆಮಾರಿ, ಶೋಷಿತರು ಜನರು ಗುಡಿಸಲಿನಲ್ಲಿ ಬದುಕುತ್ತಿದ್ದಾರೆ. 

ಭ್ರಷ್ಟಾಚಾರಿಗಳು ಭ್ರಷ್ಟಾಚಾರಕ್ಕಾಗಿ ಭ್ರಷ್ಟಾಚಾರಕ್ಕೋಸ್ಕರ ಪಾದಯಾತ್ರೆ: ಸಚಿವ ಈಶ್ವರ್ ಖಂಡ್ರೆ

ಕ್ರಿಕೆಟ್ ಟೀಂ, ಸಿನಿಮಾ ಸ್ಟಾರ್‌ಗಳಲ್ಲಿ ಇವರ ಜನಸಂಖ್ಯೆ ವಿರಳ. ನೋಡಿ ಎಷ್ಟು ಭೇದಭಾವನೆ ಇದೆ. ಈ ರೀತಿಯ ಅನ್ಯಾಯ ವ್ಯವಸ್ಥೆ ವಿರುದ್ಧ ಪ್ರತಿರೋಧ ಒಡ್ಡಬೇಕು. ಎಸ್‌ಸಿಎಸ್‌ಸಿ, ಟಿಎಸ್‌ಪಿ ಅನುದಾನ ಇರುವುದು ಗುಡಿಸಿನಲ್ಲಿರುವವರಿಗೆ ಮನೆ, ಶಿಕ್ಷಣ ರಸ್ತೆ, ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ಆದರೆ ಅದನ್ನೆಲ್ಲ ಕಿತ್ತುಕೊಂಡು ಕಳೆದ ವರ್ಷ 12.500 ಸಾವಿರ ಕೋಟಿ, ಈ ವರ್ಷ 14.500 ಸಾವಿರ ಕೋಟಿ ದಲಿತರು, ಆದಿವಾಸಿಗಳ ಹಣ ಕಿತ್ತುಕೊಂಡು ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದಾರೆ ಮುಖ್ಯಮಂತ್ರಿಗಳಿಗೆ ನ್ಯಾಯದ ಪರಿಕಲ್ಪನೆ ಗೊತ್ತೇ ಇಲ್ಲ. ಪರಿವರ್ತನೆ ಮನಸ್ಥಿತಿ ಇಲ್ಲ ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios