ನಾನು ಸೋತಿರಬಹುದು, ಸತ್ತಿಲ್ಲ, ಸೋಲನ್ನು ಸವಾಲಾಗಿ ಸ್ವೀಕರಿಸುವೆ: ಡಿ.ಕೆ. ಸುರೇಶ್
ಈ ಚುನಾವಣೆಯಲ್ಲಿ ನಾನು ಸೋತಿರಬಹುದು, ಸತ್ತಿಲ್ಲ. ನನ್ನ ಹೋರಾಟ ನಿರಂತರವಾಗಿರುತ್ತದೆ. ನನಗೆ ಮತದಾರರು ವಿಶ್ರಾಂತಿ ನೀಡಿದ್ದಾರೆ. ಅದನ್ನು ಗೌರವಯುತವಾಗಿ ಸ್ವೀಕರಿಸುತ್ತೇನೆ: ಮಾಜಿ ಸಂಸದ ಡಿ.ಕೆ. ಸುರೇಶ್
ಬೆಂಗಳೂರು(ಜೂ.29): 'ಚುನಾವಣೆಯಲ್ಲಿ ಜನ ಜಾತಿ, ಧರ್ಮ, ಭಾವನೆಗಳಿಗೆ ಮತ ನೀಡಿದ್ದಾರೆಯೇ ಹೊರತು ಬಿಜೆಪಿಗೆ ಮತ ಹಾಕಿಲ್ಲ. ನಾನು ಒಕ್ಕಲಿಗ, ಹಿಂದೂ ಧರ್ಮೀಯನೆಂದು ಮತ ಕೇಳಲಿಲ್ಲ. ಮಾಡಿದ ಕೆಲಸಕ್ಕೆ ಕೂಲಿ ನೀಡಿ ಎಂದು ಮನವಿ ಮಾಡಿದ್ದೆ. ಆದರೂ ಸೋಲಿಸಿದ್ದಾರೆ. ಅಭಿವೃದ್ಧಿ ಮಾಡಿದರೂ ಆಗಿರುವ ಸೋಲನ್ನು ಸವಾಲಾಗಿ ಸ್ವೀಕರಿಸು ತ್ತೇನೆ' ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರಿಗೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು.
ಡಿಕೆಶಿ ಟಾರ್ಗೆಟ್ ಮಾಡಲು ಸಾಧ್ಯವೇ ಇಲ್ಲ: ಡಿ.ಕೆ.ಸುರೇಶ್
ಈ ಚುನಾವಣೆಯಲ್ಲಿ ನಾನು ಸೋತಿರಬಹುದು, ಸತ್ತಿಲ್ಲ. ನನ್ನ ಹೋರಾಟ ನಿರಂತರವಾಗಿರುತ್ತದೆ. ನನಗೆ ಮತದಾರರು ವಿಶ್ರಾಂತಿ ನೀಡಿದ್ದಾರೆ. ಅದನ್ನು ಗೌರವಯುತವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದರು.