ಇಂಡಿಯಾ ಕೂಟದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎನ್ನುವ ವದಂತಿಗೆ ಮತ್ತೊಂ ದು ಸಾಕ್ಷ್ಯ ಸಿಕ್ಕಿದ್ದು, ‘ಆಮ್ ಆದ್ಮಿ ಇಂಡಿಯಾ ಕೂಟದಿಂದ ಹೊರ ಬಂದಿದ್ದು, ಮುಂಗಾರು ಅಧಿವೇಶನಕ್ಕೂ ಮುನ್ನ ಶನಿವಾರ ನಿಗದಿ ಯಾಗಿರುವ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಲ್ಲ’ ಎಂದು ಆಪ್ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.
ನವದೆಹಲಿ: ಎನ್‌ಡಿಎ ಕಟ್ಟಿಹಾಕಲು ಒಗ್ಗೂಡಿದ್ದ ಇಂಡಿಯಾ ಕೂಟದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎನ್ನುವ ವದಂತಿಗೆ ಮತ್ತೊಂ ದು ಸಾಕ್ಷ್ಯ ಸಿಕ್ಕಿದ್ದು, ‘ಆಮ್ ಆದ್ಮಿ ಇಂಡಿಯಾ ಕೂಟದಿಂದ ಹೊರ ಬಂದಿದ್ದು, ಮುಂಗಾರು ಅಧಿವೇಶನಕ್ಕೂ ಮುನ್ನ ಶನಿವಾರ ನಿಗದಿ ಯಾಗಿರುವ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಲ್ಲ’ ಎಂದು ಆಪ್ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.
ಶುಕ್ರವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಇಂಡಿಯಾ ಕೂಟ ಕೇವಲ ಲೋಕಸಭೆ ಚುನಾವನೆಗೆ ರಚಿತವಾಗಿತ್ತು. ಆಪ್ ಮತ್ತು ಕಾಂಗ್ರೆಸ್ ಇಂಡಿಯಾ ಕೂಟದ ಭಾಗವಾಗಿ ಒಟ್ಟಾಗಿ ಸ್ಪರ್ಧಿಸಿದ್ದವು. ಆದರೆ ಆ ಬಳಿಕ ಹರ್ಯಾಣ, ದೆಹಲಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದೆವು’ ಎಂದರು.
‘ಆಮ್ ಆದ್ಮಿ ಇಂಡಿಯಾ ಕೂಟದಿಂದ ಹೊರಗಿದೆ. ನಮ್ಮ ಪಕ್ಷ, ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ನಾವು ಇನ್ನು ಮೈತ್ರಿಕೂಟದ ಭಾಗವಾಗಿರಲ್ಲ. ನಾವು ಯಾವಾಗಲೂ ಬಲವಾದ ಮತ್ತು ಶಕ್ತಿಯುತ ವಿರೋಧ ಪಕ್ಷದ ಪಾತ್ರ ನಿರ್ವ ಹಿಸಿದ್ದೇವೆ. ಮುಂದೆಯೂ ಹಾಗೆ ಮಾಡುತ್ತೇವೆ, ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಸಂಸತ್ತಿನಲ್ಲಿ ಎತ್ತುತ್ತೇವೆ’ ಎಂದರು.
ದಿಲ್ಲಿ ಗದ್ದುಗೆಯಿಂದ AAP ಇಳಿಸಲು RSS ಸ್ವಯಂ ಸೇವಕರು ಗುಪ್ತಗಾಮಿನಿಯಂತೆ ಕೆಲಸ ಮಾಡಿದ್ದೇಗೆ?
ಮಹಾರಾಷ್ಟ್ರ, ಹರ್ಯಾಣ ಚುನಾವಣೆಯಂತೆ ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ 27 ವರ್ಷಗಳ ಬಳಿಕ ಪ್ರಚಂಡ ಗೆಲುವು ಸಾಧಿಸಿದ ಹಿಂದೆ ಆರೆಸ್ಸೆಸ್ ಮಹತ್ವದ ಪಾತ್ರವಹಿಸಿದೆ. ಚುನಾವಣೆಗೂ ಮೊದಲೇ ಬಿಜೆಪಿ ಪರವಾಗಿ ಜನಾಭಿಪ್ರಾಯ ರೂಪಿಸಿ, ದಿಲ್ಲಿ ಗದ್ದುಗೆಯಿಂದ ಆಪ್ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಚುನಾವಣಾ ಪ್ರಚಾರದ ವೇಳೆ ರಾಜಕೀಯ ಪಕ್ಷಗಳು ಬಹಿರಂಗವಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದರೆ ಆರೆಸ್ಸೆಸ್ ಮಾತ್ರ ತಳಮಟ್ಟದಲ್ಲಿ ಸದ್ದಿಲ್ಲದೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿತ್ತು. ದೆಹಲಿಯಾದ್ಯಂತ ಸಾವಿರಾರು ಕಿರು ಸಭೆಗಳನ್ನು ನಡೆಸಿ ಸ್ವಚ್ಛತೆ, ಕುಡಿಯಲು ಯೋಗ್ಯ ನೀರು ಪೂರೈಕೆ ಮತ್ತು ಆರೋಗ್ಯ ಸೇವೆಗಳು, ವಾಯುಮಾಲಿನ್ಯ ಮತ್ತು ಯಮುನಾ ನದಿ ಸ್ವಚ್ಛತೆ ಕುರಿತು ಜನಾಭಿಪ್ರಾಯ ರೂಪಿಸಿತ್ತು.
ಈ ಸಭೆಗಳಲ್ಲಿ ಆಮ್ ಆದ್ಮಿ ಪಕ್ಷದ ದೆಹಲಿ ಮಾದರಿ ಆಡಳಿತದ ವೈಫಲ್ಯಗಳನ್ನು ಎತ್ತಿತೋರಿಸಿದ ಸ್ವಯಂಸೇವಕರು, ಭ್ರಷ್ಟಾಚಾರ ಹಾಗೂ ಕಳೆದ 10 ವರ್ಷಗಳಲ್ಲಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ಕೇಜ್ರಿವಾಲ್ ಸರ್ಕಾರದ ವೈಫಲ್ಯಗಳನ್ನು ಎತ್ತಿತೋರಿಸಲಾಯಿತು. ಅಕ್ರಮ ನಿವಾಸಿಗಳ ಕುರಿತೂ ಈ ವೇಳೆ ಚರ್ಚೆ ಮಾಡಲಾಯಿತು. ದ್ವಾರಕಾ ಪ್ರದೇಶವೊಂದರಲ್ಲೇ ಕನಿಷ್ಠ ಇಂಥ 500 ಸಣ್ಣ ಗುಂಪು ಸಭೆಗಳನ್ನು ಆಯೋಜಿಸಲಾಗಿತ್ತು ಎಂದು ಆರೆಸ್ಸೆಸ್ ಮೂಲಗಳು ತಿಳಿಸಿವೆ.
