ರಾಜ್ಯದಲ್ಲಿ ಕರಪ್ಷನ್‌ ಸರ್ಕಾರ ಹೋಗಿ, ಕಂಡೀಷನ್‌ ಸರ್ಕಾರ ಬಂದಿದೆ: ಮುಖ್ಯಮಂತ್ರಿ ಚಂದ್ರು

ರಾಜ್ಯದ ಜನ ಓಡಿಸಿದ್ದು ಕರಪ್ಷನ್‌ ಸರ್ಕಾರ, ಈಗ ಬಂದಿರುವುದು ಕಂಡಿಷನ್‌ ಸರ್ಕಾರ. ಆದರೆ ಜನತೆಗೆ ನುಡಿದಂತೆ ನಡೆಯುವ ಕಮಿಟ್ಮೆಂಟ್‌ ಸರ್ಕಾರ ಕೇವಲ ಆಮ್‌ ಆದ್ಮಿ ಪಾರ್ಟಿ ನೀಡಬಲ್ಲದು ಎಂದು ಆಪ್‌ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

AAP Leader Mukhyamantri Chandru Talks Over Congress Govt gvd

ಮೈಸೂರು (ಜು.30): ರಾಜ್ಯದ ಜನ ಓಡಿಸಿದ್ದು ಕರಪ್ಷನ್‌ ಸರ್ಕಾರ, ಈಗ ಬಂದಿರುವುದು ಕಂಡಿಷನ್‌ ಸರ್ಕಾರ. ಆದರೆ ಜನತೆಗೆ ನುಡಿದಂತೆ ನಡೆಯುವ ಕಮಿಟ್ಮೆಂಟ್‌ ಸರ್ಕಾರ ಕೇವಲ ಆಮ್‌ ಆದ್ಮಿ ಪಾರ್ಟಿ ನೀಡಬಲ್ಲದು ಎಂದು ಆಪ್‌ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜ್ಯದಲ್ಲಿ 40 ಪರ್ಸೆಂಟ್‌, ಕೋಮುವಾದಿ ಹಾಗೂ ವಿಭಜನೆವಾದಿ ಸರ್ಕಾರದ ಬದಲು ಕಾಂಗ್ರೆಸ್‌ ಪಕ್ಷಕ್ಕೆ ಅನಿವಾರ್ಯವಾಗಿ ಜನತೆ ಅಧಿಕಾರ ನೀಡಿದ್ದಾರೆ. ಇಷ್ಟುದಿನ ದೆಹಲಿಯಲ್ಲಿನ ಉಚಿತ ಸೌಲಭ್ಯ ವಿರೋಧಿಸುತ್ತಿದ್ದವರೇ ಅದನ್ನು ಜಾರಿಗೊಳಿಸಿದ್ದಾರೆ. 

ಹೀಗಾಗಿ, ಕಾಂಗ್ರೆಸ್‌ ಸರ್ಕಾರವು ಕೇಜ್ರಿವಾಲ್‌ ಅವರಿಗೆ ಧನ್ಯವಾದವನ್ನಾದರೂ ಹೇಳಬೇಕಾಗಿತ್ತೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಾಂಗ್ರೆಸ್‌ ಸರ್ಕಾರ ಉಚಿತ ಯೋಜನೆ ಜಾರಿಗೊಳಿಸಿದೆ. ಆದರೆ, ಅದು ಜನತೆಗೆ ಸುಲಭವಾಗಿ ಸಿಗುತ್ತಿದೆಯೇ ಎಂಬ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಭ್ರಷ್ಟಾಚಾರ ತೊಲಗಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದವರು ಈ ನಿಟ್ಟಿನಲ್ಲಿ ಬದ್ಧತೆ ಪ್ರದರ್ಶಿಸಬೇಕಾಗಿದೆ. ಈಗ ಶಾಸಕರೇ ವರ್ಗಾವಣೆಗಳಿಗೆ ಕೈ ಹಾಕಿರುವುದು ಸರಿಯಲ್ಲ. ಉಚಿತ ಎನ್ನುವ ವೇಳೆ ಆರೋಗ್ಯ, ಶಿಕ್ಷಣಕ್ಕೆ ರಾಜ್ಯ ಸರ್ಕಾರ ಪ್ರಾಧಾನ್ಯತೆ ನೀಡಿದಲ್ಲಿ ಖಾಸಗಿಯವರಿಂದ ಶೋಷಣೆ ತಪ್ಪುತ್ತದೆ ಎಂದರು. 

ಚುನಾವಣೆ ಮುಗಿದ್ರೂ ಖಾಸಗಿ ವಾಹನ ಚಾಲಕರಿಗೆ ಬಾಡಿಗೆ ಪಾವತಿಸದ ಅಧಿಕಾರಿಗಳು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಮೊದಲು ಭರವಸೆ ನೀಡಿದ ಗ್ಯಾರಂಟಿ ಯೋಜನೆ ಲಂಚ ಎಂದು ಆರೋಪಿಸುವವರಿಗೆ ಕೇಂದ್ರ ಸರ್ಕಾರವು ಅದಾನಿ, ಅಂಬಾನಿ ಮೊದಲಾದವರ 10 ಲಕ್ಷ ಕೋಟಿ ಮನ್ನಾ ಮಾಡಿದ್ದು ಏನನ್ನಿಸುತ್ತದೆ ಎಂದು ಅವರು ಪ್ರಶ್ನಿಸಿದರು. ದೇಶದಲ್ಲಿ ಏಕಚಕ್ರಾಧಿಪತ್ಯ ವಿರೋಧಿಸುವ ಸಲುವಾಗಿ ಅನಿವಾರ್ಯವಾಗಿ ಆಗಿರುವ ಹೊಸ ಸಂಘಟನೆ ಮತ್ತು ರಾಜ್ಯದ ಹಿತ ಕಾಪಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರದ ವಿರುದ್ಧ ಮಾತನಾಡಬೇಕಾಗಿದೆ. ಕೇಂದ್ರ ಹಾಗೂ ಮಣಿಪುರ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. 

ಹವಾಮಾನ ಆಧಾರಿತ ಬೆಳೆ ಬಗ್ಗೆ ಜಾಗೃತಿ ಮೂಡಿಸಿ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಹೀಗಿದ್ದರೂ ಮಣಿಪುರ ಘಟನೆ ಬಗ್ಗೆ ಪ್ರಧಾನಿ ಮೌನವಾಗಿರುವುದು ಸರಿಯಲ್ಲ. ಸುಪ್ರೀಂಕೋರ್ಚ್‌ ಛೀಮಾರಿ ಹಾಕಿರುವುದು ಸಂಬಂಧಿಸಿದ ಸರ್ಕಾರಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಮಣಿಪುರ ಘಟನೆಯ ಬಗ್ಗೆ ಪ್ರಧಾನಿ ಬಾಯಿ ಬಿಡಿಸಲು ಅವಿಶ್ವಾಸ ನಿರ್ಣಯ ಮಂಡನೆಯ ಅವಶ್ಯಕತೆ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ, ರಾಜ್ಯ ಮಹಿಳಾ ಅಧ್ಯಕ್ಷೆ ಕುಶಲಾ ಸ್ವಾಮಿ, ರಾಜ್ಯ ಉಪಾಧ್ಯಕ್ಷ ಸುರೇಶ್‌ ರಾಥೋಡ್‌, ರಾಜ್ಯ ಜಂಟಿ ಕಾರ್ಯದರ್ಶಿ ಮಾಲವಿಕಾ ಗುಬ್ಬಿವಾಣಿ, ಜಿಲ್ಲಾಧ್ಯಕ್ಷ ಎಲ್‌. ರಂಗಯ್ಯ, ಮುಖಂಡರಾದ ಸೋಸಲೆ ಸಿದ್ದರಾಜು ಇದ್ದರು.

Latest Videos
Follow Us:
Download App:
  • android
  • ios