Asianet Suvarna News Asianet Suvarna News

Assembly election: ಬಿಜೆಪಿಗೆ ಅನುಕೂಲ ಆಗುವಂತೆ ಎಎಪಿ ಪ್ರಚಾರ: ದಿನೇಶ್‌ ಗುಂಡೂರಾವ್

ಗುಜರಾತ್‌ನಲ್ಲಿ ನಿರೀಕ್ಷೆಯ ರೀತಿಯಲ್ಲಿ ಗೆಲುವು ಸಾಧಿಸಲು ಆಗಲಿಲ್ಲ. ಆಮ್‌ ಆದ್ಮಿ ಪಕ್ಷ (ಎಎಪಿ)ದಿಂದಲೇ ಕಾಂಗ್ರೆಸ್‌ಗೆ ತೊಂದರೆಯಾಗುತ್ತಿದೆ. ಎಎಪಿ ನಾಯಕರು ಬಿಜೆಪಿಗೆ ಅನುಕೂಲ ಆಗುವ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಸೋಲಿಗೆ ಸಮರ್ಥನೆ ಮಾಡಿಕೊಂಡಿದ್ದಾರೆ.

AAP campaign to benefit BJP Dinesh Gundurao sat
Author
First Published Dec 8, 2022, 1:39 PM IST

ಬೆಂಗಳೂರು (ಡಿ.8) : ಗುಜರಾತ್‌ನಲ್ಲಿ ಕಾಂಗ್ರೆಸ್‌ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ನಮ್ಮ ನಿರೀಕ್ಷೆಯ ರೀತಿಯಲ್ಲಿ ಗೆಲುವು ಸಾಧಿಸಲು ಆಗುತ್ತಿಲ್ಲ. ಆಮ್‌ ಆದ್ಮಿ ಪಕ್ಷ (ಎಎಪಿ)ದಿಂದಲೇ ನಮಗೆ ತೊಂದರೆಯಾಗುತ್ತಿದೆ. ಎಎಪಿ ನಾಯಕರು ಬಿಜೆಪಿಗೆ ಅನುಕೂಲ ಆಗುವ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಮತ್ತು ಶಾಸಕ ದಿನೇಶ್ ಗುಂಡೂರಾವ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಗುಜರಾತ್‌ ಮತ್ತು ಹಿಮಾಚಲ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಜರಾತ್ ರಾಜ್ಯದಲ್ಲಿ ನಿರೀಕ್ಷೆಯ ರೀತಿಯಲ್ಲಿ ಫಲಿತಾಂಶ ಬರಲಿಲ್ಲ. ಇಲ್ಲಿ ಈವರೆಗೆ ವಿರೋಧ ಪಕ್ಷವಾಗಿ ಕಾಂಗ್ರೆಸ್‌ ಸ್ಥಾನ ಪಡೆಯುತ್ತಿತ್ತು. ಆದರೆ, ಈ ಚುನಾವಣೆಯಲ್ಲಿ ವಿರೋಧ ಪಕ್ಷಗಳಲ್ಲಿನ ಮತಗಳು ವಿಭಜನೆಯಾಗಿವೆ. ಇದರಿಂದ ಫಲಿತಾಂಶದ ಮೇಲೆ ಪರಿಣಾಮ ಆಗಿದೆ. ಗುಜರಾತ್ ನಲ್ಲಿ ಹೆಚ್ಚು ಸೀಟ್ ನಿರೀಕ್ಷೆ ಇತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈ ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ನಮಗೆ ತೊಂದರೆಯಾಗುತ್ತಿದೆ. ಎಎಪಿ ನಾಯಕರು ಬಿಜೆಪಿ ಗೆ ಅನುಕೂಲ ಆಗುವ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಗೋವಾ ಸೇರಿದಂತೆ ಕೆಲವು ಕಡೆ ಎಎಪಿ ಪ್ರಚಾರವನ್ನು ನಾವು ನೋಡಿದ್ದೇವೆ. ಆದರೆ, ಇನ್ನು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

Himachal Election Result 2022: ಹಿಮಾಚಲ ಪ್ರದೇಶದ 9 ಕ್ಷೇತ್ರಗಳಲ್ಲಿ 1 ಸಾವಿರಕ್ಕಿಂತ ಕಡಿಮೆ ಅಂತರದ ಮುನ್ನಡೆ!

ಗುಜರಾತ್ ಫಲಿತಾಂಶ ರಾಜ್ಯದಲ್ಲಿ ಕೆಲಸ ಮಾಡಲ್ಲ:  2013ರಲ್ಲಿ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ, 2013ರಲ್ಲಿ ಕರ್ನಾಟಕದಲ್ಲಿ ನಾವು ಗೆದ್ದಿದ್ದೆವು. ರಾಜ್ಯ ರಾಜ್ಯಗಳ ನಡುವಿನ ವಿಚಾರಗಳೇ ಬೇರೆ ಇರುತ್ತದೆ. ಗುಜರಾತ್ ನಲ್ಲಿ ಕಾಂಗ್ರೆಸ್ ನಿರೀಕ್ಷೆ ಮಾಡಿದಷ್ಟು ಸೀಟ್ ಬರಲಿಲ್ಲ. ಗುಜರಾತ್ ಫಲಿತಾಂಶ ದೇಶದ ರಾಜಕಾರಣಕ್ಕೆ ದಿಕ್ಸೂಚಿ ಅಲ್ಲ. ಇನ್ನು ಉತ್ತರ ಮತ್ತು ದಕ್ಷಿಣ ಭಾರತದ ಚುನಾವಣೆಗಳ ತಂತ್ರವೇ ಬೇರೆ ಬೇರೆಯಾಗಿದೆ. ಜನರ ಅಭಿಪ್ರಾಯ, ಅಭಿರುಚಿಯೂ ಬೇರೆ ಬೇರೆಯಾಗಿದ್ದು, ಯಾವುದೇ ಕಾರಣಕ್ಕೂ ಗುಜರಾತ್‌ ಫಲಿತಾಂಶ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು. 

ಆಪ್‌ ಶೇ.12 ಕಾಂಗ್ರೆಸ್‌ ಮತ ಕಬಳಿಸಿದೆ: ಗುಜರಾತ್ ಚುನಾವಣೆಯಲ್ಲಿ ಶೇ.10 ರಿಂದ‌ 12 ಕಾಂಗ್ರೆಸ್‌ನ ಮತಗಳನ್ನ ಆಪ್ ಕಬಳಿಸಿದೆ. ಅಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಚುನಾವಣೆ ಕೆಲಸ ಮಾಡಿದ್ದೇವೆ. ಕೇಂದ್ರ ಸರ್ಕಾರ ಮುಂದಿಟ್ಟುಕೊಂಡು ಬಿಜೆಪಿ ಗುಜರಾತ್ ನಲ್ಲಿ ಕೆಲಸ ಮಾಡಿದೆ. ಆದರೆ, ಕರ್ನಾಟಕ ಚುನಾವಣೆ ಬೇರೆ, ಗುಜರಾತ್ ಚುನಾವಣೆ ಬೇರೆ. ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ. ದೆಹಲಿಯಲ್ಲಿ ಕೇಂದ್ರ ಸರ್ಕಾರ ಬಿಜೆಪಿ ಅಧಿಕಾರದಲ್ಲಿದ್ದರೂ ಎಎಪಿ ಚುನಾವಣೆಯಲ್ಲಿ ಗೆದ್ದಿದೆ. ಎಎಪಿ ಹೆಚ್ಚು ಮತ ಪಡೆದ ಕಾರಣ ಗುಜರಾತ್ ನಲ್ಲಿ ಕಾಂಗ್ರೆಸ್ ಗೆ ಹಿನ್ನೆಡೆಯಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ ತಿಳಿಸಿದರು.

Assembly election: ಗುಜರಾತ್ ಬಿಜೆಪಿ ಮಾಡೆಲ್ ರಾಜ್ಯ ಕಾಂಗ್ರೆಸ್‌ನಲ್ಲಿ ಅಳವಡಿಕೆ: ಸತೀಶ್ ಜಾರಕಿಹೊಳಿ

ಗುಜರಾತ್‌ ಗೆಲುವು ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಮುಂದಿರುವ ಸವಾಲುಗಳು:

  • ಸಮರ್ಪಿತ ಕಾರ್ಯಕರ್ತರ ಪಡೆ ಅನಿವಾರ್ಯತೆ.
  • ಎಲ್ಲರ ಮೇಲೂ ತೀಕ್ಷ್ಣ, ನಿರ್ಧಾಕ್ಷ್ಯಿಣ್ಯ ಕ್ರಮದ ಅಗತ್ಯತೆ.
  • ನಾಯಕತ್ವ ಕುರಿತಂತೆ ಅಸಮಾಧಾನ ಇತ್ಯರ್ಥ ಮಾಡಿಕೊಳ್ಳಬೇಕು.
  • ಜಾತಿಯ ಮುಲಾಜಿಗೆ ಕಟ್ಟುಬಿದ್ದು, ಟಿಕೆಟ್ ಕೊಡುವ ಪದ್ಧತಿ ಕೈ ಬಿಡಬೇಕು.
  • ಓಲೈಕೆ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕಿದೆ.
  • ಮುಖ್ಯಮಂತ್ರಿ ಕುರ್ಚಿ ಗುದ್ದಾಟಕ್ಕೆ ಬ್ರೇಕ್ ಹಾಕಬೇಕಿದೆ.
  • ಗೆಲ್ಲುವರಿಗೆ ಮಾತ್ರ ಮಣೆ ಹಾಕುವುದು.
  • ಗುಂಪುಗಾರಿಕೆ, ಜಾತಿ ನಾಯಕತ್ವ ತೊರೆಯಬೇಕಾದ ಅನಿವಾರ್ಯತೆ ಇದೆ.
Follow Us:
Download App:
  • android
  • ios