ಎರಡನೇ ಪಟ್ಟಿಯ 60 ಅಭ್ಯರ್ಥಿಗಳಲ್ಲಿ 59 ಅಭ್ಯರ್ಥಿಗಳು ಇದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ: ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ 

ಬೆಂಗಳೂರು(ಏ.01): ಕಳೆದ ವಾರವಷ್ಟೇ 80 ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡಿದ್ದ ಆಮ್‌ ಆದ್ಮಿ ಪಕ್ಷವು 60 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿನ್ನೆ(ಶುಕ್ರವಾರ) ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ ಹಾಗೂ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದರು.

ಮೊದಲ ಪಟ್ಟಿಯಂತೆ ಎರಡನೇ ಪಟ್ಟಿಯಲ್ಲಿ ಕೂಡ ಅಭ್ಯರ್ಥಿಗಳ ಸರಾಸರಿ ವಯಸ್ಸು 45 ದಾಟಿಲ್ಲ. ಎರಡೂ ಪಟ್ಟಿಯಲ್ಲಿ ಒಟ್ಟು 14 ರೈತರಿಗೆ, 11 ಮಹಿಳೆಯರಿಗೆ, 18 ವಕೀಲರು, 6 ವೈದ್ಯರು, 23 ಇಂಜಿನಿಯರ್‌ಗಳು ಹಾಗೂ 4 ಐಟಿ ವೃತ್ತಿಪರರು ಹಾಗೂ ಐದು ಮಂದಿ ಡಾಕ್ಟರೇಟ್‌ ಪಡೆದವರು ಇದ್ದಾರೆ. 29 ಜನರ ಸ್ನಾತಕೋತ್ತರ ಪದವೀಧರರು, 68 ಪದವೀಧರರು, 6 ಎಂಬಿಎ ಪದವೀಧರರನ್ನು ಈ ಎರಡು ಪಟ್ಟಿಗಳು ಒಳಗೊಂಡಿವೆ. ಎರಡನೇ ಪಟ್ಟಿಯ 60 ಅಭ್ಯರ್ಥಿಗಳಲ್ಲಿ 59 ಅಭ್ಯರ್ಥಿಗಳು ಇದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ವಿವರಿಸಿದರು.

Aam Aadmi Party: ಕೂಡ್ಲಿಗಿ ಕ್ಷೇತ್ರದಲ್ಲಿ ಆಮ್‌ ಆದ್ಮಿಯ ಸೈನ್ಯದ ಹೆಜ್ಜೆ

ಅಭ್ಯರ್ಥಿಗಳ ವಿವರ ಹೀಗಿದೆ:

ಚಿಕ್ಕೋಡಿ ಸದಲಗಾ- ಶ್ರೀಮಂತ ಪಾಟೀಲ್‌, ಕಾಗವಾಡ-ಗುರಪ್ಪ ಬಿ.ಮಗದುಮ್‌, ಅರಭಾವಿ-ಇಜಾಜ್‌ ಅಹಮದ್‌ ಕೊಟ್ಟಲಗಿ, ಗೋಕಾಕ- ಜಾನ್ಸ್‌ ಕುಮಾರ್‌ ಎಂ.ಕರಪ್ಪಗೋಳ, ಕಿತ್ತೂರು-ಆನಂದ ಹಂಪಣ್ಣನವರ, ಬೀಳಗಿ-ಮುತ್ತಪ್ಪ ಕೋಮರ್‌, ಬಿಜಾಪುರ ನಗರ- ಕಾಶಿಂಪೀರ ವಾಲೀಕಾರ, ನಾಗಠಾಣಾ- ಗುರು ಚವ್ಹಾಣ್‌, ಜೇವರ್ಗಿ- ವಿಶ್ವನಾಥ್‌ ರೆಡ್ಡಿ, ಯಾದಗಿರಿ-ಅಜರುದ್ದೀನ್‌ ರಾಜಾ, ಚಿತ್ತಾಪುರ- ಜಗದೀಶ್‌ ಸಾಗರ್‌, ಕನಕಗಿರಿ-ಅನಿಲ್‌ ಕುಮಾರ್‌.ಆರ್‌.ಬೇಗಾದ್‌, ಯಲಬುರ್ಗಾ- ಹನುಮಂತಪ್ಪ ಕುರಿ, ಶಿರಹಟ್ಟಿ- ಮಲ್ಲಿಕಾರ್ಜುನ ದೊಡ್ಡಮನಿ, ಗದಗ-ಪೀರಸಾಬ್‌ ಶೇಕ್‌ ದೊಡ್ಡಮನಿ, ನರಗುಂದ-ರಾಮಪ್ಪ ದ್ಯಾಮಪ್ಪ ಹೊವ್ವಣ್ಣವರ, ಕುಂದಗೋಳ- ನಿರಂಜನಯ್ಯ ಮನಕಟ್ಟೆಮಠ, ಕಾರವಾರ-ಆಶೀಶ್‌ ಪ್ರಭಾಕರ ಗಾವಂಕರ್‌, ಕುಮಟಾ- ರೂಪನಾಯಕ್‌, ಭಟ್ಕಳ- ನಸೀಮ್‌ ಅಹ್ಮದ್‌ ಖಾನ್‌, ಹಾನಗಲ್‌-ಸಾಯಿಕುಮಾರ್‌, ಹಡಗಲಿ-ಶ್ರೀಧರ್‌ ನಾಯ್ಕ್‌, ಹಗರಿಬೊಮ್ಮನಹಳ್ಳಿ- ಡಾ.ಹನುಮಂತಪ್ಪ, ಸಿರಗುಪ್ಪ-ಲೋಕೇಶ ನಾಯಕ, ಬಳ್ಳಾರಿ ನಗರ-ಯರಿಸ್ವಾಮಿ, ಚಳ್ಳಕೆರೆ- ಪಾಪಣ್ಣ, ಹಿರಿಯೂರು-ಕೆ.ಟಿ.ತಿಪ್ಪೇಸ್ವಾಮಿ, ಸೊರಬ-ಚಂದ್ರಶೇಖರ್‌, ಉಡುಪಿ-ಪ್ರಭಾಕರ ಪೂಜಾರಿ, ತುಮಕೂರ್‌ ಗ್ರಾಮಾಂತರ- ಬಿ.ದಿನೇಶ್‌ ಕುಮಾರ್‌, ಮಧುಗಿರಿ-ಸೈಯದ್‌ ಮುಜಾಮಿಲ್‌ ಪಾಷ, ಗೌರಿಬಿದನೂರು-ಸೈಯದ್‌ ನಾಸಿರ್‌ ಅಲಿ, ಶ್ರೀನಿವಾಸಪುರ-ಡಾ.ವೈ.ವಿ.ವೆಂಕಟಾಚಲ, ಮುಳಬಾಗಿಲು-ಎನ್‌.ವಿಜಯ್‌ ಕುಮಾರ್‌, ಕೋಲಾರ-ಸುಹೇಲ್‌ ದಿಲ್‌ ನವಾಜ್‌, ಕೃಷ್ಣರಾಜಪುರ- ಡಾ.ಕೇಶವ್‌ ಕುಮಾರ್‌, ಬ್ಯಾಟರಾಯನಪುರ-ಉಮೇಶ್‌ ಬಾಬು, ಯಶವಂತಪುರ- ಶಶಿಧರ್‌.ಸಿ.ಆರಾಧ್ಯ, ರಾಜರಾಜೇಶ್ವರಿ ನಗರ- ಅನಂತ ಸುಭಾಷ್‌ ಚಂದ್ರ, ಗೋವಿಂದರಾಜನಗರ- ಅಂಜನಗೌಡ, ಬಸವನಗುಡಿ-ಸತ್ಯಲಕ್ಷ್ಮೀರಾವ್‌, ಮಹದೇವಪುರ-ಸಿ.ಆರ್‌.ನಟರಾಜ್‌, ಬಸವನಗುಡಿ-ಸತ್ಯಲಕ್ಷ್ಮೀ ರಾವ್‌, ಬೆಂಗಳೂರು ದಕ್ಷಿಣ- ಅಶೋಕ್‌ ಮೃತ್ಯುಂಜಯ, ಆನೇಕಲ್‌-ಎಂ.ಮುನೇಶ್‌, ಮದ್ದೂರು-ಆನಂದ್‌, ಮೇಲುಕೋಟೆ-ಎಚ್‌.ಆರ್‌.ಅಶೋಕ್‌, ಕೃಷ್ಣರಾಜಪೇಟೆ-ಶಿವಣ್ಣ, ಶ್ರವಣಬೆಳಗೊಳ- ಮಂಜೇಗೌಡ, ಸಕಲೇಶಪುರ-ಕೆ.ಎಸ್‌.ಪವನ್‌ ಕುಮಾರ್‌, ಮಂಗಳೂರು ನಗರ ಉತ್ತರ- ಸಂದೀಪ್‌ ಶೆಟ್ಟಿ, ಪುತ್ತೂರು-ಡಾ.ಬಿ.ಕೆ.ವಿಶುಕುಮಾರ್‌, ಕೃಷ್ಣರಾಜನಗರ-ಮುರುಗೇಶ್‌, ಹುಣಸೂರು-ಜಿ.ರವಿಕುಮಾರ್‌, ನಂಜನಗೂಡು-ಹನುಮಯ್ಯ, ಚಾಮುಂಡೇಶ್ವರಿ-ಕಿರಣ್‌ ನಾಗೇಶ್‌ ಕಲ್ಯಾಣಿ, ಕೃಷ್ಣರಾಜ-ಜಯಶ್ರೀ, ವರುಣ-ಜಿ.ಎಸ್‌.ರಾಜೇಶ್‌, ಕೊಳ್ಳೇಗಾಲ- ಕೆಂಪರಾಜು ಹಾಗೂ ಚಾಮರಾಜನಗರ-ಡಾ.ಗುರುಪ್ರಸಾದ್‌.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.