Asianet Suvarna News Asianet Suvarna News

Gujarat Election: ಗಿರ್‌ ಮತಗಟ್ಟೇಲಿ ವೋಟ್‌ ಮಾಡಿದ ಏಕೈಕ ಮತದಾರ!

ಗುಜರಾತ್‌ನಲ್ಲಿ ಗುರುವಾರ ಮೊದಲ ಹಂತದ ಚುನಾವಣೆಯಲ್ಲಿ ಶೇ. 60.23ರಷ್ಟು ಮತದಾನವಾನವಾಗಿದೆ. ಈ ನಡುವೆ ಗಿರ್‌ನ ಸೋಮನಾಥ್‌ ಜಿಲ್ಲೆಯ ದಟ್ಟ ಅರಣ್ಯದಲ್ಲಿರುವ ಮತಗಟ್ಟೆಯಲ್ಲಿ ಏಕೈಕ ಮತದಾರ ಹರಿದಾಸ್‌ಜಿ ಉದಾಸಿನ್‌ ತಮ್ಮ ಮತ ಚಲಾವಣೆ ಮಾಡಿದ್ದಾರೆ. ಇದು ಉನಾ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಒಬ್ಬ ವ್ಯಕ್ತಿಗಾಗಿ ಪ್ರತಿ ಬಾರಿ ಇಲ್ಲಿ ಮತಗಟ್ಟೆ ತೆರೆಯಲಾಗುತ್ತದೆ.

A Polling Booth For Just One Voter in Gujarat gir san
Author
First Published Dec 2, 2022, 10:08 AM IST

ನವದೆಹಲಿ (ಡಿ.2): ಚುನಾವಣೆಯಲ್ಲಿ ಗೆದ್ದ ರಾಜಕೀಯ ಪಕ್ಷಗಳು ತಾವು ನೀಡಿದ ಭರವಸೆಗಳನ್ನು ಈಡೇರಿಸುತ್ತದೆಯೋ ಇಲ್ಲವೋ, ಆದರೆ ಚುನಾವಣೆಯ ವೇಳೆ ಪ್ರತಿ ಮತದಾರರ ಮತವನ್ನು ಕೂಡ ಇಂಪಾರ್ಟೆಂಟ್‌ ಆಗಿ ಪರಿಗಣನೆ ಮಾಡುತ್ತದೆ. ಗುರುವಾರ ನಡೆದ ಗುಜರಾತ್‌ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ ಶೇ. 60.23ರಷ್ಟು ಮತದಾನವಾಗಿದೆ. ಈ ನಡುವೆ ಗಿರ್‌ನ ಸೋಮನಾಥ ಜಿಲ್ಲೆಯ ದಟ್ಟ ಅರಣ್ಯದಲ್ಲಿ ನಿರ್ಮಾಣವಾಗಿರುವ ಮತಗಟ್ಟೆಯಲ್ಲಿ ಏಕೈಕ ಮತದಾರ ಹರಿದಾಸ್‌ಜೀ ಉದಾಸಿನ್‌ ತಮ್ಮ ಮತ ಚಲಾವಣೆ ಮಾಡಿದ್ದಾರೆ. ಒಬ್ಬ ಮತದಾರನಿಗಾಗಿ ಪ್ರತಿ ಬಾರಿಯ ಚುನಾವಣೆಯನ್ನೂ ಇಲ್ಲಿ ಮತಗಟ್ಟೆಯನ್ನು ಚುನಾವಣಾ ಆಯೋಗ ಸ್ಥಾಪನೆ ಮಾಡುತ್ತದೆ.  ಯಾವುದೇ ಮತದಾರರು ಕೂಡ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿಯದಂತೆ ಚುನಾವಣಾ ಆಯೋಗವು ಹಲವಾರು ಪ್ರಯತ್ನಗಳನ್ನು ಮಾಡುತ್ತದೆ. ಗುಜರಾತ್‌ ಚುನಾವಣೆಯ ಸಂದರ್ಭದಲ್ಲೂ ಹಿರಿಯ ನಾಗರೀಕರು ಹಾಗೂ ಅಂಗವಿಕಲ ಮತದಾರರಿಗೆ ಯಾವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ, ಕಠಿಣ ಪ್ರದೇಶದಲ್ಲಿ ಪೂಲಿಂಗ್‌ ಬೂತ್‌ಗಳನ್ನು ಹೇಗೆ ಸ್ಥಾಪನೆ ಮಾಡಲಾಗಿದೆ ಎನ್ನುವುದನ್ನು ವಿವರಿಸುವ ಚಿತ್ರಗಳನ್ನು ಪೋಸ್ಟ್‌ ಮಾಡಿದೆ.


ಇನ್ನೊಂದು ಟ್ವೀಟ್‌ನಲ್ಲಿ ಅಮ್ರೇಲಿ ಜಿಲ್ಲೆಯ ಶಿಯಾಲ್‌ಬೆಟ್‌ ಗ್ರಾಮದ ಮತದಾರರ ಚಿತ್ರಗಳನ್ನು ಚುನಾವಣಾ ಆಯೋಗ ಪೋಸ್ಟ್‌ ಮಾಡಿದೆ. ಸಂಪೂರ್ಣವಾಗಿ ಅರಬ್ಬಿ ಸಮುದ್ರದಿಂದ ಆವೃತ್ತವಾಗಿರುವ ಈ ಗ್ರಾಮವನ್ನು ದೋಣಿಯ ಮೂಲಕ ಮಾತ್ರವೇ ತಲುಪಬಹುದು. ಹಾಗಿದ್ದರೂ, ಚುನಾವಣಾ ಆಯೋಗ ಸಾಕಷ್ಟು ಪರಿಶ್ರಮಪಟ್ಟು ಐದು ಮತಗಟ್ಟೆಗಳನ್ನು ಸ್ಥಾಪನೆ ಮಾಡಿತ್ತು. ಇನ್ನೊಂದು ಚಿತ್ರದಲ್ಲಿ 104 ವರ್ಷದ ಮತದಾರ ರಾಮ್‌ಜೀ ಭಾಯ್‌ ಅವರಿಗೆ ಪೋಸ್ಟ್‌ ಮೂಲಕ ಮತ ಮಾಡುವ ಅವಕಾಶವಿದ್ದರೂ, ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದ್ದಾರೆ.

Gujarat Election: ಶತಾಯುಷಿಯ ಮತದಾನ, ಸೈಕಲ್‌ಗೆ ಸಿಲಿಂಡರ್‌ ಕಟ್ಟಿಕೊಂಡು ಮತ ಹಾಕಿದ ಕಾಂಗ್ರೆಸ್‌ ಶಾಸಕ!

ಇನ್ನೊಂದು ಮತಗಟ್ಟೆಯಲ್ಲಿ ವೈದ್ಯಕೀಯ ತಪಾಸಣೆಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಜುನಾಗಢ್‌ ಜಿಲ್ಲೆಯಲ್ಲಿ ಭಾರತದ ಮೊದಲ ಆರೋಗ್ಯ ಮತಗಟ್ಟೆ' ಎಂದು ಚುನಾವಣೆ ಆಯೋಗ ತಿಳಿಸಿದೆ. ಸುರೇಂದ್ರ ನಗರ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಅಂಧ ಮತದಾರರು ಪೋಸ್ ನೀಡಿರುವ ಚಿತ್ರವನ್ನು ಕೂಡ ಪ್ರಕಟಿಸಲಾಗಿದೆ.

50 ಕಿ.ಮೀ ರೋಡ್ ಶೋ ನಡುವೆ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಮೋದಿ!

ಚುನಾವಣಾ ಆಯೋಗದ ಪ್ರಕಾರ, 18 ರಿಂದ 19 ವರ್ಷದೊಳಗಿನ 5,74,560 ಮತದಾರರು ಗುಜರಾತ್‌ನಲ್ಲಿದ್ದಾರೆ. ಇದರಲ್ಲಿ 4,945 ಮತದಾರರು 99 ವರ್ಷಕ್ಕಿಂತ ಮೇಲ್ಪಟ್ಟವರು. 163 ಅನಿವಾಸಿ ಭಾರತೀಯ ಮತದಾರರಿದ್ದು, ಇದರಲ್ಲಿ 125 ಪುರುಷರು ಮತ್ತು 38 ಮಹಿಳೆಯರು ಇದ್ದಾರೆ. ಗುಜರಾತ್‌ನಲ್ಲಿ ಒಟ್ಟು 14,382 ಮತದಾನ ಕೇಂದ್ರಗಳಿದ್ದು, ಇವುಗಳಲ್ಲಿ 3,311 ನಗರ ಪ್ರದೇಶದಲ್ಲಿ ಮತ್ತು 11,071 ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಡಿಸೆಂಬರ್ 5 ರಂದು, ಮತಗಳ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.

Follow Us:
Download App:
  • android
  • ios