Asianet Suvarna News Asianet Suvarna News

ನಾಮಪತ್ರಕ್ಕೆ 10 ಸೂಚಕರ ಸಹಿ ತಾನೇ ಮಾಡಿದ ಅಭ್ಯರ್ಥಿ, ಕೇಸ್ ಬುಕ್..!

ಅಭ್ಯರ್ಥಿಯೋರ್ವ ತನ್ನ ನಾಮಪತ್ರಕ್ಕೆ ತಾನೇ 10 ಜನರ ಸೂಚಕರ ನಕಲಿ ಸಹಿ ಮಾಡಿ ಸಿಕ್ಕಿಬಿದ್ದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

A Candidate signed 10 nominees signature forgery In His MLC nomination at Haveri
Author
Bengaluru, First Published Oct 6, 2020, 6:54 PM IST
  • Facebook
  • Twitter
  • Whatsapp

ಹಾವೇರಿ, (ಅ.06): ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ರವಿ ಶಿವಪ್ಪ ಪಡಸಲಗಿ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದು, ಸೂಚಕರಾಗಿ ಸಹಿ ಮಾಡಿರುವ 10 ಮಂದಿಯ ಸಹಿಗಳು ನಕಲಿ ಎಂಬುದು ತನಿಖೆಯಿಂದ ಮಂಗಳವಾರ ಬೆಳಕಿಗೆ ಬಂದಿದೆ.

ರವಿ ಪಡಸಲಗಿ ಮೂಲತಃ ಬೆಂಗಳೂರಿನವರಾಗಿದ್ದು, ಇವರು ಸೂಚಕರ ಅನುಮತಿ ಪಡೆಯದೇ, ಮತದಾರರ ಪಟ್ಟಿಯಲ್ಲಿರುವ ಹಾವೇರಿ ಜಿಲ್ಲೆಯ ಸವಣೂರ ತಾಲ್ಲೂಕಿನ 10 ಮತದಾರರ ಹೆಸರು ಹಾಗೂ ಸಹಿಯನ್ನು ದುರ್ಬಳಕೆ ಮಾಡಿಕೊಂಡು ನಾಮಪತ್ರ ಸಲ್ಲಿಸಿದ್ದಾರೆ. 

ಶಿರಾ ಬೈ ಎಲೆಕ್ಷನ್‌ಗೆ ಅಭ್ಯರ್ಥಿ ​ಹೆಸ್ರು ಘೋಷಿಸಿದ ಕೆಲವೇ ಗಂಟೆಗಳಲ್ಲಿ JDSಗೆ ಬಿಗ್ ಶಾಕ್

ನಾಮಪತ್ರ ಪರಿಶೀಲನೆ ಸಂದರ್ಭ ಸಂಶಯ ಬಂದ ಕಾರಣ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಅವರು ಸವಣೂರಿಗೆ ಭೇಟಿ ನೀಡಿ, ಸೂಚಕರ ಸಹಿ ಇದ್ದ ನಾಲ್ವರನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಾಹಿತಿ ನೀಡಿದ್ದಾರೆ.

'ರವಿ ಪಡಸಲಗಿ ಎಂಬುವರು ನಮಗೆ ಪರಿಚಯವೇ ಇಲ್ಲ. ನಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಸೂಚಕರಾಗಿ ನಮೂದಾಗಿರುವ ನಾಲ್ವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ ಎಂದು  ಅನ್ನಪೂರ್ಣ ಮುದಕಮ್ಮನವರ  ತಿಳಿಸಿದ್ದಾರೆ.

ಇನ್ನು ಈ ಸಂಬಂಧ ಸವಣೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios