ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ 83,000 ಕೋಟಿ ರು. ಅನ್ಯಾಯ: ಸಿಎಂ ಸಿದ್ದರಾಮಯ್ಯ
‘ರಾಜ್ಯ ಬಿಜೆಪಿ ನಾಯಕರು ರಾಜ್ಯದ ಜನರ ಹಿತ ಮರೆತು ಮಾಡುತ್ತಿರುವ ರಾಜಕೀಯ ಹಾಗೂ ಕೇಂದ್ರದ ಮಲತಾಯಿ ಧೋರಣೆ ಯಿಂದ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹಾಳಾಗಿದೆ. ಕೇಂದ್ರದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲೇ ರಾಜ್ಯಕ್ಕೆ 83,000 ಕೋಟಿ ರು.ನಷ್ಟು ಅನ್ಯಾಯವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ವಿಧಾನಸಭೆ (ಡಿ.14): ‘ರಾಜ್ಯ ಬಿಜೆಪಿ ನಾಯಕರು ರಾಜ್ಯದ ಜನರ ಹಿತ ಮರೆತು ಮಾಡುತ್ತಿರುವ ರಾಜಕೀಯ ಹಾಗೂ ಕೇಂದ್ರದ ಮಲತಾಯಿ ಧೋರಣೆ ಯಿಂದ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹಾಳಾಗಿದೆ. ಕೇಂದ್ರದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲೇ ರಾಜ್ಯಕ್ಕೆ 83,000 ಕೋಟಿ ರು.ನಷ್ಟು ಅನ್ಯಾಯವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 3,542 ಕೋಟಿ ರು.ಗಳ ಪೂರಕ ಅಂದಾಜು ಪ್ರಸ್ತಾವನೆ ಹಾಗೂ ಈ ಕುರಿತ ಕರ್ನಾಟಕ ಧನ ವಿನಿಯೋಗ (4) ವಿಧೇಯಕಕ್ಕೆ ಅಂಗೀಕಾರ ಕೋರಿ ಮಾತನಾಡಿದ ಅವರು, ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಡೆದ ಆರೋಪ-ಪ್ರತ್ಯಾರೋಪದ ಬಳಿಕ 3,542 ಕೋಟಿ ರು.ಗಳ ಪೂರಕ ಅಂದಾಜು ಹಾಗ ಧನ ವಿನಿಯೋಗ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.ಪ್ರಸ್ತಾವಕ್ಕೆ ಅಂಗೀಕಾರ ಕೋರಿ ಮಾತನಾಡಿದ ಸಿದ್ದರಾಮಯ್ಯ, ಈಗಾಗಲೇ ಬಸವರಾಜ ರಾಯರೆಡ್ಡಿ ಪ್ರಸ್ತಾಪಿಸಿರುವಂತೆ 2018-19ರಲ್ಲಿ ಕೇಂದ್ರದ ಬಜೆಟ್ ಗಾತ್ರ 21.57 ಲಕ್ಷ ಕೋಟಿ ರು. ಇದ್ದಾಗ ರಾಜ್ಯಕ್ಕೆ ಕೇಂದ್ರದ ಅನುದಾನ, ತೆರಿಗೆ ಪಾಲು 58,753 ಕೋಟಿ ರು. ಬಂದಿತ್ತು. 2019-20ರಲ್ಲಿ 27,86 ಲಕ್ಷ ಕೋಟಿ ರು. ಬಜೆಟ್‌ನಲ್ಲಿ 61,786 ಕೋಟಿ ರು. ರಾಜ್ಯಕ್ಕೆ ಬಂದಿತ್ತು.
ಅವರಿಬ್ಬರ ಪಾಪದ ಕೊಡ ತುಂಬಿದೆ: ಸೋಮಣ್ಣ, ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಏಕವಚನದಲ್ಲಿ ವಾಗ್ದಾಳಿ
ಆದರೆ 15ನೇ ಹಣಕಾಸು ಆಯೋಗದ ವರದಿ ಯಲ್ಲಿ ಆದ ತಾರತಮ್ಯದಿಂದ 2023-24ರಲ್ಲಿ ಕೇಂದ್ರದ ಬಜೆಟ್ ೪೫.೦೩ ಲಕ್ಷ ಕೋಟಿ ರು. ಇದ್ದರೂ 50,257 ಕೋಟಿ ರು. ಮಾತ್ರ ಬಂದಿದೆ. ತನ್ಮೂಲಕ ಅಂದಾಜು 73 ಸಾವಿರ ಕೋಟಿ ರು. ನಷ್ಟ ಉಂಟಾಗಿದೆ.ಇನ್ನು 2023ರ ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಿದ್ದ ಅಂದಿನ ಸಿಎಂ ಬೊಮ್ಮಾಯಿ ಅವರು ಭದ್ರಾ ಮೇಲ್ದಂಡೆ ಯೋಜನೆಯಡಿ ಕೇಂದ್ರ 5,100 ಕೋಟಿ ರು. ನೀಡುವು ದಾಗಿ ಹೇಳಿದ್ದರು. ಈವರೆಗೆ ಹಣ ಬಂದಿಲ್ಲ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ೫,೪೯೫ ಕೋಟಿ ರು. ವಿಶೇಷ ಪ್ಯಾಕೇಜ್ ನೀಡುವುದಾಗಿ ಹೇಳಿಕೆ ನೀಡಿಲ್ಲ ಎಂದರು.
ಉದ್ದಿಮೆ ಸ್ಥಾಪನೆಗೆ 30 ದಿನದಲ್ಲಿ ಅನುಮತಿ: ಹೂಡಿಕೆದಾರರು ಉದ್ಯಮ ಸ್ಥಾಪನೆಗೆ ಸಲ್ಲಿಸಿದ ಅರ್ಜಿಗಳ ಕುರಿತು ಎಲ್ಲ ಇಲಾಖೆಗಳು ನಿಗದಿತ ಕಾಲಮಿತಿಯಲ್ಲಿ ತಮ್ಮ ಅಭಿಪ್ರಾಯ ನೀಡಬೇಕು. ಎಲ್ಲ ಷರತ್ತುಗಳನ್ನು ಪೂರೈಸುವ ಸಂದರ್ಭದಲ್ಲಿ ಏಕಗವಾಕ್ಷಿ ವ್ಯವಸ್ಥೆಯಲ್ಲಿ 30 ದಿನಗಳೊಳಗೆ ಅನುಮೋದನೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಸಿಎಂ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ: ಬಿ.ವೈ.ವಿಜಯೇಂದ್ರ ಟೀಕೆ
ಸಮಿತಿಯ ಮುಂದೆ ಮಂಡಿಸಲಾದ ಪ್ರಸ್ತಾವನೆಗಳ ಪರಿಶೀಲನೆಯ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಇಲ್ಲಿ ಒಪ್ಪಿಗೆ ಕೊಟ್ಟ ಬಳಿಕ ಕಡತಗಳು ಪುನಃ ವಿವಿಧ ಇಲಾಖೆಗಳಿಗೆ ಅಲೆಯುವಂತಾಗಬಾರದು. ಪ್ರಸ್ತಾವನೆಗಳ ಕಡತ ಇಲಾಖೆಗಳ ಅಭಿಪ್ರಾಯಕ್ಕಾಗಿ ಬಂದಾಗ ಇಲಾಖಾ ಸಚಿವರ ಗಮನಕ್ಕೆ ಈ ವಿಷಯವನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರಸ್ತಾವನೆಗಳ ಪರಿಶೀಲನೆಯಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿಗಳು, ನಿಗದಿತ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.