Asianet Suvarna News Asianet Suvarna News

Assembly session: 8 ಸಾವಿರ ಕೋಟಿ ರೂ. ಪೂರಕ ಅಂದಾಜು ಮಂಡನೆ: ಯಾವುದಕ್ಕೆ ಎಷ್ಟು ಅನುದಾನ?

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಧಾನಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು, ಅನುದಾನ, ಪ್ರವಾಸ, ಕೋವಿಡ್‌ ನಿಯಂತ್ರಣ ಇತ್ಯಾದಿ ಸೇರಿ  ಒಟ್ಟು 8,001.13 ಕೋಟಿ ರೂ. ಪೂರಕ ಅಂದಾಜು ಮಂಡನೆ ಮಾಡಲಾಗಿದೆ.

8 thousand crores Rs Supplementary Estimate Presentation How much grant for what sat
Author
First Published Dec 26, 2022, 6:03 PM IST

ಬೆಳಗಾವಿ (ಡಿ.26): ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಧಾನಸಭೆಯಲ್ಲಿ ಪೂರಕ ಅಂದಾಜು ಮಂಡನೆ ಮಾಡಲಾಯಿತು. ವಿವಿಧ ಅಭಿವೃದ್ಧಿ ಕಾಮಗಾರಿಗಳು, ಅನುದಾನ, ಪ್ರವಾಸ, ಕೋವಿಡ್‌ ನಿಯಂತ್ರಣ, ಸಾರ್ವಜನಿಕರ ಆರೋಗ್ಯ ಹಾಗೂ ಪಶುಗಳ ಚರ್ಮಗಂಟು ರೋಗ ನಿಯಂತ್ರಣ ಸೇರಿ  ಒಟ್ಟು 8,001.13 ಕೋಟಿ ರೂಪಾಯಿಗಳ ಪೂರಕ ಅಂದಾಜು ಮಂಡನೆ ಮಾಡಲಾಗಿದೆ.

ಚರ್ಮಗಂಟು ರೋಗದಿಂದ ಸಾವನ್ನಪ್ಪಿದ ಹಸುಗಳಿಗೆ ಪರಿಹಾರ ನೀಡಲು 30 ಕೋಟಿ ರೂ ನಿಗದಿ ಮಾಡಲಾಗಿದೆ. ವಿಧಾನಸಭಾ ಚುನಾವಣೆ ಪೂರ್ವ ಸಿದ್ಧತೆಗಾಗಿ 300 ಕೋಟಿ ರೂ ಮೀಸಲು ಇಡಲಾಗಿದೆ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರ ಹೆಲಿಕಾಪ್ಟರ್ ಬಿಲ್ ಪಾವತಿಗಾಗಿ 6 ಕೋಟಿ ರೂ. ಮೀಸಲಿಡಲಾಗಿದೆ. ನ್ಯಾ.ಭಕ್ತವತ್ಸಲ ಆಯೋಗಕ್ಕೆ 62 ಲಕ್ಷ ರೂ. ನೀಡಲಾಗಿದೆ. ಕರ್ನಾಟಕದಲ್ಲಿ ಜಿ-20 ಕಾರ್ಯಕಲಾಪಗಳಿಗೆ 26 ಕೋಟಿ ರೂ ನಿಗದಿ ಮಾಡಲಾಗಿದೆ. ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪುಟ್ಟಸ್ವಾಮಿ ಪೀಠಾಧಿಪತಿ ಆಗಿರುವ ವಿಶ್ವಗಾಣಿಗರ ಸಮೂದಾಯ ಚಾರಿಟೆಬಲ್ ಟ್ರಸ್ಟ್ ಗೆ 3.5 ಕೋಟಿ ರೂ. ಅನುದಾನ ಕೊಡಲಾಗಿದೆ. ಚಿಕ್ಕನಲ್ಲೂರು ಹೊಸಮಠಕ್ಕೆ 2 ಕೋಟಿ ರೂ. ಮೀಸಲು. ಈಡಿಗ ಜನಾಂಗದ ವಿಶೇಷ ಕೋಶ ಸೃಷ್ಟಿಸಲು 10 ಕೋಟಿ ರೂ. ನೀಡಲಾಗಿದೆ. 

ಕಿತ್ತೂರು ಕೋಟೆ ಪುನರ್‌ ನಿರ್ಮಾಣಕ್ಕೆ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

ಪುನೀತ್ ಸಮಾರಂಭಕ್ಕೆ 5 ಕೋಟಿ ರೂ. ನಿಗದಿ: ಬೆಳಗಾವಿಯಲ್ಲಿ ಜಗನ್ನಾಥ ಜೋಶಿ ಜನ್ಮಶತಾಬ್ಧಿ ಸ್ಮಾರಕ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ಕೊಡಲಾಗಿದೆ. ಗಿರೀಶ್ ಕಾರ್ನಾಡ್ ರಚಿತ ಕ್ರಾಸಿಂಗ್ ಟು ತಾಳಿಕೋಟಾ ನಾಟಕ ಪ್ರದರ್ಶನಕ್ಕೆ 15 ಲಕ್ಷ ಸಹಾಯಧನ. ರಂಗಶಂಕರ ಸಂಸ್ಥೆಗೆ 1 ಕೋಟಿ ರೂ ಆರ್ಥಿಕ ಸಹಾಯ. ಚಿಕ್ಕಮಗಳೂರು ಉತ್ಸವ ಆಚರಣೆಗೆ 5 ಕೋಟಿ ರೂ. ಮೀಸಲು. ಪುನೀತ್ ರಾಜಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ 5 ಕೋಟಿ ರೂ. ಮೀಸಲು. ಜಿ -20 ಶೃಂಗಸಭೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ 82 ಲಕ್ಷ ರೂ. ಮೀಸಲು. ಮೈಸೂರು ದಸರಾ ಉತ್ಸವ ಆಚರಣೆಗೆ 9 ಕೋಟಿ 50 ಲಕ್ಷ ರೂ. ಮೀಸಲು ಇಡಲಾಗಿದೆ. ಉಪಸಭಾಧ್ಯಕ್ಷರಾಗಿದ್ದ ದಿವಂಗತ ಆನಂದ ಮಾಮನಿ ಅವರ ವೈದ್ಯಕೀಯ ವೆಚ್ಚಕ್ಕಾಗಿ 46 ಲಕ್ಷ ರೂ. ಅನುದಾನ ನಿಗದಿ ಮಾಡಲಾಗಿದೆ.

Karnataka Politics: ಇಂದು ದೆಹಲಿಗೆ ತೆರಳಲಿರುವ ಸಿಎಂ: ಹೈಕಮಾಂಡ್ ಜೊತೆ ಹಲವು ವಿಚಾರಗಳ ಚರ್ಚೆ

ದೆಹಲಿಗೆ ತೆರಳಿದ‌ ಸಿಎಂ ಬೊಮ್ಮಾಯಿ‌:  ಬೆಳಗಾವಿ ಅಧಿವೇಶನದ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಮೂಲಕ ದೆಹಲಿಗೆ ತರೆಳಿದರು. ಇನ್ನು ಸಿಂಎ ಬೊಮ್ಮಾಯಿ ಅವರೊಂದಿಗೆ ಸಚಿವ ಗೋವಿಂದ ಕಾರಜೊಳ ಜೊತೆಗೆ ಹೋಗಿದ್ದಾರೆ. ಇಂದು ಸಂಜೆ 7 ಗಂಟೆಗೆ ಅಮಿತ್‌ಶಾ ಸೇರು ಹೈಕಮಾಂಡ್ ನಾಯಕರ ಭೇಟಿ ಮಾಡಿ ರಾತ್ರಿ ದೆಹಲಿಯಲ್ಲೇ ವಾಸ್ತವ್ಯ ಮಾಡಲಿದ್ಧಾರೆ. ನಾಳೆ‌ ಬೆಳಗ್ಗೆ ದೆಹಲಿಯಿಂದ ಬೆಳಗಾವಿಗೆ ವಾಪಸ್‌ ಬಂದು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

Follow Us:
Download App:
  • android
  • ios