Asianet Suvarna News Asianet Suvarna News

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ್ರೆ ಕರ್ನಾಟಕ ಕಾಂಗ್ರೆಸ್‌ಗೆ ಆಗುವ 8 ಲಾಭ-ನಷ್ಟಗಳು..!

ರಾಜ್ಯ ರಾಜಕಾರಣದ ಪವರ್‌ಫುಲ್ ರಾಜಕಾರಣಿ ಡಿ.ಕೆ.ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ ಚುಕ್ಕಾಣಿ ಹಿಡಿಯಲು ಕಾತರರಾಗಿದ್ದಾರೆ. ಕೆಪಿಸಿಸಿ ಸಾರಥ್ಯ ವಹಿಸುವ ಡಿಕೆಶಿ ಕನಸ್ಸು, ನನಸ್ಸಾಗುವ ಕಾಲ ಬಂದಿದೆ. ಅದಕ್ಕೆ ಹೈಕಮಾಂಡ್ ಅಂತಿಮ ಮುದ್ರೆಯೊಂದೇ ಬಾಕಿ. ಹಾಗಾದ್ರೆ ಡಿಕೆಶಿ ಕೆಪಿಸಿಸಿ ಬಾಸ್ ಆದ್ರೆ  ಕರ್ನಾಟಕ ಕಾಂಗ್ರೆಸ್‌ಗೆ ಆಗುವ ಲಾಭ-ನಷ್ಟಗಳೇನು..?

8 Profit loss To Congress If DK Shivakumar appoints KPCC President
Author
Bengaluru, First Published Jan 17, 2020, 9:22 PM IST

ಬೆಂಗಳೂರು, (ಜ.17): ಕೆಪಿಸಿಸಿ ಅಧ್ಯಕ್ಷ ಆಯ್ಕೆ ಕಂಗಟ್ಟು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಮಾಜಿ ಸಚಿವ ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಪಟ್ಟ ಕಟ್ಟುವುದು ಬಹುತೇಕ ಖಚಿತವಾಗಿದೆ. ಆದ್ರೆ, ಹೈಕಮಾಂಡ್‌ನಿಂದ ಅಧಿಕೃತ ಘೋಷಣೆಗೆ ಕಾಯಲಾಗುತ್ತಿದೆ.

ಹೈಕಮಾಂಡ್ ಅಧಿಕೃತ ಪ್ರಕಟಣೆ ಹೊರಡಿಸುವ ಮುನ್ನವೇ ಡಿಕೆ ಶಿವಕುಮಾರ್ ಫುಲ್ ಖುಷ್ ಆಗಿದ್ದಾರೆ. ಅಷ್ಟೇ ಅಲ್ಲದೇ ಅವರ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಹುದ್ದೆ: ಡಿಕೆಶಿ ಸುತ್ತ 4 ಗೋಡೆ ಕಟ್ಟಿದ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಎಂಬಿ ಪಾಟೀಲ್ ಪರ ಬ್ಯಾಟಿಂಗ್ ಮಾಡಿದರೂ ಸಹ ಹೈಕಮಾಂಡ್ ಡಿಕೆಶಿಯನ್ನು ನೇಮಿಸಲು ತೀರ್ಮಾನಿಸಿದೆ. ಹಾಗಾದ್ರೆ,  ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ್ರೆ ರಾಜ್ಯ ಕಾಂಗ್ರೆಸ್‌ಗೆ ಆಗುವ ಲಾಭ-ನಷ್ಟಗಳೇನು ಎನ್ನುವ ಅಂಶಗಳು ಈ ಕೆಳಗಿನಂತಿವೆ.

ಕೆಪಿಸಿಸಿಗೆ ಡಿಕೆ ಬಾಸ್ ಆದ್ರೆ ಲಾಭಗಳು
1. ಡಿ.ಕೆ.ಶಿವಕುಮಾರ್ಗಿರುವ ರಾಜಕೀಯ ವರ್ಚಸ್ಸು ಪಕ್ಷಕ್ಕೆ ಲಾಭ
2. ಹಳೆ ಮೈಸೂರು ಭಾಗದಲ್ಲಿ ಪಕ್ಷ ಕಟ್ಟಲು ಅನುಕೂಲಕರ ವಾತಾವರಣ
3. ಒಕ್ಕಲಿಗ ಮತಗಳ ಕ್ರೋಢಿಕರಣಕ್ಕೆ ಅವಕಾಶಗಳು ಸೃಷ್ಟಿಯಾಗುವ ಸಾಧ್ಯತೆ
4. ಕಳೆದ ಬಾರಿ ಜೆಡಿಎಸ್ ಕೈ ಹಾಕಿದ್ದ ಮತ ಬ್ಯಾಂಕ್‌ಗೆ ಹಸ್ತ ಚಾಚುವ ಡಿಕೆಶಿ 
6. ಹಿರಿಯರ ಮುನಿಸಿಗೆ ಮತ್ತು ವಲಸಿಗರ ನಡುವೆ ಸೇತುವೆಯಾಗುವ ಅವಕಾಶ
7. ಆಡಳಿರೂಢ ಸರ್ಕಾರಕ್ಕೆ ಟಾಂಗ್ ಕೊಡಲು ಸಂಘಟನೆಯ ಬಲವರ್ಧನೆಗೆ ಆದ್ಯತೆ
8. ಸಿದ್ದರಾಮಯ್ಯರ ಜೊತೆಗೂಡಿ ಹೋಗುವ ಸಾಮರ್ಥ್ಯ ವಿರುವ ನಾಯಕ

 ನಷ್ಟಗಳು
1. ಕಾಂಗ್ರೆಸ್ಸಿನಲ್ಲಿ ಒಂದು ವಿರೋಧಿ ಪಾಳಯ ಸದಾ ಸಕ್ರಿಯವಾಗಲಿದೆ
2. ಬಳ್ಳಾರಿ, ಬೆಳಗಾವಿ ರಾಜಕಾರಣದಲ್ಲಿ ಮೂಗು ತೂರಿಸಿದ್ದ ಪ್ರಕರಣಗಳು ಮುನ್ನೆಲೆಗೆ
3. ಸಿದ್ದರಾಮಯ್ಯ ಬಣದ ಬಹುತೇಕ ನಾಯಕರು ಅಂತರ ಕಾಪಾಡಿಕೊಳ್ಳುವ ಸಾಧ್ಯತೆ
4. ಕೆಪಿಸಿಸಿ ರೇಸ್‌ನಲ್ಲಿದ್ದ ಎಂ.ಬಿ.ಪಾಟೀಲ್ಗೆ ಪರ್ಯಾಯ ವ್ಯವಸ್ಥೆ ಮಾಡದಿದ್ರೆ ಸಂಕಷ್ಟ
5. ದೇವೇಗೌಡರ ವಿರುದ್ಧ ಮತ್ತೆ ರಾಜಕೀಯ ಎದುರಾಳಿಯಾಗಬೇಕಾದ ಅನಿವಾರ್ಯತೆ
6. ಒಕ್ಕಲಿಗ ಸಮುದಾಯದ ನಾಯಕ ದೇವೇಗೌಡ್ರೋ..? ಡಿಕೆಶಿಯೋ ಅನ್ನೋ ಜಿದ್ದಾಜಿದ್ದಿ
7. ಸಂಕಷ್ಟ ಎದುರಿಸುತ್ತಿರುವ ಡಿಕೆಶಿ ವಿರುದ್ಧ ಬಿಜೆಪಿ ಆರೋಪ ಪಟ್ಟಿ ಬಹಿರಂಗ
8. ಏಸು ಪ್ರತಿಮೆ ನಿರ್ಮಾಣ ಪ್ರಸ್ತಾಪಿಸಿ ಡಿಕೆಗೆ ಹಿಂದೂ ವಿರೋಧಿ ಹಣೆ ಪಟ್ಟಿ ಹಚ್ಚುವ ಯತ್ನ

Follow Us:
Download App:
  • android
  • ios