ಫಲಿತಾಂಶ ಬಿಜೆಪಿಗೆ ಲಾಭದಾಯಕ ಎಂದು ವಿಶ್ಲೇಷಿಸಿದ ಅಶೋಕ

ದೇವನಹಳ್ಳಿ ಯಲ್ಲಿ ಸಚಿವ ಆರ್ ಅಶೋಕ್ ಹೇಳಿಕೆ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಆಗಿದೆ/ ಬಿಜೆಪಿ ಏನನ್ನು ಕಳೆದುಕೊಂಡಿಲ್ಲ/ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯ ಗಳಲ್ಲಿ‌ ಬಿಜೆಪಿ ಇರಲಿಲ್ಲ/ ಈಗ ಪುದುಚೇರಿಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ.

5 state election results minister r ashok reaction mah

ದೇವನಹಳ್ಳಿ(ಮೇ 02) ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಆಗಿದೆ. ಬಿಜೆಪಿ ಏನನ್ನು ಕಳೆದುಕೊಂಡಿಲ್ಲ.  ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯ ಗಳಲ್ಲಿ‌ ಬಿಜೆಪಿ ಇರಲಿಲ್ಲ. ಈಗ ಪುದುಚೇರಿಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ ಎಂದು ಕಂದಾಯ  ಸಚಿವ ಆರ್ ಅಶೋಕ ಹೇಳಿದ್ದಾರೆ.

ಈ‌ ಕ್ರೇಡಿಟ್ ಮೋದಿ, ಅಮಿತ್ ಶಾ, ಜೆ ಪಿ‌ ನಡ್ಡಾಗೆ ಸಲ್ಲಬೇಕು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತಗಳಿಕೆ ಹೆಚ್ಚಿಸಿಕೊಂಡಿದೆ. ಕಳೆದ ಬಾರಿ 4 ಸ್ಥಾನ ದಿಂದ ಈಗ 100 ರ ಸಮೀಪ ಹೋಗಿದ್ದೇವೆ. ಕೊನೆ ಘಳಿಗೆಯಲ್ಲಿ ಕಾಂಗ್ರೆಸ್, ಸಿಪಿಐಎಂ, ತೃಣಮೂಲ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆ. ಹೀಗಾಗಿ ‌ಮತಗಳು‌ ಡಿವೈಡ್ ಆಗಲಿಲ್ಲ ಎಂದು ವಿಶ್ಲೇಷಣೆ ಮಾಡಿದರು.

'ಬದಲಾವಣೆ ಬಯಸಿದ್ದಾರೆ ಎನ್ನುವುದಕ್ಕೆ ಈ ಫಲಿತಾಂಶಗಳೆ ಸಾಕ್ಷಿ'

ಪಂಚರಾಜ್ಯ ಚುನಾವಣಾ ಫಲಿತಾಂಶ ಕೊರೋನಾ ಎರಡನೇ ಅಲೆ ನಡುವೆ ಹೊರಗೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಅಧಿಕಾರ ಹಿಡಿದುಕೊಂಡಿದ್ದಾರೆ. ಕೇರಳದಲ್ಲಿ ಪಿಣರಾಯಿ ವಿಜಯನ್  ಮತ್ತೆ ಅಧಿಕಾರ ಹಿಡಿದಿದ್ದಾರೆ. 

ಬೆಳಗಾವಿ  ಲೋಕಸಭಾ ಕ್ಷೇತ್ರ ಮತ್ತು ಬಸವಕಲ್ಯಾಣದಲ್ಲಿ ಬಿಜೆಪಿ ಗೆದ್ದರೆ ಮಸ್ಕಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ದೇಶದ ಲೆಕ್ಕದಲ್ಲಿ ಹೇಳುವುದಾದರೆ ಕಾಂಗ್ರೆಸ್ ಗೆ ಶೂನ್ಯ ಸಂಪಾದನೆ.

Latest Videos
Follow Us:
Download App:
  • android
  • ios