ಬೆಂಗಳೂರು, (ಮಾ.07): ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಯುಟರ್ನ್ ಹೊಡೆದಿದ್ದಾರೆ.

"

ಹೌದು...ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮಾರ್ಚ್ 2 ರಂದು ನೀಡಿದ್ದ ದೂರನ್ನು ದಿನೇಶ್ ಕಲ್ಲಹಳ್ಳಿ ಹಿಂಪಡೆಯುವ ಮೂಲಕ ಪ್ರಕರಣ ಉಲ್ಟಾ ಹೊಡೆದಿದೆ. ವಕೀಲ ಕುಮಾರ್ ಪಾಟೀಲ್ ಮೂಲಕ ದೂರು ಹಿಂಪಡೆಯುವ ಪತ್ರವನ್ನು ದಿನೇಶ್ ಕಲ್ಲಹಳ್ಳಿ ರವಾನಿಸಿದ್ದಾರೆ. 

ಜಾರಕಿಹೊಳಿ ರಾಸಲೀಲೆ ಸಿ.ಡಿ. ಕೇಸ್ ವಾಪಸ್ ಪಡೆದಿದ್ಯಾಕೆ? ಕಾರಣ ಕೊಟ್ಟ ಕಲ್ಲಹಳ್ಳಿ

 ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ವಾಪಸ್ ಪಡೆದುಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಹಲವು ಪ್ರಶ್ನೆಗಳ ಜೊತೆ ಅನುಮಾನಗಳು ಸಹ ಉದ್ಭವಿಸಿವೆ.

ಕೇಸ್‌ ವಾಪಸ್‌ಗೆ 5 ಕಾರಣಗಳು
ಇನ್ನು ಈ ಕೇಸ್ ವಾಪಸ್ ಪಡೆಯುವ ಬಗ್ಗೆ ದಿನೇಶ್ ಕಲ್ಲಹಳ್ಳಿ ಬರೆದಿರುವ ತಮ್ಮ ಪತ್ರದಲ್ಲಿ 5 ಪ್ರಮುಖ ಕಾರಣಗಳನ್ನು ವಿವರವಾಗಿ ಉಲ್ಲೇಖಿಸಿದ್ದಾರೆ. ಅವು ಈ ಕೆಳಗಿನಂತಿವೆ.

1.ದೂರುದಾರರನ್ನೇ ಟಾರ್ಗೆಟ್ ಮಾಡಲಾಗ್ತಿರೋದು
2.ಮಾಜಿ ಸಿಎಂ ಕುಮಾರಸ್ವಾಮಿ ಅವರಿಂದ 5 ಕೋಟಿ ರೂ. ಡೀಲ್ ಆರೋಪ.
3.ಯುವತಿಯ ಚಾರಿತ್ರ್ಯ ಹರಣ
4.ಸಂತ್ರಸ್ತೆಯನ್ನೇ ಅಪರಾಧಿ ಎಂದು ಬಿಂಬಿಸುತ್ತಿರೋದು
5.ರಾಜಕೀಯ ಪ್ರಭಾವದ ಬಗ್ಗೆ ಚರ್ಚಿಸದೇ, ದೂರುದಾರರ ಪ್ರಮಾಣಿಕತೆ ಪ್ರಶ್ನಿಸುತ್ತಿರೋದು