ಪಟನಾ(ಜೂ.24): ವಿಧಾನಸಭೆ ಚುನಾವಣೆ ಚುನಾವಣೆ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಲಾಲುಪ್ರಸಾದ್‌ ಯಾದವ್‌ ಅವರ ರಾಷ್ಟ್ರೀಯ ಜನತಾದಳಕ್ಕೆ (ಆರ್‌ಜೆಡಿ) ಜೆಡಿಯು ನೇತಾರ ಹಾಗೂ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ದೊಡ್ಡ ಶಾಕ್‌ ನೀಡಿದ್ದಾರೆ. ವಿಧಾನಪರಿಷತ್‌ನ 8 ಆರ್‌ಜೆಡಿ ಸದಸ್ಯರ ಪೈಕಿ ಐವರು ಸದಸ್ಯರು ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿ ಜೆಡಿಯು ಸೇರಿದ್ದಾರೆ.

ಬಿಹಾರ ಚುನಾವಣೆ: ಕೊರೋನಾ ಪೀಡಿತರಿಗೆ ಅಂಚೆ ಮತ ಅವಕಾಶ!

ಇದೇ ವೇಳೆ ಲಾಲು ಅವರ ಆಪ್ತ ಬಳಗದಲ್ಲಿದ್ದ ಪಕ್ಷದ ಸಂಸ್ಥಾಪಕ ಸದಸ್ಯ, ಹಿರಿಯ ಮುಖಂಡ ರಘುವಂಶ ಪ್ರಸಾದ್‌ ಸಿಂಗ್‌ ಅವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ಕೂಡ ಜೆಡಿಯು ಸೇರುವ ಸಾಧ್ಯತೆ ಇದೆ.

ಕೊರೋನಾಪೀಡಿತರಾಗಿ ಪಟನಾ ಏಮ್ಸ್‌ನಲ್ಲಿರುವ ರಘುವಂಶ ಅವರು ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ಘೋಷಿಸಿ, ‘ಇತ್ತೀಚೆಗೆ ಆರ್‌ಜೆಡಿಗೆ ಸೇರ್ಪಡೆಯದ ಕೆಲವರ ಬಗ್ಗೆ ನನ್ನ ಸಮ್ಮತಿ ಇಲ್ಲ’ ಎಂದಿದ್ದಾರೆ. ಮಾಜಿ ಮಾಫಿಯಾ ಡಾನ್‌ ರಾಮಾ ಸಿಂಗ್‌ ಆರ್‌ಜೆಡಿ ಸೇರ್ಪಡೆ ಸಾಧ್ಯತೆ ಬಗ್ಗೆ ಅವರು ಅಸಂತೋಷಗೊಂಡಿದ್ದಾರೆ ಎನ್ನಲಾಗಿದೆ.

ಆರ್‌ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಖಮರ್‌ ಆಲಂ, ಸಂಜಯ ಪ್ರಸಾದ್‌, ರಾಧಾಚರಣ ಸೇಠ್‌, ರಣವಿಜಯ ಕುಮಾರ್‌ ಸಿಂಗ್‌ ಹಾಗೂ ದಿಲೀಪ್‌ ರಾಯ್‌ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ ಪರಿಷತ್‌ ಸದಸ್ಯರು. ಆದರೆ ಪರಿಷತ್‌ನ 8 ಸದಸ್ಯರ ಪೈಕಿ ಅರ್ಧಕ್ಕೂ ಹೆಚ್ಚು ಅಂದರೆ 5 ಸದಸ್ಯರು ರಾಜೀನಾಮೆ ನೀಡಿರುವ ಕಾರಣ ಇವರು ಅನರ್ಹರಾಗಲ್ಲ. ಇವರನ್ನು ಜೆಡಿಯು ಸಹ-ಸದಸ್ಯರು ಎಂದು ಪರಿಗಣಿಸುವುದಾಗಿ ಪರಿಷತ್‌ ಸಭಾಪತಿ ತಿಳಿಸಿದ್ದಾರೆ.

ನಿತೀಶ್‌ ನಾಯಕತ್ವದಲ್ಲೇ ಬಿಹಾರ ಎಲೆಕ್ಷನ್‌: ಅಮಿತ್‌ ಶಾ ಘೋಷಣೆ

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"