ಕಡೂರು ಕ್ಷೇತ್ರದ ಅಲ್ಪಸಂಖ್ಯಾತರ ಅಭಿವೃದ್ದಿಗೆ 5 ಕೋಟಿ :ಶಾಸಕ ಕೆ.ಎಸ್.ಆನಂದ್
ಕ್ಷೇತ್ರದಲ್ಲಿರುವ ಅಲ್ವಸಂಖ್ಯಾತರ ವಾಸಿಸುವ ಬಡಾವಣೆಗಳಲ್ಲಿ ರಸ್ತೆ, ಬಾಕ್ಸ್ ಚರಂಡಿ, ಖಬರಸ್ಥಾನ ಅಭಿವೃದ್ಧಿ ಮತ್ತಿತರ ಕಾಮಗಾರಿಗಳಿಗೆ 5 ಕೋಟಿ ಹಣಬಿಡುಗಡೆಯಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಬೀರೂರು (ಮಾ.09): ಕ್ಷೇತ್ರದಲ್ಲಿರುವ ಅಲ್ವಸಂಖ್ಯಾತರ ವಾಸಿಸುವ ಬಡಾವಣೆಗಳಲ್ಲಿ ರಸ್ತೆ, ಬಾಕ್ಸ್ ಚರಂಡಿ, ಖಬರಸ್ಥಾನ ಅಭಿವೃದ್ಧಿ ಮತ್ತಿತರ ಕಾಮಗಾರಿಗಳಿಗೆ 5 ಕೋಟಿ ಹಣಬಿಡುಗಡೆಯಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಪಟ್ಟಣದ ಹಳೇಪೇಟೆ ದರ್ಗಾರಸ್ತೆಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ವಾಸ್ತವ ಅರಿತು ಸ್ಥಳೀಯ ನಿವಾಸಿಗಳಿಗೆ ಮಾತು ನೀಡಿದ್ದೆ, ಅದರಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯೊಂದಿಗೆ ಚರ್ಚಿಸಿ ಇಲ್ಲಿ ನಡೆಯಬೇಕಾದ ಕಾಮಗಾರಿಗಳಿಗೆ 5 ಕೋಟಿ ಮಂಜೂರು ಮಾಡಿಸಿದ್ದು ಈಗ ಕಾಮಗಾರಿಗಳಿಗೆ ಚಾಲನೆ ನೀಡಿ ನುಡಿದಂತೆ ನಡೆದಿದ್ದೇನೆ ಎಂದರು.
5 ಕೋಟಿ ರು. ಗಳಲ್ಲಿ ಬೀರೂರು ಪಟ್ಟಣದ ಅಲ್ಪಸಂಖ್ಯಾತರ ಬಡಾವಣೆಗಳಾದ ಹಳೇಪೇಟೆ, ಅಂಜುಮಾನ್ ಮೊಹಲ್ಲ 2 ಬಡಾವಣೆಗಳಿಗೆ 1. 35 ಕೋಟಿ ರು. ಗಳ ಕಾಂಕ್ರೀಟ್ ರಸ್ತೆ ಹಾಗೂ ಕೆಲವು ಚರಂಡಿಗಳನ್ನು ನಿರ್ಮಾಣ ಮಾಡಿಸ ಲಾಗುವುದು. ಜೊತೆಗೆ ಕಡೂರಿಗೆ ವಿವಿಧ ಖಬರಸ್ಥಾನ, ದರ್ಗಾಅಭಿವೃದ್ಧಿಗೆ 1.15 ಕೋಟಿ ಹಣ ಮಂಜೂರಾಗಿದೆ. ಬೀರೂರಿನ ದರ್ಗಾ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ, ಖಬರಸ್ಥಾನ ಅಭಿವೃದ್ದಿಗೆ 25ಲಕ್ಷ ಮಂಜೂರಾಗಿದೆ. ಕಡೂರು ಇತಿಹಾಸದಲ್ಲೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ 5ಕೋಟಿ ಬಿಡುಗಡೆಯಾಗಿರುವುದು ಇದೆ ಮೊದಲ ಬಾರಿ ಎಂದರು.
ಕಾಂಗ್ರೆಸ್ ಸದಾ ಕಾಲ ದೇಶದಲ್ಲಿ ಜನರ ಕಲ್ಯಾಣ ಬಯಸುವ ಏಕೈಕ ಪಕ್ಷ: ಶಾಸಕ ಜಿ.ಎಸ್.ಪಾಟೀಲ
ಮುಜರಾಯಿ ಇಲಾಖೆಯಿಂದ ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ 5.5ಕೋಟಿ ಮಂಜೂರು ಮಾಡಿಸಲಾಗಿದೆ. ಅದಕ್ಕೂ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಹಿಂದುಳಿದ ವರ್ಗಗಳ ಸಮುದಾಯ ಭವನ ನಿರ್ಮಾಣ, ಅಭಿವೃದ್ಧಿಗೆ 6.40ಕೋಟಿ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು. ಪಟ್ಟಣದ ಹಿಂದು ರುದ್ರಭೂಮಿ ಪಕ್ಕದ ಮೋಕ್ಷಧಾಮಕ್ಕೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಹಾದೂ ಹೋಗಿದ್ದರಿಂದ ಹೊಸ ಮೋಕ್ಷಧಾಮ ನಿರ್ಮಾಣಕ್ಕೆ ಸರ್ಕಾರದಿಂದ ಬಿಡುಗಡೆಯಾಗಿದ್ದ ಹಣದ ದುರುಪಯೋಗವಾಗಿ ಕಾಮಗಾರಿ ಕುಂಠಿತವಾಗಿ ಪಟ್ಟಣದ ಜನತೆಗೆ ತೊಂದರೆಯಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ಆನಂದ್, ಈ ವಿಷಯದ ಬಗ್ಗೆ ಮಾಹಿತಿ ಇಲ್ಲ, ಪುರಸಭೆ ಮುಖ್ಯಾಧಿಕಾರಿ ಬಳಿ ಚರ್ಚಿಸಿ ಕಾಮಗಾರಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂದರು.
ಸರ್ಕಾರ ಪುರಸಭೆ ಕಸವಿಲೇವಾರಿಗೆ ಹಿರಿಯಂಗಳ ಸಮೀಪದ ಘನತ್ಯಾಜ್ಯ ನಿರ್ವಹಣ ಘಟಕ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವ ಕಾರಣ ಪುರಸಭೆಯವರು ಪಟ್ಟಣದ ಘನತ್ಯಾಜ್ಯವನ್ನು ಯಗಟಿ ರಸ್ತೆಯ ಆಶ್ರಯ ಬಡಾವಣೆ ಹಾಗೂ ಸಿಕ್ಕಸಿಕ್ಕ ಕಡೆಯಲ್ಲಿ ಸುರಿದು ರೋಗ ರುಜಿನಕ್ಕೆ ಕಾರಣವಾಗಿದೆ ಇದನ್ನು ಬಗೆಹರಿಸುವಂತೆ ಶಾಸಕರಿಗೆ ಸಾರ್ವಜನಿಕರು ಮನವಿ ಮಾಡಿದರು. ಪಂಚಾಯತ್ ರಾಜ್ ಮತ್ತು ಪಿಆರ್‌ಐಡಿ ಇಲಾಖೆಯಿಂದ ಸುಮಾರು 15ಕೋಟಿ ಅನುದಾನವನ್ನು ಗ್ರಾಮಾಂತರ ಭಾಗದ ರಸ್ತೆ ಅಭಿವೃದ್ದಿಗೆ ಮಂಜೂರಾಗಿದ್ದು ಆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಮತದಾರರಿಗೆ ನೀಡಿದ್ದ ಭರವಸೆ ಈಡೇರಿಸುವೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
ಜೊತೆಗೆ ಪಿಡಬ್ಲೂ ಡಿ ಇಲಾಖೆ 30ಕೋಟಿ ಕಾಮಗಾರಿ ನಡೆಯುತ್ತಿದ್ದು, ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ 20ಕೋಟಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಶಾಸಕ ಆನಂದ್ ತಿಳಿಸಿದರು. ಕಾಂಗ್ರೆಸ್ ಮುಖಂಡ ಬೀರೂರು ದೇವರಾಜ್, ಪುರಸಭೆ ಸದಸ್ಯರಾದ ಸಮೀಉಲ್ಲಾ, ಬಿ.ಕೆ.ಶಶಿಧರ್, ಜಾಮೀಯ ಮಸೀದಿ ಅಧ್ಯಕ್ಷ ಅಕ್ಬರ್ ಅಲಿ, ಖಲೀಲ್ ಅಹಮದ್, ಮಹಮದ್ ಪಯಾಜ್, ಮುಬಾರಕ್, ಅನಂತ್, ಆಲುಗಡೆ ಪ್ರದೀಪ್ ಸೇರಿದಂತೆ ಮತ್ತಿತರರು ಇದ್ದರು.