ಕಾಂಗ್ರೆಸ್ ಸದಾ ಕಾಲ ದೇಶದಲ್ಲಿ ಜನರ ಕಲ್ಯಾಣ ಬಯಸುವ ಏಕೈಕ ಪಕ್ಷ: ಶಾಸಕ ಜಿ.ಎಸ್.ಪಾಟೀಲ

ಮತದಾರ ಪ್ರಭುಗಳು ವಿಧಾನಸಭೆಯ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ನಮ್ಮ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರಿಂದ ಸ್ಪಷ್ಪ ಬಹುಮತ ಪಡೆಯಲು ಸಾಧ್ಯವಾಯಿತು. ನಮ್ಮ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರ ಬದುಕಿಗೆ ಆಸರೆಯಾಗುತ್ತಿರುವುದನ್ನು ವಿರೋಧ ಪಕ್ಷದವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. 

Congress is the only party in country that always wants welfare of people Says MLA GS Patil gvd

ಡಂಬಳ (ಮಾ.09): ಮತದಾರ ಪ್ರಭುಗಳು ವಿಧಾನಸಭೆಯ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ನಮ್ಮ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರಿಂದ ಸ್ಪಷ್ಪ ಬಹುಮತ ಪಡೆಯಲು ಸಾಧ್ಯವಾಯಿತು. ನಮ್ಮ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರ ಬದುಕಿಗೆ ಆಸರೆಯಾಗುತ್ತಿರುವುದನ್ನು ವಿರೋಧ ಪಕ್ಷದವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸದಾ ಕಾಲ ದೇಶದಲ್ಲಿ ಜನರ ಕಲ್ಯಾಣ ಬಯಸುವ ಏಕೈಕ ಪಕ್ಷ ನಮ್ಮದು. ಚುನಾವಣೆಯ ಪೂರ್ವದಲ್ಲಿ ನೀಡಿದಂತ ಭರವಸೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ನಮ್ಮದು ನುಡಿದಂತೆ ನಡೆಯುವ ಪಕ್ಷ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅಭಿಪ್ರಾಯಪಟ್ಟರು.

ಡಂಬಳ ಗ್ರಾಮದ ತೋಂಟದಾರ್ಯ ಕಲಾಭವನದಲ್ಲಿ ಮುಂಡರಗಿ ತಾಲೂಕಿನ ಗ್ಯಾರಂಟಿ ಫಲಾನುವಿಗಳ ಸಮಾವೇಶದ ಕಾರ್ಯಕ್ರಮದ ಪ್ರಯುಕ್ತ ಮುಂಡರಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜನೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಪಕ್ಷದ ವಿಚಾರ ತತ್ವ ಸಿದ್ಧಾಂತ ಶ್ರೀಮಂತರ ಪರವಾಗಿಲ್ಲ. ಬಡವರು, ಶೋಷಿತರು, ಹಿಂದುಳಿದವರ ಪರವಾಗಿ ನಮ್ಮ ಯೋಜನೆಗಳಿವೆ. ನಮ್ಮ ಕಾಂಗ್ರೆಸ್ ಸಂವಿಧಾನದ ಆಶಯದಂತೆ ಆಡಳಿತವನ್ನು ನಡೆಸುತ್ತದೆ. ಹೀಗಾಗಿ ಉಪಕಾರ ಮಾಡಿದವರನ್ನು ಸ್ಮರಿಸುವದು ನಮ್ಮ ಸಂಪ್ರದಾಯ. ಆ ಹಿನ್ನೆಲೆಯಲ್ಲಿ ಇದೇ ಮಾ. 12ರಂದು ನಡೆಯುವ ತಾಲೂಕು ಮಟ್ಟದ ಗ್ಯಾರಂಟಿ ಸಮಾವೇಶದಲ್ಲಿ ಸಾವಿರಾರು ಮಹಿಳಾ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು.

ಮತದಾರರಿಗೆ ನೀಡಿದ್ದ ಭರವಸೆ ಈಡೇರಿಸುವೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಜಾತ ಎನ್. ದೊಡ್ಡಮನಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸರ್ವರ ಹಿತ, ಸಾಮಾಜಿಕ ಬದಲಾವಣೆ ಸೇರಿದಂತೆ ಸಮಾಜದ ಮುಖ್ಯವಾಹಿನಿಗೆ ಪ್ರತಿಯೊಬ್ಬರು ಬರಬೇಕು ಎನ್ನುವ ಉದ್ದೇಶ ತತ್ವ ನಮ್ಮ ಪಕ್ಷದು ಎಂದರು. ಮುಂಡರಗಿ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಡಿ. ಮೊರನಾಳ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಎಸ್.ಡಿ. ಮಕಾಂದಾರ, ಬಸವರಾಜ ಮೇಟಿ ಇತರ ಮುಖಂಡರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಯಶಸ್ವಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಮುಖ್ಯಮಂತ್ರಿ ಹುದ್ದೆಗೆ ಯಾವ ಜಾತಿ, ಕುಲದ ಮಾನದಂಡವಲ್ಲ: ಶಾಸಕ ಕೆ.ಎಂ.ಉದಯ್

ವೇದಿಕೆಯ ಮೇಲೆ ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ಯುವಮುಖಂಡ ಮಿಥುನಗೌಡ ಪಾಟೀಲ. ವಿ.ಎಸ್. ಯರಾಸಿ, ಗೋಣಿಬಸಪ್ಪ ಕೊರ್ಲಹಳ್ಳಿ, ರಾಮು ಕಲಾಲ, ಸೋಮಣ್ಣ ಗುಡ್ಡದ, ಮಹೇಶ ಕೊರ್ಲಹಳ್ಳಿ, ಪುಲಕೇಶಗೌಡ ಪಾಟೀಲ, ಬಿ.ಎ. ಕೇರಿ, ಚನ್ನಪ್ಪ ಜಗಲಿ, ಬಹುದ್ದೂರ ದೇಸಾಯಿ, ಭುವನೇಶ್ವರಿ ಕಲ್ಲಕುಟಕರ, ಮರಿತೆಮ್ಮಪ್ಪ ಆದಮ್ಮನವರ, ಮರಿಯಪ್ಪ ಸಿದ್ದಣ್ಣವರ, ಕುಮಾರಸ್ವಾಮಿ ಕದಾಂಪೂರ, ಹಾಲಪ್ಪ ಕಬ್ಬೇರಹಳ್ಳಿ, ಮಳ್ಳಪ್ಪ ಜೊಂಡಿ, ನಾಗರಾಜ ಸಜ್ಜನರ, ಕಾಶಪ್ಪ ಅಳವಂಡಿ, ಶರಣಪ್ಪ ಶಿರುಂಧ, ಅಮರೇಶ ಹಿರೇಮಠ,ಪ್ರಕಾಶ ಸಜ್ಜನ,ಶರಣಪ್ಪ ಮುದಿಯಜ್ಜನವರ, ಮಹೇಶ ಗಡಗಿ, ಜಾಕೀರ ಮೂಲಿಮನಿ, ಬಸುರಡ್ಡಿ ಬಂಡಿಹಾಳ, ಬಾಬು ಮೂಲಿಮನಿ, ಬಾಬುಸಾಬ ಸರಕಾವಾಸ, ಅಶೋಕ ಹಡಪದ, ಸುರೇಶ ಗಡಗಿ, ಬುಡ್ನೆಸಾಬ ಅತ್ತಾರ, ಸೇರಿದಂತೆ ಮುಂಡರಗಿ ತಾಲೂಕಿನ ವಿವಿಧ ಘಟಕಗಳ ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

Latest Videos
Follow Us:
Download App:
  • android
  • ios