Asianet Suvarna News Asianet Suvarna News

ರಾಜ್ಯಕ್ಕೆ ಸದ್ಯದಲ್ಲೇ 3ನೇ ಮುಖ್ಯಮಂತ್ರಿ: ಟ್ವೀಟ್‌ ಮಾಡಿ ಬಿಜೆಪಿ, ಸಿಎಂ ಕಾಲೆಳೆದ ಕಾಂಗ್ರೆಸ್‌

  • ರಾಜ್ಯಕ್ಕೆ ಸದ್ಯದಲ್ಲೇ 3ನೇ ಮುಖ್ಯಮಂತ್ರಿ ಎಂದ ಕಾಂಗ್ರೆಸ್‌
  • ಪ್ರತಿ ಸಿಎಂರಿಂದ ಬಿಜೆಪಿ ವರಿಷ್ಠರಿಗೆ .2500 ಕೋಟಿ
  • ಟ್ವೀಟ್‌ ಮಾಡಿ ಬಿಜೆಪಿ, ಸಿಎಂ ಕಾಲೆಳೆದ ಕಾಂಗ್ರೆಸ್‌
3rd Chief Minister to karnataka soon Congress tweets rav
Author
Bengaluru, First Published Aug 10, 2022, 4:00 AM IST

ಬೆಂಗಳೂರು (ಆ.10) : ಮುಖ್ಯಮಂತ್ರಿ ಗಾದಿಯಿಂದ ಇಳಿಯಲು ಬಸವರಾಜ ಬೊಮ್ಮಾಯಿ ಅವರು ಗಂಟೆಗಳನ್ನು ಎಣಿಸುತ್ತಿದ್ದಾರೆ ಎನಿಸುತ್ತಿದೆ. ತಲಾ 2500 ಕೋಟಿಯಂತೆ ಮೂರನೇ ಮುಖ್ಯಮಂತ್ರಿ ನೇಮಕದ ಮೂಲಕ ಒಟ್ಟು ಸಂಪಾದನೆ 7500 ಕೋಟಿ ರು., ಬಿಜೆಪಿ ಹೈಕಮಾಂಡ್‌ ಸಂಪಾದನೆಗೆ ಅದ್ಭುತ ದಾರಿ ಕಂಡುಕೊಂಡಿದೆ!’ ಇದು, ರಾಜ್ಯದಲ್ಲಿ ಮತ್ತೆ ಕೇಳಿಬರುತ್ತಿರುವ ಮುಖ್ಯಮಂತ್ರಿ ಬದಲಾವಣೆ ವದಂತಿ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಹೈಕಮಾಂಡ್‌ಅನ್ನು ಪ್ರತಿಪಕ್ಷ ಕಾಂಗ್ರೆಸ್‌ ಕಾಲೆಳೆದಿರುವ ಪರಿ.

ಸಿಎಂ ಬದಲಾವಣೆ: ಈ ಹಿಂದೆ ಮುಖ್ಯಮಂತ್ರಿ ಬದಲಿಸಿದ ಉದಾಹರಣೆ ಕೊಟ್ಟ ಬಿಜೆಪಿ ನಾಯಕ

ಈ ಸಂಬಂಧ ಸರಣಿ ಟ್ವೀಟ್‌(Tweets) ಮಾಡಿರುವ ಕರ್ನಾಟಕ ಕಾಂಗ್ರೆಸ್‌(Karnataka Congress), ‘ಮೊದಲ ಸಿಎಂ 2500 ಕೋಟಿ, ಎರಡನೇ ಸಿಎಂ 2500 ಕೋಟಿ, ಮೂರನೇ ಸಿಎಂ 2500 ಕೋಟಿ ಒಟ್ಟು ಸಂಪಾದನೆ 7500 ಕೋಟಿ! ಬಿಜೆಪಿ ಹೈಕಮಾಂಡ್‌(BJP High Command) ಸಂಪಾದನೆಗೆ ಅದ್ಭುತ ದಾರಿ ಕಂಡುಕೊಂಡಿದೆ. ಬೊಮ್ಮಾಯಿ ಅವರೇ ನಿಮ್ಮ ಕಂತು ತೀರಿತೇ? ಅಥವಾ 40% ಕಮೀಷನ್‌ನಲ್ಲಿ ಹೈಕಮಾಂಡ್‌ ಪಾಲು ತಲುಪಿಸಲು ವಿಫಲರಾದ್ರಾ?’ ಎಂದು ಛೇಡಿಸಿದೆ.

‘ಅಮಿತ್‌ ಶಾ(Amit Shah) ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ! 40% ಸರ್ಕಾರದಲ್ಲಿ ‘3ನೇ ಸಿಎಂ’ ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ! ‘ಬೊಮ್ಮಾಯಿಯವರ ಆಡಳಿತದಲ್ಲಿ ‘ಆಕ್ಷನ್‌’ ಇಲ್ಲದಕ್ಕೆ ಸಿಎಂ ಬದಲಾವಣೆಯ ‘ರಿಯಾಕ್ಷನ್‌’ ಸೃಷ್ಟಿಯಾಗಿದೆ! ಪ್ರವೀಣ್‌ ಹತ್ಯೆ, ಕಾರ್ಯಕರ್ತರ ರಾಜೀನಾಮೆ, ಬಲಪಂಥೀಯ ಸಂಘಟನೆಗಳ ಆಕ್ರೋಶ, ಗೃಹ ಸಚಿವರ ಮನೆ ಮೇಲೆ ದಾಳಿ ಈ ಎಲ್ಲವೂ ಕರ್ನಾಟಕದ ಬಿಜೆಪಿಯೊಳಗಿನ ಅತೃಪ್ತ ಆತ್ಮಗಳು ಕುರ್ಚಿ ಕಸಿಯುವ ಪೂರ್ವ ನಿಯೋಜಿತ ಕೃತ್ಯಗಳಾಗಿರಬಹುದೇ ಬೊಮ್ಮಾಯಿ ಅವರೇ’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಸುಳಿವು, ಕನಸು ಕಾಣಬೇಡಿ ಎಂದ ಆರ್ ಅಶೋಕ್..

ಆರೆಸ್ಸೆಸ್‌ ಹಾಗೂ ಬಿಜೆಪಿ ರಾಷ್ಟ್ರವ್ಯಾಧಿಗಳು: ಕಾಂಗ್ರೆಸ್‌

ಬೆಂಗಳೂರು: ನಾಗಪುರದ ಆರೆಸ್ಸೆಸ್‌ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದ ಬಗ್ಗೆ ಹಾಗೂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕ್ವಿಟ್‌ ಇಂಡಿಯಾ ದಿನ ಆಚರಿಸದ ಕುರಿತು ಪ್ರಶ್ನಿಸಿರುವ ಪ್ರತಿಪಕ್ಷ ಕಾಂಗ್ರೆಸ್‌, ‘ಆರೆಸ್ಸೆಸ್‌ ಮತ್ತು ಬಿಜೆಪಿ ರಾಷ್ಟ್ರವಾದಿಗಳಲ್ಲ, ರಾಷ್ಟ್ರವ್ಯಾಧಿಗಳು’ ಎಂದು ಟೀಕಿಸಿದೆ. ಹರ್‌ ಘರ್‌ ತಿರಂಗಾ’ ಎನ್ನುತ್ತಾ ಜನರ ಮನೆಯ ಮೇಲೆ ತಿರಂಗಾ ಹಾರಿಸಲು ಕರೆ ಕೊಟ್ಟಿರುವ ಪ್ರಧಾನಿಗೆ, ತಮ್ಮ ಮೂಲ ಮನೆಯಾದ ನಾಗಪುರದ ಆರೆಸ್ಸೆಸ್‌ ಕಚೇರಿಯಲ್ಲೇ ತಿರಂಗಾ ಹಾರಿಸಲು ಸಾಧ್ಯವಾಗಲಿಲ್ಲ. ಇಂದು ಕ್ವಿಟ್‌ ಇಂಡಿಯಾ ಚಳವಳಿಯ ದಿನ ಆಚರಿಸಿ ಲಕ್ಷಾಂತರ ಸ್ವಾತಂತ್ರ್ಯ ವೀರರ ತ್ಯಾಗ ಬಲಿದಾನಗಳನ್ನು ದೇಶ ನೆನಪಿಸಿಕೊಳ್ಳುತ್ತಿದೆ. ಆದರೆ, ಬಿಜೆಪಿ ಕಚೇರಿಯಲ್ಲಿ ಕ್ವಿಟ್‌ ಇಂಡಿಯಾ ದಿನಾಚರಣೆ ಆಚರಿಸಲಿಲ್ಲ, ಕರ್ನಾಟಕ ಬಿಜೆಪಿ ಟ್ವೀಟರ್‌ ಖಾತೆಯಲ್ಲಿ ಕೂಡ ನೆನಪಿಸಿಕೊಳ್ಳಲಿಲ್ಲ. ಬಿಜೆಪಿಯ ದೇಶಭಕ್ತಿಯ ಡೋಂಗಿ ನಾಟಕ, ಅಸಲಿ ದೇಶ ವಿರೋಧಿ ಮನಸ್ಥಿತಿ ಬಯಲಾಗಿದೆ’ ಎಂದು ಟೀಕಿಸಿದೆ.

Follow Us:
Download App:
  • android
  • ios