ಹುಬ್ಬಳ್ಳಿಯಲ್ಲಿ ಬಿಜೆಪಿ ರೈತ ಮೋರ್ಚಾ ಸಮಾವೇಶ; 10 ಲಕ್ಷ ಜನ ಬರುವ ನಿರೀಕ್ಷೆ: ಈರಣ್ಣ ಕಡಾಡಿ

  • .ರೈತ ಮೋರ್ಚಾದಿಂದ 3 ತಿಂಗಳಿಗೊಮ್ಮೆ ಕಾರ‍್ಯಕಾರಿಣಿ
  • ಜಿಎಂಐಟಿಯಲ್ಲಿ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಹೇಳಿಕೆ
  • ನವೆಂಬರ್‌ ಕೊನೆ ಅಥವಾ ಡಿಸೆಂಬರ್‌ ಮೊದಲ ವಾರ ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಸಮಾವೇಶ
3 monthly activist meeting  from Raitha Morcha says Eranna Kadadi rav

ದಾವಣಗೆರೆ (ಅ.9) :ಬಿಜೆಪಿ ರೈತ ಮೋರ್ಚಾದ ವತಿಯಿಂದ ನವೆಂಬರ್‌ ಕೊನೆಯ ವಾರ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಹುಬ್ಬಳ್ಳಿ ನಗರದಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ದಾವಣಗೆರೆಯ ಈ ವಿಶೇಷ ಸಭೆ ಮಹತ್ವ ಪಡೆದಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಹೇಳಿದರು. ನಗರದ ಜಿಎಂಐಟಿ ಕ್ಯಾಂಪಸ್‌ನಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯ ರೈತ ಮೋರ್ಚಾದ ವಿಶೇಷ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ ರೈತ ಮೋರ್ಚಾದಿಂದ ಪ್ರತಿ 3 ತಿಂಗಳಿಗೊಮ್ಮೆ ಇಂತಹ ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದೆ. ಅಲ್ಲದೆ ಪ್ರತಿ ತಿಂಗಳು ಪದಾಧಿಕಾರಿಗಳ ಸಭೆ ನಡೆಸಿ ಮೋರ್ಚಾದಿಂದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜತೆಗೆ ಸರ್ಕಾರದ ಯೋಜನೆಗಳ ಪ್ರತಿ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.

Karnataka Politics: ಬೆಂಕಿ ಹಚ್ಚೋ ಕೆಲಸದಿಂದ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್‌: ಕಡಾಡಿ

ಹುಬ್ಬಳ್ಳಿ ಸಮಾವೇಶಕ್ಕೆ 10 ಲಕ್ಷ ಮಂದಿ:

ಮುಂಬರುವ ವಿಧಾನಸಭೆÜ ಚುನಾವಣೆ ಗಮನದಲ್ಲಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಡಬಲ್‌ ಇಂಜಿನ್‌ ಸರ್ಕಾರಗಳ ಸಾಧನೆಗಳ ಜನರಿಗೆ ತಲುಪಿಸುವ ಕೆಲಸ ಮಾಡುವ ಜೊತೆಗೆ ಜನರನ್ನು ಮುಂಬರುವ ಚುನಾವಣೆ ವೇಳೆಗೆ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು. ಈ ನಿಟ್ಟಿನಲ್ಲಿ ರೈತ ಮೋರ್ಚಾ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು ಹುಬ್ಬಳ್ಳಿಯ ಸಮಾವೇಶಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಜನರ ಸೇರಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ರೈತರಿಗೆ ಬೆಳೆ ವಿಮೆ ತಂದಿರಲಿಲ್ಲ, ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾದ ಕಾಲದಲ್ಲಿ ಜಾರಿಗೆ ತರಲಾಗಿತ್ತು ಅಂದಿನಿಂದ ಇಂದಿನವರೆಗೂ ಅದರಲ್ಲಿ ಇದ್ದಂತಹ ಕೆಲವು ನ್ಯೂನತೆಗಳನ್ನು ಸರಿಪಡಿಸುತ್ತಾ ಬಂದು ಇದೀಗ ಗ್ರಾಮ ಪಂಚಾಯಿತಿ ಮಟ್ಟಕ್ಕೂ ಬೆಳೆವಿಮೆ ತಂದಿದ್ದೇವೆ. ರೈತನೊಂದಿಗೆ ಸರ್ಕಾರವು ತನ್ನ ಪಾಲನ್ನು ಹಾಕಿ ಬೆಳೆÜನಷ್ಟಆದಾಗ ಸಂಬಂಧಪಟ್ಟಕಂಪನಿಗಳೊಂದಿಗೆ ಮಾತನಾಡಿ ರೈತರಿಗೆ ಪರಿಹಾರ ನೀಡುತ್ತಿದೆ ಎಂದು ತಿಳಿಸಿದರು.

ದೊಡ್ಡ ರೈತರಿಗೆ ಅನುಕೂಲ:

ಖರೀದಿ ಕೇಂದ್ರಗಳನ್ನು ತೆರೆಯುವಲ್ಲಿ ವಿಳಂಬವಾಗುವ ಕಾರಣ ಸಣ್ಣ ರೈತರು ತಾನು ಬೆಳೆದ ಬೆಳೆಗಳನ್ನು ಮಾರಾಟ ಮಾಡಿ ಕುಳಿತಿದ್ದೇನೆ ಸ್ವಲ್ಪ ಅಲ್ಪಸ್ವಲ್ಪ ಇದ್ದಂತಹ ರೈತರು ಉತ್ತಮ ಬೆಳೆ ಬಂದಾಗ ತಮ್ಮ ಬೆಳೆಗಳನ್ನು ಖರೀದಿ ಕೇಂದ್ರಗಳಿಗೆ ತರುತ್ತಾರೆ. ಇದರಿಂದಾಗಿ ದೊಡ್ಡ ರೈತರಿಗೆ ಮಾತ್ರ ಅನುಕೂಲವಾಗಲಿದೆ ಎನ್ನುವ ವಾಸ್ತವ ಅಂಶ ನಮ್ಮ ಗಮನಕ್ಕೆ ಬಂದಿದೆ. ಈ ಕುರಿತಂತೆ ಮುಖ್ಯಮಂತ್ರಿಗಳು, ಕೃಷಿ ಸಚಿವರು ಸೇರಿ ಎಪಿಎಂಸಿ ಸಚಿವರಿಗೂ ಗಮನಕ್ಕೆ ತರಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್‌ ಹನಗವಾಡಿ, ರೈತ ಮೊರ್ಚಾದ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ ಇತರರು ಇದ್ದರು.

ರೈತರ ಹೋರಾಟ ಪ್ರಾಯೋಜಕತ್ವದ ಹೋರಾಟ ಎಂದ ಬಿಜೆಪಿ ರಾಜ್ಯಸಭಾ ಸದಸ್ಯ

ರಾಜ್ಯದ ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಗಳನ್ನು ಮುಚ್ಚಲಾಗುವುದಿಲ್ಲ. ಇದು ಕೇವಲ ಸುಳ್ಳು ವದಂತಿ. ಈ ರೀತಿಯ ಗುಲ್ಲು ಎಬ್ಬಿಸಿ ರೈತರ ಆತಂಕಕ್ಕೀಡು ಮಾಡಲಾಗುತ್ತಿದೆ. ರೈತರು ಕೇವಲ ಎಪಿಎಂಸಿಗಳನ್ನೇ ನಂಬಿ ಸುಮ್ಮನಿರಬಾರದು. ಅವರಿಗೆ ಉತ್ತಮ ಬೆಲೆ ಸಿಗಬೇಕಾದರೆ ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗೆ ಮಾರುಕಟ್ಟೆಯಲ್ಲಿ ತಮ್ಮ ಬೆಳೆಗಳನ್ನು ಮಾರಬೇಕು.

ಈರಣ್ಣ ಕಡಾಡಿ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ

Latest Videos
Follow Us:
Download App:
  • android
  • ios