ಬೆಂಗಳೂರು (ಮೇ.07): ಕಳೆದ ಐದು ದಿನಗಳ ಹಿಂದಷ್ಟೇ  6 ಜಿಲ್ಲೆಗಳಿಗೆ ಉಸ್ತುವಾರಿ ಬದಲಾಯಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಮ್ಮೆ ಉಸ್ತುವಾರಿಗಳ ಬದಲಾವಣೆ ಮಾಡಿದೆ. 

ಮತ್ತೆ ಮೂರು ಜಿಲ್ಲೆಗಳಿಗೆ ನೂತನ ಉಸ್ತುವಾರಿ ಸಚಿವರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಕೊರೋನಾ ಆತಂಕ ಪ್ರತೀ ಜಿಲ್ಲೆಯಲ್ಲಿಯೂ ಹೆಚ್ಚಾಗುತ್ತಲೇ ಇದ್ದು, ಜಿಲ್ಲೆಯ ಉಸ್ತುವಾರಿಗಳನ್ನು ಬದಲಾವಣೆ ಮಾಡಿ ಜವಾಬ್ದಾರಿ ಹೆಚ್ಚಿಸಲಾಗಿದೆ.  

6 ಜಿಲ್ಲೆಗಳಿಗೆ ನೂತನ ಉಸ್ತುವಾರಿ : ಯಾರಿಗೆ ಯಾವ ಜಿಲ್ಲೆ..?

 ಕೋಲಾರ ಜಿಲ್ಲೆಯ ಉಸ್ತುವಾರಿಯನ್ನು ಎಂಟಿಬಿ ನಾಗಾರಾಜ್ ಅವರಿಂದ ಇದೀಗ  ಅರವಿಂದ ಲಿಂಬಾವಳಿಗೆ  ವಹಿಸಲಾಗಿದೆ. ಬೀದರ್‌ ಉಸ್ತುವಾರಿಯನ್ನು ಹಿಂಪಡೆದು ಕೋಲಾರದ ಜವಾಬ್ದಾರಿ ವಹಿಸಲಾಗಿದೆ.  ಮೇ 2ರ ಬದಲಾವಣೆಯನ್ನು ಮತ್ತೊಮ್ಮೆ  ಪರಿಷ್ಕರಣೆ ಮಾಡಲಾಗಿದೆ. 

ಲಿಂಬಾವಳಿಯವರಿಂದ ಹಿಂಪಡೆದ ಬೀದರ್ ಉಸ್ತುವಾರಿಯನ್ನು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ವಹಿಸಲಾಗಿದೆ. 

ನೂತನವಾಗಿ ಆರ್‌. ಶಂಕರ್‌ ಅವರಿಗೆ ಯಾದಗಿರಿ ಉಸ್ತುವಾರಿಯನ್ನು ವಹಿಸಲಾಗಿದೆ.

ಅರವಿಂದ ಲಿಂಬಾವಳಿ (ಅರಣ್ಯ ಮತ್ತು ಕನ್ನಡ-ಸಂಸ್ಕೃತಿ ಸಚಿವರು ) : ಕೋಲಾರ 
 ಪ್ರಭು ಚೌಹಾಣ್ (ಪಶು ಸಂಗೋಪನಾ ಸಚಿವರು ) : ಬೀದರ್
 ಆರ್ ಶಂಕರ್‌ (ತೋಟಗಾರಿಕೆ ಮತ್ತು ರೇಷ್ಮೆ ಸಚಿವ ) : ಯಾದಗಿರಿ