6 ಜಿಲ್ಲೆಗಳಿಗೆ ನೂತನ ಉಸ್ತುವಾರಿ : ಯಾರಿಗೆ ಯಾವ ಜಿಲ್ಲೆ..?
ರಾಜ್ಯವು ಕೋವಿಡ್ ಸ್ಥಿತಿಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಉಸ್ತುವಾರಿಗಳಿಲ್ಲದೇ ಬಳಲಿದ್ದ 6 ಜಿಲ್ಲೆಗಳಿಗೆ ಕರ್ನಾಟಕ ಸರ್ಕಾರ ನೂತನ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು (ಮೇ.02): ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ತಾಂಡವವಾಡುತ್ತಿರುವ ಬೆನ್ನಲ್ಲೇ ಉಸ್ತುವಾರಿಗಳಿಲ್ಲದೇ ಸಂಕಷ್ಟ ಎದುರಿಸುತ್ತಿದ್ದ ಜಿಲ್ಲೆಗಳಿಗೆ ಇಂದು ಉಸ್ತುವಾರಿ ಸಚಿವರ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯಪಾಲರು ಆರು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಯಾರಿಗೆ ಯಾವ ಜಿಲ್ಲೆಯ ಹೊಣೆ ಇಲ್ಲಿದೆ ಪಟ್ಟಿ.
ಬೆಳಗಾವಿ - ಗೋವಿಂದ ಕಾರಜೋಳ (ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರು)
ಬಾಗಲಕೋಟ - ಉಮೇಶ್ ಕತ್ತಿ (ಆಹಾರ ಮತ್ತು ನಾರಿಕ ಸರಬರಾಜು ಸಚಿವರು )
ಬೀದರ್- ಅರವಿಂದ ಲಿಂಬಾವಳಿ (ಅರಣ್ಯ ಮತ್ತು ಕನ್ನಡ-ಸಂಸ್ಕೃತಿ ಸಚಿವರು )
ಕೋಲಾರ - ಎಂಟಿಬಿ ನಾಗರಾಜ್ (ಪೌರಾಡಳಿತ ಮತ್ತು ಸಕ್ಕರೆ ಸಚಿವರು)
ಕಲಬುರಗಿ - ಮುರುಗೇಶ್ ನಿರಾಣಿ (ಗಣಿ ಮತ್ತು ಭೂ ವಿಜ್ಞಾನ ಸಚಿವರು )
ಚಿಕ್ಕಮಗಳೂರು - ಎಸ್ ಅಂಗಾರ (ಮೀನುಗಾರಿಕೆ ಮತ್ತು ಬಂದರು ಸಚಿವರು)
3ನೇ ಅಲೆ ತಡೆಗೆ ಈಗಲೇ ಪ್ಲಾನ್: ಸಿಬ್ಬಂದಿ ಕೊರತೆ ನೀಗಿಸಲೂ ಮಹತ್ವದ ಹೆಜ್ಜೆ! .
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಬ್ಬರ ಹೆಚ್ಚಾಗುತ್ತಿದೆ. ದಿನದಿನವೂ ಸಾವು ನೋವುಗಳು ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದರ ಸೂಕ್ತ ನಿರ್ವಹಣೆ ಜವಾಬ್ದಾರಿ ಸರ್ಕಾರದ ಮೇಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾವಾರು ಜವಾಬ್ದಾರಿಗಳ ಹಂಚಿಕೆ ಉದ್ದೇಶದಿಂದ ಖಾಲಿ ಇದ್ದ ಜಿಲ್ಲೆಗಳಿಗೆ ನೇಮಕ ಮಾಡಲಾಗಿದೆ.
ಅಲ್ಲದೇ ಕೊರೋನಾ ಸ್ಥಿತಿಗತಿಗಳ ನಿರ್ವಹಣೆಗೆ ಉಸ್ತುವಾರಿ ಸಚಿವರಿಲ್ಲದೇ ಅನೇಕ ಜಿಲ್ಲೆಗಳ ಜನರು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇದೀಗ ಉಸ್ತುವಾರಿಗಳ ನೇಮಕವಾಗಿದೆ.
ಸಿ.ಟಿ ರವಿ ಅಭಿನಂದನೆ : ಇದೇ ವೇಳೆ ಚಿಕ್ಕಮಗಳೂರು ಉಸ್ತುವಾರಿಯಾಗಿ ನೇಮಕವಾದ ಸಚಿವ ಅಂಗಾರ ಅವರಿಗೆ ಬಿಜೆಪಿ ಮುಖಂಡ ಸಿ.ಟಿ ರವಿ ಅಭಿನಂದನೆ ತಿಳಿಸಿದ್ದಾರೆ.