2028 ನನ್ನ ಕೊನೇ ಅಸೆಂಬ್ಲಿ ಚುನಾವಣೆ: ಎಚ್ಡಿ ಕುಮಾರಸ್ವಾಮಿ
ಮುಂಬರುವ 2028ರ ಚುನಾವಣೆ ನನ್ನ ಕೊನೇ ವಿಧಾನಸಭಾ ಚುನಾವಣೆ. ಆ ನಂತರ ಬೇರೆ ಚುನಾವಣೆಗಳಿಗೆ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕ್ಕಮಗಳೂರು (ಮಾ.1) : ಮುಂಬರುವ 2028ರ ಚುನಾವಣೆ ನನ್ನ ಕೊನೇ ವಿಧಾನಸಭಾ ಚುನಾವಣೆ. ಆ ನಂತರ ಬೇರೆ ಚುನಾವಣೆಗಳಿಗೆ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswmy) ಹೇಳಿದ್ದಾರೆ.
ಕಡೂರು ತಾಲೂಕಿನ ದೇವನೂರಿನಿಂದ ಹೊರಡುವ ಸಂದರ್ಭದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರ ಬಳಿಕ ನಾನು ಸಕ್ರಿಯ ರಾಜಕಾರಣದಲ್ಲಿರಲ್ಲ ಎಂದು ಹೇಳಿಲ್ಲ. ಆ ಬಳಿಕವೂ ನಾನು ಸಕ್ರಿಯ ರಾಜಕೀಯದಲ್ಲೇ ಇರುತ್ತೇನೆ. ಆದರೆ, ವಿಧಾನಸಭಾ ಚುನಾವಣೆ(Assembly election)ಗೆ ಸ್ಪರ್ಧಿಸಲ್ಲ. ಅದರ ಬದಲು ಬೇರೆ ಚುನಾವಣೆಗಳಿಗೆ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಹಳ್ಳ ಹಿಡಿಯಲು ಇಬ್ರಾಹಿಂ ಹೇಳಿಕೆಗಳೇ ಸಾಕು: ಅಶ್ವತ್ಥನಾರಾಯಣ ವ್ಯಂಗ್ಯ
ಇದೇ ವೇಳೆ ಜನರ ತೆರಿಗೆ ಹಣ ಲೂಟಿ ಮಾಡಿ ವಿದ್ಯಾಸಂಸ್ಥೆ ಕಟ್ಟಿಜೀವನ ಮಾಡುವ ಅವಶ್ಯಕತೆ ನಮಗಿಲ್ಲ ಎಂದ ಅವರು, ಜನರ ಕಷ್ಟನೋಡಿ ಅದನ್ನು ನಿವಾರಣೆ ಮಾಡಲು ಪಂಚರತ್ನ ಯೋಜನೆಯನ್ನು ಘೋಷಿಸಿ ಹೋರಾಟ ಮಾಡುತ್ತಿದ್ದೇನೆ. ನಾವು ಇನ್ನೆಷ್ಟುವರ್ಷ ಬದುಕುತ್ತೇವೆ, ಇನ್ನೊಂದು ಚುನಾವಣೆ ಮಾಡಬಹುದು ಅಷ್ಟೆಎಂದರು.
ಎಲೆಕ್ಷನ್ ಬಳಿಕ ಬಿಎಸ್‌ವೈ ಏನಾಗ್ತಾರೆ?: ವಯಸ್ಸಿನ ಕಾರಣ ನೀಡಿ ಬಿ.ಎಸ್.ಯಡಿಯೂರಪ್ಪರನ್ನು ನಿವೃತ್ತಿಗೊಳಿಸಿದ ಬಿಜೆಪಿ, ಇದೀಗ ಒಂದು ಸಮಾಜದ ಮತ ಪಡೆಯಲು ಅವರನ್ನು ಮುಂದೆ ಬಿಡುತ್ತಿದ್ದಾರೆ. ಮೈತ್ರಿ ಸರ್ಕಾರದ ನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಹೇಗೋ ಇನ್ನೂ 2 ವರ್ಷ ಸರ್ಕಾರ ನಡೆಸುತ್ತಿದ್ದರು. ಆಗ ಅವರನ್ನು ಮೂಲೆ ಗುಂಪು ಮಾಡಿ ಇದೀಗ ಚುನಾವಣೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಅವರನ್ನು ಎಲ್ಲದಕ್ಕೂ ನೀವೇ ಎನ್ನುತ್ತಿದ್ದಾರೆ. ಚುನಾವಣೆ ಬಳಿಕ ಯಡಿಯೂರಪ್ಪ ಅವರನ್ನು ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದರು.
ಬಿಜೆಪಿ ಕಟ್ಟಿಬೆಳೆಸಿದ ಎಲ್.ಕೆ.ಅಡ್ವಾಣಿ(LK Advani), ಮುರಳಿ ಮನೋಹರ ಜೋಷಿ(Muruli manohar joshi) ಅಂಥವರಿಗೆ ವಯಸ್ಸಿನ ನೆಪ ಹೇಳಿ ಬಿಜೆಪಿ ಮೂಲೆಗುಂಪು ಮಾಡುತ್ತಿದೆ ಎಂದು ಇದೇ ವೇಳೆ ಆರೋಪಿಸಿದರು.
ಪಂಪನ ಕನಸಿನಂತೆ ಬನವಾಸಿ ಅಭಿವೃದ್ಧಿಗೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ
ಎಚ್‌ಡಿಕೆಗೆ ನಿವೃತ್ತಿ ವಯಸ್ಸಾಗಿಲ್ಲ-ಸಿಎಂ
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಇದೇ ತಮ್ಮ ಕೊನೇ ಚುನಾವಣೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವ ಸಂದರ್ಭದಲ್ಲಿ ಹೇಳಿದ್ದಾರೆಂಬುದು ಗೊತ್ತಿಲ್ಲ. ಅವರದ್ದು ನಿವೃತ್ತಿಯಾಗುವ ವಯಸ್ಸಲ್ಲ. ಬಹಳ ಸೇವೆ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಎಲ್ಲ ರೀತಿಯ ಮಾತು ಬರುತ್ತವೆ. ಪ್ರತಿ ಚುನಾವಣೆಗೂ ಜನರ ಪ್ರಬುದ್ಧತೆ ಹೆಚ್ಚಾಗಿದೆ. ನಾವು ಮಾತನಾಡುವಾಗ ಅದರ ಹಿಂದಿನ ಚಿಂತನೆ, ಕಲ್ಪನೆ ಜನರಿಗೆ ತಿಳಿಯುತ್ತದೆ ಎಂದರು.