Asianet Suvarna News Asianet Suvarna News

ಮುಂದಿನ ಬಾರಿಯೂ ಮೋದಿ ನೇತೃತ್ವದ ಸುಭದ್ರ ಸರ್ಕಾರ: ಈರಣ್ಣ ಕಡಾಡಿ

ದೇಶವಾಸಿಗಳ ಅಭ್ಯುಯದಕ್ಕಾಗಿ ಕಳೆದ 2 ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಕಾರ್ಯಯೋಜನೆಗಳನ್ನು ಜನಸಾನ್ಯರಿಗೆ ತಿಳಿಸುವುದು ಹಾಗೂ ಫಲಾನುಭವಿಗಳ ಅಭಿಪ್ರಾಯಗಳನ್ನು ಸಂಗ್ರಹಿಸುವುದಕ್ಕಾಗಿ ದೇಶಾದ್ಯಂತ ವಿಕಸಿತ ಭಾರತ ಸಂಕಲ್ಪ ರಥಯಾತ್ರೆ ನಡೆಯುತ್ತಿದೆ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ 

2024 too a safe Government led by Narendra Modi Says Eranna Kadadi grg
Author
First Published Dec 12, 2023, 10:45 PM IST

ರಾಮದುರ್ಗ(ಡಿ.12):  ಜನ ಮಾನಸದಲ್ಲಿ ಮೋದಿ ಉಳಿದುಕೊಂಡಿದ್ದು, ಮುಂದಿನ ಸಂಸತ್ತಿನ ಚುನಾವಣೆಯಲ್ಲಿ ಮೋದಿ ನೇತೃತ್ವದ ಸುಭದ್ರ ಸರ್ಕಾರ ಅಧಿಕಾರ ಮಾಡಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ತಾಲೂಕಿನ ಸುನ್ನಾಳ ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರೆದಿದೆ. ಅನೇಕ ಆವಿಸ್ಕಾರಗಳು ಸಕಾರಗೊಳ್ಳುತ್ತಿವೆ. ಜನರಲ್ಲಿ ದೇಶ ಪ್ರೇಮ ಮತ್ತು ದೇಶಭಕ್ತಿ ಮೂಡಿಸಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ದೇಶವಾಸಿಗಳ ಅಭ್ಯುಯದಕ್ಕಾಗಿ ಕಳೆದ 2 ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಕಾರ್ಯಯೋಜನೆಗಳನ್ನು ಜನಸಾನ್ಯರಿಗೆ ತಿಳಿಸುವುದು ಹಾಗೂ ಫಲಾನುಭವಿಗಳ ಅಭಿಪ್ರಾಯಗಳನ್ನು ಸಂಗ್ರಹಿಸುವುದಕ್ಕಾಗಿ ದೇಶಾದ್ಯಂತ ವಿಕಸಿತ ಭಾರತ ಸಂಕಲ್ಪ ರಥಯಾತ್ರೆ ನಡೆಯುತ್ತಿದೆ ಎಂದರು.

ನಿಮ್ಮನ್ನ ನಮ್ಮ ಸಮಾಜ ಒಪ್ಪಲ್ಲ, ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಯತ್ನಾಳ್‌ ವಾಗ್ದಾಳಿ

ಈ ಯಾತ್ರೆ ದೇಶದ ಪ್ರತಿ ಗ್ರಾಮ ಪಂಚಾಯತಿಗೆ ತೆರಳಿ ಮೋದಿ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಬಿಚ್ಚಿಡಲಾಗುವುದು. ಅನ್ನ, ನೀರು, ಶಿಕ್ಷಣ ಹಾಗೂ ಸೂರು ಒದಗಿಸಿ ಇಡೀ ದೇಶ 2047ರ ವೇಳೆಗೆ ಸುಭಿಕ್ಷವಾಗಲು ಹಾಗೂ ಮುಂದುವರೆದ ರಾಷ್ಟ್ರವಾಗಿಸುವ ಮೋದಿ ಕನಸು ಸಕಾರಗೊಳ್ಳಲಿದೆ ಎಂದು ತಿಳಿಸಿದರು.

ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಮುಖಂಡ ಡಾ.ಕೆ.ವಿ.ಪಾಟೀಲ, ಪಿ.ಎಫ್.ಪಾಟೀಲ, ರಾಜೇಶ ಬೀಳಗಿ, ಮಾರುತಿ ಕೊಪ್ಪದ, ವಿಜಯ ಗುಡದಾರೆ, ರೇಣಪ್ಪ ಸೋಮಗೊಂಡ, ರೇಖಾ ಚಿನ್ನಾಕಟ್ಟಿ, ಭೀಮಪ್ಪ ಬಸಿಡೋಣಿ, ಕೆನರಾ ಬ್ಯಾಂಕಿನ ವಿಭಾಗೀಯ ಮುಖ್ಯಸ್ಥ ವಿಜಯರಾಜ್, ನೋಡಲ ಅಧಿಕಾರಿ ಭರಪ್ಪ ಕೋಟೂರ, ಉಜ್ವಲ ಯೋಜನೆಯ ವಿತರಕ ಸುಭಾಸ ಮಾವರಕರ ಸೇರಿದಂತೆ ಇತರರು ಇದ್ದರು.

Latest Videos
Follow Us:
Download App:
  • android
  • ios