ಸಂಕ್ರಾಂತಿಗೆ ಜೆಡಿಎಸ್‌ 150 ಅಭ್ಯರ್ಥಿಗಳ ಪಟ್ಟಿ

  • ಸ್ವತಂತ್ರವಾಗಿ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ 
  • ಬರುವ ಸಂಕ್ರಾಂತಿ ವೇಳೆಗೆ ಕನಿಷ್ಠ 150 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ 
  • ಮುಂದಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆಗಾಗಿ  ಸಿದ್ಧತೆ
2023 Election JDS Will release candidate list in 2022 January snr

 ಬೆಂಗಳೂರು (ಜು.16):  ಸ್ವತಂತ್ರವಾಗಿ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿದ್ದು, ಮುಂದಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆಗಾಗಿ ಬರುವ ಸಂಕ್ರಾಂತಿ ವೇಳೆಗೆ ಕನಿಷ್ಠ 150 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನಗೆ ಅಧಿಕಾರದ ಆಸೆ ಇಲ್ಲ. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ನಡವಳಿಕೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷದತ್ತ ಒಲವು ತೋರಲಿದ್ದಾರೆ’ ಎಂದರು.

ಮೋದಿ, ಬಿಎಸ್‌ವೈ ಜನಪರ ಆಡಳಿತ ಮೆಚ್ಚಿ ಜೆಡಿಎಸ್‌ ಮುಖಂಡ ಬಿಜೆಪಿ ಸೇರ್ಪಡೆ

‘ಜನತೆಯ ಮುಂದೆ ಹೋಗಲು ಹಲವು ರೀತಿಯ ಕಾರ್ಯಕ್ರಮಗಳ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಮುಂದಿನ ಒಂದು ವಾರ ಕಾಲ ಪಕ್ಷದ ಕಚೇರಿಯಲ್ಲಿ ಜಿಲ್ಲಾವಾರು ಸಭೆ ಕರೆಯಲಾಗಿದೆ. ಮುಂದಿನ ಬುಧವಾರದವರೆಗೆ ಸಭೆ ಕರೆದು ಜಿಲ್ಲಾವಾರು ಸಭೆ ನಡೆಸಲಾಗುವುದು. ಈ ವೇಳೆ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಲಾಗುವುದು. ಕೋವಿಡ್‌ ಹರಡುವಿಕೆ ಕಡಿಮೆಯಾಗಿಲ್ಲ. ಹೀಗಾಗಿ ಇಂತಹ ಸಮಯದಲ್ಲಿ ಜಿಲ್ಲೆಗಳಿಗೆ ಹೋಗುವುದು ಸರಿಯಲ್ಲ.

'ಒಳ್ಳೆ ಕೆಲಸ ಮಾಡ್ತಿದ್ಯ, ಮಾಡವ್ವ ನಿಂಗೆ ಒಳ್ಳೇದಾಗ್ಲಿ' : ಅನಿತಾಗೆ ಸಿಕ್ಕ ವಿಶೇಷ ಆಶೀರ್ವಾದ

ಕೋವಿಡ್‌ ಸೋಂಕು ಕಡಿಮೆಯಾದ ಬಳಿಕ ಜಿಲ್ಲಾ ಪ್ರವಾಸ ಕೈಗೊಳ್ಳುತ್ತೇನೆ. ಆಷಾಢ ಮಾಸದ ಬಳಿಕ ಜಿಲ್ಲಾ ಪ್ರವಾಸ ಹಮ್ಮಿಕೊಳ್ಳುತ್ತೇನೆ. ಮುಂದಿನ ದಿನದಲ್ಲಿ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಕುರಿತು ತಿಳಿಸಲಾಗುವುದು. ರಾಜ್ಯದಲ್ಲಿನ ಕೋವಿಡ್‌ ಸಮಸ್ಯೆ, ಶಿಕ್ಷಣ, ಕೃಷಿ, ಯುವಕರಿಗೆ ಉದ್ಯೋಗ ಸೃಷ್ಟಿವಿಚಾರದಲ್ಲಿ ಸಮಾಲೋಚನೆ ನಡೆಸಲಾಗುವುದು’ ಎಂದರು.

Latest Videos
Follow Us:
Download App:
  • android
  • ios