ಅಂಬೇಡ್ಕರ್ ನಿಗಮದಲ್ಲೂ 200 ಕೋಟಿ ಅಕ್ರಮ: ಎನ್.ರವಿಕುಮಾರ್
'ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಹಗರಣದ ಮಾದರಿಯಲ್ಲೇ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲೂ ನಡೆದಿರುವ ನೂರಾರು ಕೋಟಿ ರು. ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು' ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರು (ಸೆ.02): 'ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಹಗರಣದ ಮಾದರಿಯಲ್ಲೇ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲೂ ನಡೆದಿರುವ ನೂರಾರು ಕೋಟಿ ರು. ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು' ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ. ಅಂಬೇಡ್ಕರ್ ನಿಗಮದಲ್ಲಿನ ಬೃಹತ್ ಹಗರಣದ ಬಗ್ಗೆ ಕನ್ನಡಪ್ರಭದ ಸಹೋದರ ಸಂಸ್ಥೆ ಏಷ್ಯಾನೆಟ್ ಸುವರ್ಣ ನ್ಯೂಸ್ 'ಕವರ್ ಸ್ಟೋರಿ' ಬಿತ್ತರಿಸಿದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಿಗಮದಿಂದ ನೀಡಲಾಗುವ ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಕೊಟ್ಯಂತರ ರು. ಹಗರಣ ನಡೆದಿದೆ. ಸುಮಾರು 200 ಕೋಟಿ ರು.ಗೂ ಹೆಚ್ಚು ಹಣ ಬೇರೆ ಬೇರಮ ಖಾತೆಗಳಿಗೆ ವರ್ಗಾವಣೆಯಾಗಿದೆ. ಭ್ರಷ್ಟಾಚಾರದ ಹಣ ಚುನಾವ ಣೆಗೂ ಬಳಸಿರುವ ಗುಮಾನಿ ಇದೆ. ಹೀಗಾಗಿ, ಹೈಕೋರ್ಟ್ ನ್ಯಾಯ ಮೂರ್ತಿಗಳ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಸಮಗ್ರ ಎಂದು ಆಗ್ರಹಿಸಿದರು. 'ಪರಿಷತ್ತಿನ ಮಾಜಿ ಪ್ರತಿಪಕ್ಷದ ನಾಯಕ, ಹಾಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭ್ರಷ್ಟಾಚಾರದ ಕುರಿತು ತನಿಖೆಗೆ ಒತ್ತಾಯಿಸಿದ್ದರೂ ಸರ್ಕಾರ ತನಿಖೆ ನಡೆಸಿಲ್ಲ ಎಂದರು.
ಕೋವಿಡ್ ತನಿಖಾ ವರದಿ ಒತ್ತಡ ಹಾಕಿ ಸ್ವೀಕಾರ: ಪ್ರಾಣ ಒತ್ತೆಯಿಟ್ಟು ಕೆಲಸ ಮಾಡಿದ್ದೇನೆಂದ ಸಂಸದ ಸುಧಾಕರ್
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡಲಾಗುವ ಸಾಲ, ಗಂಗಾ ಕಲ್ಯಾಣ ಸೇರಿ ವಿವಿಧ ಯೋಜನೆಗಳ 200 ಕೋಟಿ ರು.ಗೂ ಹೆಚ್ಚು ಹಣ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ತನಿಖೆಗೆ ಆಗ್ರಹಿಸಿ ಧರಣಿ ನಡೆಸುವೆ.
-ರವಿಕುಮಾರ್ ಬಿಜೆಪಿ ಶಾಸಕ