ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನೀರಾವರಿಗೆ 2 ಲಕ್ಷ ಕೋಟಿ: ಸಿದ್ದರಾಮಯ್ಯ

ಹೊಸಪೇಟೆಯಿಂದ ಕೂಡಲಸಂಗಮವರೆಗಿನ ಪಾದಯಾತ್ರೆ ಸಂದರ್ಭದಲ್ಲಿ ನಾವು ನೀಡಿದ್ದ ಭರವಸೆ ಈಡೇರಿಸಿದ್ದೇವೆ: ಸಿದ್ದರಾಮಯ್ಯ 

2 Lakh Crore for Irrigation if Congress Comes to Power in Karnataka 2023 Says Siddaramaiah grg

ಜಮಖಂಡಿ(ಸೆ. 28):  ಬರುವ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಸಹಿತ ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗೆ .2 ಲಕ್ಷ ಕೋಟಿ ಅನುದಾನ ನೀಡಲಾಗುವುದು ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. ತಾಲೂಕಿನ ಹಿರೇಪಡಸಲಗಿಯ ಜಮಖಂಡಿ ಶುಗರ್ಸ್‌ ಆವರಣದಲ್ಲಿ ಕೃಷ್ಣಾತೀರರತ್ನ ಶಾಸಕ ದಿ.ಸಿದ್ದು ನ್ಯಾಮಗೌಡ ಕಂಚಿನ ಪುತ್ಥಳಿ ಅನಾವರಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹೊಸಪೇಟೆಯಿಂದ ಕೂಡಲಸಂಗಮವರೆಗಿನ ಪಾದಯಾತ್ರೆ ಸಂದರ್ಭದಲ್ಲಿ ನಾವು ನೀಡಿದ್ದ ಭರವಸೆ ಈಡೇರಿಸಿದ್ದೇವೆ. ಕಳೆದ ಚುನಾವಣೆಯಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ನೀಡುವ ಹೆಚ್ಚುವರಿಯಾಗಿ ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ. ವರ್ಷಕ್ಕೆ .10 ಸಾವಿರ ಕೋಟಿಯಂತೆ 5 ವರ್ಷದಲ್ಲಿ .58 ಸಾವಿರ ಕೋಟಿ ಹಣ ನೀರಾವರಿ ಯೋಜನೆಗಳಿಗೆ ನೀಡಿ ನುಡಿದಂತೆ ನಡೆದುಕೊಂಡಿದ್ದೇವೆ ಎಂದು ತಿಳಿಸಿದರು.

ಈ ಭಾಗದಲ್ಲಿ 1987 ರಲ್ಲಿ ಕೃಷ್ಣಾತೀರ ರೈತ ಸಂಘ ನಿರ್ಮಿಸುವ ಮೂಲಕ ರೈತರ ಶ್ರಮದಾನದಲ್ಲಿ 1989 ರಲ್ಲಿ 11 ತಿಂಗಳ ಅವಧಿಯಲ್ಲಿ .90 ಲಕ್ಷ ವೆಚ್ಚದಲ್ಲಿ ಖಾಸಗಿ ಬ್ಯಾರೇಜ್‌ ನಿರ್ಮಿಸಿದ್ದು, ಇತಿಹಾಸವಾಗಿದೆ. ರೈತರ ಶ್ರಮದಾನದಿಂದ ನಿರ್ಮಾಣಗೊಂಡ ಬ್ಯಾರೇಜ್‌ದಿಂದ ಜಮಖಂಡಿ ಮತ್ತು ಅಥಣಿ ತಾಲೂಕಿನ 35 ಗ್ರಾಮಗಳ ರೈತರು 40 ಸಾವಿರ ಎಕರೆ ನೀರಾವರಿ ವ್ಯವಸ್ಥೆ ಹೊಂದಿದ್ದಾರೆ. ಬ್ಯಾರೇಜ್‌ ನಿರ್ಮಾಣದಿಂದ ಪ್ರಸಕ್ತ ರೈತರು ಆರ್ಥಿಕರಾಗಿ ಸಬಲರಾಗಿದ್ದು, ನೀರಾವರಿ ಇಲ್ಲದೇ ಹೋದರೆ ಕೃಷಿ ಲಾಭ ದಾಯಕವಲ್ಲ ಎಂದರು.

ರಾಜ್ಯದಲ್ಲಿ ಪಿಎಫ್​ಐ ಬೆಳೆಯೋದಕ್ಕೆ ಸಿದ್ದರಾಮಯ್ಯ ಕಾರಣರಾ..?

ಮನುಷ್ಯ ಹುಟ್ಟಿದ ಮೇಲೆ ಸಾಧನೆ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಹುಟ್ಟು-ಸಾವು ನಡುವಿನ ಜೀವನವನ್ನು ನಾವು ಮರಳಿ ನೋಡಬೇಕು. ದಿ.ಸಿದ್ದು ನ್ಯಾಮಗೌಡರ ಜೀವನ ಸಾರ್ಥಕ ಮಾಡಿಕೊಳ್ಳುವ ಮೂಲಕ ಅಭಿವೃದ್ಧಿಯ ಹಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಈ ಭಾಗದ ರೈತರ ಆರ್ಥಿಕವಾಗಿ ಸಬಲರಾಗಲು ನ್ಯಾಮಗೌಡ ಕೊಡುಗೆ ಅಪಾರವಾಗಿದೆ. ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ನನಗೆ ಯಾವುದೇ ಸಚಿವ ಸ್ಥಾನ ಬೇಡ ನಮ್ಮ ಭಾಗದ ನೀರಾವರಿ ಯೋಜನೆಗಳಿಗೆ ಹಣ ನೀಡಬೇಕೆಂಬ ಮಾತುಗಳು ನಮ್ಮ ಮನದಲ್ಲಿವೆ. ದಿ.ಸಿದ್ದು ನ್ಯಾಮಗೌಡ ಅಸಾಮಾನ್ಯ ವ್ಯಕ್ತಿ, ಅಸಾಮಾನ್ಯ ಶಾಸಕನಾಗಿ ಅಜಾತಶತ್ರುವಾಗಿ ಜನಮಾಸದಲ್ಲಿ ಗುರ್ತಿಸಿಕೊಂಡಿದ್ದರು. ರಾಜಕೀಯ ಶಾಶ್ವತವಲ್ಲ, ಜನರು ನೀಡಿದ ಅಧಿಕಾರ ನಿರ್ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ, ವಿಪ ಮಾಜಿ ಸದಸ್ಯ ಎಸ್‌.ಆರ್‌.ಪಾಟೀಲ, ಮಾಜಿ ಸಚಿವ ರಾಮಲಿಂಗಾರಡ್ಡಿ ಮಾತನಾಡಿದರು. ಕೋಲ್ಹಾರದ ಕಲ್ಲಿನಾಥ ಶ್ರೀಮಮದಾಪುರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ಆನಂದ ನ್ಯಾಮಗೌಡ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು, ಶಾಸಕ ಶಿವಾನಂದ ಪಾಟೀಲ, ರಮೇಶ ಭೂಸನೂರ, ಹಣಮಂತ ನಿರಾಣಿ, ಯಶವಂತರಾವ ಪಾಟೀಲ, ಸುನೀಲಗೌಡ ಪಾಟೀಲ, ಪ್ರಕಾಶ ಹುಕ್ಕೇರಿ, ಮಾಜಿ ಶಾಸಕ ಉಮಾಶ್ರೀ, ಜೆ.ಟಿ.ಪಾಟೀಲ, ಎಚ್‌.ವೈ.ಮೇಟಿ, ಜಿ.ಎಸ್‌.ಪಾಟೀಲ, ಎ.ಎಸ್‌.ಕೋನರಡ್ಡಿ, ವಿಪ ಮಾಜಿ ಸದಸ್ಯ ಜಿ.ಎಸ್‌.ನ್ಯಾಮಗೌಡ, ನಿರಾಣಿ ¶ೌಂಡೇಶನ್‌ ಕಾರ‍್ಯದರ್ಶಿ ಸಂಗಮೇಶ ನಿರಾಣಿ, ಬಿಡಿಸಿಸಿ ಅಧ್ಯಕ್ಷ ಅಜಯಕುಮಾರ ಸರನಾಯಿಕ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್‌.ಜಿ.ನಂಜಯ್ಯನಮಠ, ಸತೀಶ ಬಂಡಿವಡ್ಡರ ಉಪಸ್ಥಿತರಿದ್ದರು.

ಈ ನಾಡಿನ ಜನರ ಕಣ್ಮಣಿಯಾಗಿದ್ದ ಸದಾ ಭಾಗದ ರೈತರ ಹಿತವನ್ನೇ ಬಯಸಿದ ದಿ.ಸಿದ್ದು ನ್ಯಾಮಗೌಡ ಕಂಚಿನ ಪುತ್ಥಳಿ ಅನಾವರಣ ಮಾಡಿದ್ದು, ನನಗೆ ಮತ್ತು ರೈತ ಸಮುದಾಯಕ್ಕೆ ಖುಷಿಯಾಗಿದೆ ಅಂತ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios