ಬೆಳಗಾವಿ, [ನ.23]: ಕಾಂಗ್ರೆಸ್ ಹಾಗೂ ಜೆಡಿಎಸ್ ಅನರ್ಹ ಶಾಸಕರ ಕ್ಯಾಪ್ಟನ್ ರಮೇಶ್ ಜಾರಕಿಹೊಳಿ ಉಪಚುನಾವಣೆ ಸಮಯದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

15 ಕ್ಷೇತ್ರಗಳಲ್ಲಿ ಪ್ರತಿಷ್ಠೆಯ ಕಣವಾಗಿರುವ ಗೋಕಾಕ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಿಹೊಳಿ  ಇಂದು [ಶನಿವಾರ] ಪ್ರಚಾರ ವೇಳೆ, ನನ್ನ ಜತೆ ಇನ್ನೂ 13 ಶಾಸಕರು ಇದ್ದಾರೆ ಎಂದು ಬಾಂಬ್ ಸಿಡಿಸಿದರು.

ಉಪ ಕದನ: ಮತದಾರರನ್ನು ಸೆಳೆಯಲು ಜಾತಿ ಅಸ್ತ್ರ ಬಿಟ್ಟ ಯಡಿಯೂರಪ್ಪ

13 ಶಾಸಕರು ನನ್ನ ಜತೆ ಇದ್ದು, ಇನ್ನು 35 ಶಾಸಕರು ಸಂಪರ್ಕದಲ್ಲಿದ್ದಾರೆ. ಮನಸ್ಸು ಮಾಡಿದ್ರೆ ಕಾಂಗ್ರೆಸ್ ಫುಲ್ ಖಾಲಿ ಮಾಡುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಮೊದಲಿಗೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದವರಲ್ಲಿ ರಮೇಶ್ ಜಾರಕಿಹೊಳಿ ಮೊದಲಿನವರು. ಆ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಒಬ್ಬೊಬ್ಬರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಆಗಿರುವುದಿಲ್ಲ ಜಗಜ್ಜಾಹೀರು.

ಇದೀಗ ಗೋಕಾಕ್​ ಕ್ಷೇತ್ರದಲ್ಲಿ ಸಹೋದರರ ಸವಾಲ್ ಏರ್ಪಟ್ಟಿದ್ದು, ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ ವಿರುದ್ಧ ಅವರ ಸಹೋದರ ಲಖನ್​​​​ ಜಾರಕಿಹೊಳಿ ಕಣಕ್ಕಿಳಿದಿದ್ಧಾರೆ. 

ರಮೇಶ್​​ ಜಾರಕಿಹೊಳಿ ವಿರುದ್ಧ ಗೆದ್ದೇ ಗೆಲ್ಲುತ್ತೇವೆ ಎಂದು ಸತೀಶ್​ ಜಾರಕಿಹೊಳಿ ಮತ್ತು ಲಖನ್​ ಜಾರಕಿಹೊಳಿ ತೊಡೆತಟ್ಟಿದ್ದಾರೆ. ಕೊನೆಯಲ್ಲಿ ಯಾರುನ್ನು ಮತದಾರರು ಕೈಹಿಡಿಯುತ್ತಾರೆ ಎನ್ನುವುದನ್ನು ಡಿ.9ಕ್ಕೆ ತಿಳಿಯಲಿದೆ.