Asianet Suvarna News Asianet Suvarna News

ಪಿಯುಸಿ ಪಾಸ್ ಆದವರಿಂದ ಸರ್ಕಾರ ಮುನ್ನಡೆಸಲು ಸಾಧ್ಯವಿಲ್ಲ, ಪ್ರಧಾನಿ ಮೋದಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ!

ರಾಹುಲ್ ಗಾಂಧಿ ಅನರ್ಹ ಪ್ರಕರಣ ಕುರಿತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಪದವಿ ಪಡೆದಿರುವುದು ಸಾಬೀತಾಗಿದ್ದರೂ, ಕೇಜ್ರಿವಾಲ್ 12ನೇ ತರಗತಿ ಪಾಸ್ ಎಂದಿದ್ದಾರೆ. ಇಷ್ಟೇ ಅಲ್ಲ ಇವರಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ಭಾಷಣದ ವಿವರ ಇಲ್ಲಿದೆ.

12th pass PM cant run Government Arvind kejriwal slams BJP over Rahul Gandhi Disqualification ckm
Author
First Published Mar 24, 2023, 7:38 PM IST

ನವದೆಹಲಿ(ಮಾ.24): ದೇಶದ ಇತಿಹಾಸದಲ್ಲಿ 12ನೇ ತರಗತಿ ಪಾಸ್ ಆದ ಪ್ರಧಾನಿ ನೋಡಿಲ್ಲ. ಆದರೆ 12ನೇ ತರಗತಿ ಪಾಸ್ ಆದ ವ್ಯಕ್ತಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ. ದೇಶದ ಕಂಡ ಅತೀ ಭ್ರಷ್ಟ ಪ್ರಧಾನಿ, ಅವರ ಅಹಂಕಾರ ತಲೆ ಮೇಲೆ ಕೂತಿದೆ ಎಂದು ದೆಹಲಿ ಸಿಎಂ, ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.  ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಬಿಜೆಪಿ ನಡೆ ವಿರುದ್ಧ ಹರಿಹಾಯ್ದಿದ್ದಾರೆ. ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ನಿರ್ನಾಮಗೊಂಡಿದೆ. ಯಾರು ದೇಶವನ್ನು ಬರ್ಬಾದ್ ಮಾಡಲು ಇಚ್ಚಿಸುತ್ತಿದ್ದಾರೋ ಅವರು ಬಿಜೆಪಿಯಲ್ಲಿರಿ, ದೇಶವನ್ನು ಉಳಿಸಲು ಇಚ್ಚಿಸುವವರು ಬಿಜೆಪಿಯಿಂದ ಹೊರಬನ್ನಿ ಎಂದು ಬಿಜೆಪಿ ನಾಯಕರಿಗೆ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದಾರೆ. ಇದೇ ವೇಳೆ ಇದು ಕೇವಲ ರಾಹುಲ್ ಗಾಂಧಿ, ಕಾಂಗ್ರೆಸ್ ಅವರ ಹೋರಾಟವಲ್ಲ. ಇದು ಪ್ರತಿಯೊಬ್ಬರ ಹೋರಾಟವಾಗಿದೆ. ಹೀಗಾಗಿ ಎಲ್ಲರೂ ಜೊತೆಯಾಗಿ ಹೋರಾಟ ಮಾಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಭಾರತದ ಒಕ್ಕೊರಲ ಧ್ವನಿಗೆ ನನ್ನ ಹೋರಾಟ, ಯಾವುದೇ ತ್ಯಾಗಕ್ಕೂ ಸಿದ್ಧ; ರಾಹುಲ್ ಗಾಂಧಿ ಟ್ವೀಟ್!

ಈ ಹೋರಾಟ ಓದು ಬರಹ ಇಲ್ಲದ ಪ್ರಧಾನಿಯಿಂದ ದೇಶವನ್ನು ರಕ್ಷಿಸವು ಹೋರಾಟವಾಗಿದೆ ಎಂದು ಪ್ರಧಾನಿ ಮೋದಿ ಪದವಿಗೆ ಅವಮಾನ ಮಾಡಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಪದವಿ ಪಡೆದಿದ್ದಾರೆ ಅನ್ನೋದು ಸಾಬೀತಾಗಿದೆ. ಆದರೆ ಅರವಿಂದ್ ಕೇಜ್ರಿವಾಲ್ 12ನೇ ತರಗತಿ ಪಾಸ್ ಆದವರಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದರ ಜೊತೆಗೆ ಓದು ಬರಹ ಬರದ ಪ್ರಧಾನಿಯಿಂದ ದೇಶವನ್ನು ರಕ್ಷಿಸುವ ಹೋರಾಟ ಎಂದಿದ್ದಾರೆ.

 

 

ಬಿಜೆಪಿ ವಿರುದ್ಧದ ಸತತ ವಾಗ್ದಾಳಿ ನಡೆಸಿದ ಅರವಿಂದ್ ಕೇಜ್ರಿವಾಲ್,  ನನಗೆ ಆಟೋ ರಿಕ್ಷಾ ಚಾಲಕ ಸಿಕ್ಕಿದ್ದ. ಆತನ ಬಳಿ ಮಾತನಾಡುವಾಗ, ಈಗ ವ್ಯಾಟ್ಸ್ಆ್ಯಪ್ ಮೂಲಕ ಯಾವುದೇ ವಿಚಾರ ಫಾರ್ವಡ್ ಮಾಡಲು ಭಯವಾಗುತ್ತಿದೆ ಎಂದ. ಭಯ ಯಾಕೆ ಎಂದು ಕೇಳಿದಾಗ, ಎಲ್ಲಿ ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತಾರೆ ಅನ್ನೋ ಭಯ ಇದೆ ಎಂಬ ಉತ್ತರ ನೀಡಿದೆ. ಬಿಜೆಪಿಯವರು ಈ ದೇಶದ ಜನರನ್ನು ಯಾವ ರೀತಿಯ ಭಯದ ವಾತಾವರಣದಲ್ಲಿಟ್ಟಿದ್ದಾರೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ. ಈ ದೇಶವನ್ನು ಏನು ಮಾಡಲು ಹೊರಟಿದ್ದೀರಿ ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಅನರ್ಹ, ಕಾಂಗ್ರೆಸ್ ಸದ್ದಡಗಿಸಲು ಬಿಜೆಪಿಯಿಂದ ಷಡ್ಯಂತ್ರ, ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ!

ಮೋದಿ ಸರ್ನೇಮ್ ಇಟ್ಟುಕೊಂಡಿರುವ ಎಲ್ಲರು ಕಳ್ಳರು ಎಂದು ಕೋಲಾರದಲ್ಲಿ ರಾಹುಲ್ ಗಾಂಧಿ ಹೇಳಿದ್ದರು. 2019ರ ಚುನಾವಣಾ ಸಂದರ್ಭದಲ್ಲಿ ಈ ಹೇಳಿಕೆ ಕೊಟ್ಟಿದ್ದರು. ರಾಹುಲ್ ಹೇಳಿಕೆಯಿಂದ ಮೋದಿ ಸಮುದಾಯಕ್ಕೆ ನೋವಾಗಿದೆ. ಜಾತಿ ನಿಂದನೆಯಾಗಿದೆ ಎಂದು ಗುಜರಾತ್‌ನ ಬಿಜೆಪಿ ನಾಯಕ ಪೂರ್ವಂಶು ಮೋದಿ ದೂರು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ಸೂರತ್ ಕೋರ್ಟ್ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿತು ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಗೊಂಡಿದೆ. 

Follow Us:
Download App:
  • android
  • ios