Asianet Suvarna News Asianet Suvarna News

ಅಲ್ಪಸಂಖ್ಯಾತರಿಗೆ 10000 ಕೋಟಿ ಅನುದಾನ ನೀಡುವೆ: ಸಿಎಂ ಸಿದ್ದರಾಮಯ್ಯ

ಅಲ್ಪಸಂಖ್ಯಾತರಿಗೆ 400 ಕೋಟಿ ರು. ಇದ್ದ ಅನುದಾನವನ್ನು ನಾನು 3 ಸಾವಿರ ಕೋಟಿ ರು.ಗೆ ಹೆಚ್ಚಳ ಮಾಡಿದ್ದೆ. ಮುಂದಿನ ವರ್ಷವೂ ಕೂಡ ಅನುದಾನ ಹೆಚ್ಚಳ ಮಾಡುತ್ತೇನೆ. ನನ್ನ ಅಧಿಕಾರ ಅವಧಿ ಮುಗಿಯುವ ವೇಳೆಗೆ 10 ಸಾವಿರ ಕೋಟಿ ರು. ಅನುದಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

10000 crore grant for minorities Says CM Siddaramaiah gvd
Author
First Published Oct 2, 2023, 1:30 AM IST

ಬೆಂಗಳೂರು (ಅ.02): ಅಲ್ಪಸಂಖ್ಯಾತರಿಗೆ 400 ಕೋಟಿ ರು. ಇದ್ದ ಅನುದಾನವನ್ನು ನಾನು 3 ಸಾವಿರ ಕೋಟಿ ರು.ಗೆ ಹೆಚ್ಚಳ ಮಾಡಿದ್ದೆ. ಮುಂದಿನ ವರ್ಷವೂ ಕೂಡ ಅನುದಾನ ಹೆಚ್ಚಳ ಮಾಡುತ್ತೇನೆ. ನನ್ನ ಅಧಿಕಾರ ಅವಧಿ ಮುಗಿಯುವ ವೇಳೆಗೆ 10 ಸಾವಿರ ಕೋಟಿ ರು. ಅನುದಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಎಚ್‌.ಬಿ.ಆರ್‌. ಬಡಾವಣೆಯಲ್ಲಿ ಬ್ಯಾರೀಸ್‌ ವೆಲ್ ಫೇರ್‌ ಅಸೋಸಿಯೇಷನ್‌ ನೂತನವಾಗಿ ನಿರ್ಮಿಸಿರುವ ಬ್ಯಾರೀಸ್ ಸೌಹಾರ್ದ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದೀರಿ. ನಾನು ಮುಖ್ಯಮಂತ್ರಿಯಾದಾಗ ಯಾರೂ ಕೂಡ ನನಗೆ ಅನುದಾನಕ್ಕೆ ಮನವಿ ಮಾಡಲಿಲ್ಲ. ಆದರೂ ಅನುದಾನ ಹೆಚ್ಚಳ ಮಾಡಿದ್ದೆ. ರಾಜ್ಯದಲ್ಲಿ ಎಲ್ಲ ಸಮುದಾಯಗಳನ್ನೂ ಸಮಾನವಾಗಿ ಅಭಿವೃದ್ಧಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ರಾಜ್ಯದ ಸಂಪತ್ತು ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂದರು. ಮುಂದಿನ ವರ್ಷದಲ್ಲೂ ಅನುದಾನ ಹೆಚ್ಚಳದ ಕೆಲಸ ಮಾಡುತ್ತೇನೆ. ನನ್ನ ಅವಧಿ ಮುಗಿಯುವ ವೇಳೆಗೆ ಬಜೆಟ್‌ ಗಾತ್ರ ಹೆಚ್ಚಾದಂತೆ 10 ಸಾವಿರ ಕೋಟಿ ರು.ಗಳಷ್ಟು ಅನುದಾನ ಒದಗಿಸಬಹುದು. ಆ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದರು.

ಬದುಕಿರುವವರೆಗೂ ಬಿಜೆಪಿ ಜತೆ ಸೇರಲ್ಲ ಎಂದಿದ್ದರು ದೇವೇಗೌಡರು: ಸಿಎಂ ಸಿದ್ದರಾಮಯ್ಯ

ಮುಸ್ಲಿಂ ಅನುದಾನ 10 ಸಾವಿರ ಕೋಟಿಗೆ ಏರಿಸುತ್ತೇನೆ: ರಾಜ್ಯದ ಸಿಎಂ ಆಗಿ ನನ್ನ ಅಧಿಕಾರದ ಅವಧಿ ಮುಗಿಯುವ ಮುನ್ನ ಮುಸ್ಲಿಮರ ಅಭಿವೃದ್ಧಿ ಹಣವನ್ನು 10 ಸಾವಿರ ಕೋಟಿಗೆ ಏರಿಸಲಿದ್ದೇನೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬ್ಯಾರಿ ವೆಲ್‌ಫೇರ್‌ ಅಸೋಸಿಯೇಷನ್‌ ವತಿಯಿಂದ ನಿರ್ಮಾಣವಾದ ಬ್ಯಾರಿ ಸೌಹಾರ್ದ ಭವನ ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಮುಸ್ಲಿಂ ಸಮುದಾಯದ ಅಭಿವೃದ್ಧಿ ಹಣಕ್ಕಾಗಿ ಬೇಡಿಕೆ ಬರುತ್ತಿರುವ ವಿಚಾರದ ಬಗ್ಗೆ ಮಾತನಾಡಿದರು. 

ಮೊದಲು ಮುಸ್ಲಿಂ ಅಭಿವೃದ್ಧಿಗೆ 400 ಕೋಟಿ ಹಣ ಮೀಸಲಿಡಲಾಗಿತ್ತು. ಆ ಬಳಿಕ ಇದನ್ನು ನಾನು 3 ಸಾವಿರ ಕೋಟಿಗೆ ಏರಿಸಿದ್ದೇನೆ. ಅಂದು ಕೂಡಸ ನನ್ನ ಎದುರು ಯಾರೂ ಬಂದು ಇದರ ಬಗ್ಗೆ ಕೇಳಿರಲಿಲ್ಲ. ಹಾಗಿದ್ದರೂ ನಾನು ಅನುದಾನ ಹೆಚ್ಚು ಮಾಡಿದ್ದೆ. ಈಗಲೂ ಕೂಡ ಅಷ್ಟೇ ಅನುದಾನ ಹೆಚ್ಚು ಮಾಡೇ ಮಾಡ್ತೀನಿ. ಮುಂದೆ ನನ್ನ ಅವಧಿ ಮುಗಿಯುವಷ್ಟರಲ್ಲಿ 10 ಸಾವಿರಕ್ಕೆ ಏರಿಕೆ ಮಾಡುತ್ತೇನೆ ಅದು ನನ್ನ ಕೆಲಸ. ರಾಜ್ಯದಲ್ಲಿ ನಾವು ಎಲ್ಲಾ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ. ರಾಜ್ಯದ ಸಂಪತ್ತು ಎಲ್ಲರಿಗೂ ಸಿಗಬೇಕು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಧರ್ಮಕ್ಕೊಂದು ಸಮಾವೇಶ, ಜಾತಿಗೊಂದು ಸಭೆ ಜಾತ್ಯತೀತವೇ: ಸಿದ್ದು ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಇದೇ ವೇಳೆ ಕಾಂಗ್ರೆಸ್‌ನಲ್ಲಿ ಮುಸ್ಲಿಮರ ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಮಾತು ಹೇಳಿ ಬಂದಿದೆ. ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಮಂತ್ರಿ ಸ್ಥಾನವನ್ನು ಸರ್ಕಾರದಲ್ಲಿ ನೀಡಬೇಕು. ನಮ್ಮ ಯುಟಿ ಖಾದರ್‌ ಅವರನ್ನು ಮಂತ್ರಿ ಮಾಡಬೇಕಿತ್ತು ಎಂದು ಬ್ಯಾರಿ ವೆಲ್‌ಫೇರ್‌ ಅಸೋಸಿಯೇಷನ್‌ ಹೇಳಿದೆ. ಸರ್ಕಾರ ರಚನೆಯಲ್ಲಿ ಮುಸ್ಲಿಮರ ಪಾತ್ರವೇ ದೊಡ್ಡದಾಗಿದೆ. ಕನಿಷ್ಠವೆಂದರೆ, ಇನ್ನೂ ಮೂರು ಮಂತ್ರಿ ಸ್ಥಾನವನ್ನು ಮುಸ್ಲಿಮರಿಗೆ ನೀಡಬೇಕು ಎಂದು  ಬ್ಯಾರಿ ಅಸೋಸಿಯೇಷನ್‌ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಆಗ್ರಹಿಸಿದ್ದಾರೆ.

Follow Us:
Download App:
  • android
  • ios