ರಾಜ್ಯದ 10 ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಗೆ ಮೀಸಲಾತಿ ಪ್ರಕಟ

10 ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ಯಾವ ಪಾಲಿಕೆ ಯಾವ ಮೀಸಲಾತಿ ಬಂದಿದೆ ಎನ್ನುವ ಮಾಹಿತಿ ಇಂತಿದೆ.

10 metropolitans mayor and deputy mayor Election reservation announced By Karnataka Govt rbj

ಬೆಂಗಳೂರು, (ಫೆ.12):  ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. 

ವಿವಿಧ ಕ್ಯಾಟಗರಿಗಳಿಗೆ ಮೇಯರ್, ಉಪ ಮೇಯರ್ ಸ್ಥಾನವನ್ನ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಇಂದು (ಶುಕ್ರವಾರ) ಆದೇಶ ಹೊಡಡಿಸಿದೆ.

ಈ ಎಲ್ಲಾ ಹತ್ತು ಮಹಾನಗರ ಪಾಲಿಕೆಗಗಳ ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿ ಪ್ರಕಟಿಸುವ ಮೊದಲು ರಾಜ್ಯ ಸರ್ಕಾರ ಕಳೆದ ಜನವರಿ 21ರಂದು ಮೀಸಲಾತಿ ನಿಗದಿಪಡಿಸುವ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಇದೀಗ ಅಧಿಕೃತ ಆದೇಶ ಹೊರಡಿಸಿದೆ.

ಬೈ ಎಲೆಕ್ಷನ್‌ ಕಣದಿಂದ ಹಿಂದೆ ಸರಿದ ಜೆಡಿಎಸ್: ಬಿಜೆಪಿಗೆ ಪ್ಲಸ್...! 

ಬಳ್ಳಾರಿ,ಬೆಳಗಾವಿ, ದಾವಣಗೆರೆ,ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು,ಮೈಸೂರು,ಶಿವಮೊಗ್ಗ, ತುಮಕೂರು ಹಾಗೂ ವಿಜಯಪುರ ಮಹಾನಗ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಮೀಸಲಾತಿ ಪ್ರಕಟಿಸಲಾಗಿದೆ. ಅದು ಈ ಕೆಳಗಿನಂತಿದೆ.

ಮೀಸಲಾತಿ ಪಟ್ಟಿ
1. ಬಳ್ಳಾರಿ: ಮೇಯರ್ -ಸಾಮಾನ್ಯ , ಉಪ ಮೇಯರ್ -ಒಬಿಸಿ
2. ಬೆಳಗಾವಿ: ಮೇಯರ್ -ಸಾಮಾನ್ಯ , ಉಪ ಮೇಯರ್ -ಸಾಮಾನ್ಯ ಮಹಿಳೆ
3. ದಾವಣಗೆರೆ: ಮೇಯರ್ -‌SC ಮಹಿಳೆ , ಉಪ ಮೇಯರ್ -ಸಾಮಾನ್ಯ ಮಹಿಳೆ
4. ಹುಬ್ಬಳ್ಳಿ ಧಾರವಾಡ: ಮೇಯರ್‌ -ಒಬಿಸಿ(ಎ), ಉಪ ಮೇಯರ್ -‌SC ಮಹಿಳೆ
5. ಕಲಬುರಗಿ: ಮೇಯರ್‌ -ಸಾಮಾನ್ಯ ಮಹಿಳೆ, ಉಪ ಮೇಯರ್ -ಒಬಿಸಿ (ಬಿ)
6. ಮಂಗಳೂರು: ಮೇಯರ್ -ಸಾಮಾನ್ಯ , ಉಪ ಮೇಯರ್ -ಒಬಿಸಿ(ಎ) ಮಹಿಳೆ
7. ಮೈಸೂರು: ಮೇಯರ್ -ಸಾಮಾನ್ಯ ಮಹಿಳೆ, ಉಪ ಮೇಯರ್ -ಸಾಮಾನ್ಯ
8. ಶಿವಮೊಗ್ಗ: ಮೇಯರ್ -ಒಬಿಸಿ(ಎ) ಮಹಿಳೆ, ಉಪ ಮೇಯರ್ -ಸಾಮಾನ್ಯ
9. ತುಮಕೂರು: ಮೇಯರ್ -SC, ಉಪ ಮೇಯರ್ -ಸಾಮಾನ್ಯ ಮಹಿಳೆ
10. ವಿಜಯಪುರ: ಮೇಯರ್ -ಸಾಮಾನ್ಯ , ಉಪ ಮೇಯರ್ -ಒಬಿಸಿ(ಎ)

Latest Videos
Follow Us:
Download App:
  • android
  • ios