Asianet Suvarna News Asianet Suvarna News

ಬಯಲುಸೀಮೆ ಜಿಲ್ಲೆಗಳ ಅಭಿವೃದ್ಧಿಗೆ 1 ಸಾವಿರ ಕೋಟಿ: ಎಚ್‌.ಡಿ.ಕುಮಾರಸ್ವಾಮಿ

ಬಯಲುಸೀಮೆ ಕ್ಷೇತ್ರಗಳಾದ ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ಕ್ಷೇತ್ರಗಳು ಅಭಿವೃದ್ಧಿ ವಂಚಿತವಾಗಿ ಹೀನಾಯ ಪರಿಸ್ಥಿತಿಗೆ ತಲುಪಿವೆ. ನಾನು ಅಧಿಕಾರಕ್ಕೆ ಬಂದರೆ ಬಯಲುಸೀಮೆ ಗಡಿಜಿಲ್ಲೆಗಳ ಅಭಿವೃದ್ಧಿಗೆ ಪ್ರತಿವರ್ಷ 1 ಸಾವಿರ ಕೋಟಿ ಅನುದಾನ ಮೀಸಲಿಡುತ್ತೇನೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. 

1 thousand crore for the development of plain districts says hd kumaraswamy gvd
Author
First Published Dec 5, 2022, 11:59 PM IST

ಹೊಳವನಹಳ್ಳಿ (ಡಿ.05): ಬಯಲುಸೀಮೆ ಕ್ಷೇತ್ರಗಳಾದ ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ಕ್ಷೇತ್ರಗಳು ಅಭಿವೃದ್ಧಿ ವಂಚಿತವಾಗಿ ಹೀನಾಯ ಪರಿಸ್ಥಿತಿಗೆ ತಲುಪಿವೆ. ನಾನು ಅಧಿಕಾರಕ್ಕೆ ಬಂದರೆ ಬಯಲುಸೀಮೆ ಗಡಿಜಿಲ್ಲೆಗಳ ಅಭಿವೃದ್ಧಿಗೆ ಪ್ರತಿವರ್ಷ 1 ಸಾವಿರ ಕೋಟಿ ಅನುದಾನ ಮೀಸಲಿಡುತ್ತೇನೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಕೊರಟಗೆರೆ ತಾಲೂಕಿನ ತೋವಿನಕೆರೆ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪಂಚರತ್ನ ಯೋಜನೆಯ ರಥಯಾತ್ರೆ, ರೈತರ ಜೊತೆ ಸಂವಾದ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕರ್ನಾಟಕ ರಾಜ್ಯ ರಾಜಧಾನಿಯಿಂದ ಗಡಿ ಜಿಲ್ಲೆಯ 3 ಕ್ಷೇತ್ರಗಳು ಕೇವಲ 70ಕಿಮೀ ಅಂತರದಲ್ಲಿವೆ. ಅಭಿವೃದ್ಧಿ ಕಾಣದೇ ಗ್ರಾಮೀಣ ಪ್ರದೇಶಗಳು ತುಂಬಾ ಹಿಂದುಳಿದಿವೆ. ಗಡಿ ಗ್ರಾಮಗಳ ಬಡಜನರ ನೋವು ಆಲಿಸುವ ನಾಯಕರು ನಮಗೆ ಅವಶ್ಯಕತೆ ಇದೆ. ಕೊರಟಗೆರೆಯ ಪ್ರವಾಸದ ವೇಳೆ ವಿದ್ಯಾರ್ಥಿನಿಯಿಂದ ನನಗೆ ಜ್ಞಾನೋದಯ ಆಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ಗಡಿಭಾಗದ ನಾಲ್ಕೈದು ಜಿಲ್ಲೆಗಳಿಗೆ ಪ್ರತಿ ವರ್ಷ 1 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ನರಸಿಂಹರಾಜು, ತೋವಿನಕೆರೆ ಗ್ರಾಪಂ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ನರಸಮ್ಮ, ಮುಖಂಡರಾದ ಕೋಡ್ಲಹಳ್ಳಿವೆಂಕಟೇಶ್‌, ಶ್ರೀನಿವಾಸ್‌, ವಿಜಯಕುಮಾರ್‌, ಶ್ರೀಧರ್‌, ರಂಗೇಗೌಡ, ರಮೇಶ್‌, ಅರುಣ್‌, ಸುರೇಶ್‌, ಮಧು, ಸುಜಾತ ರಮೇಶ್‌ ಸೇರಿದಂತೆ ಇತರರು ಇದ್ದರು.

JDS Pancharatna Rathayatra: ಜೆಡಿಎಸ್‌ ಪಂಚರತ್ನ ಯಾತ್ರೆಗೆ ತುಮಕೂರಲ್ಲಿ ಭವ್ಯ ಸ್ವಾಗತ

ಬಡವರ ಬಂಧು ಯೋಜನೆಗೆ ಆಗ್ರಹ: ಬಡವರ ಬಂಧು ಯೋಜನೆಯ ಮೂಲಕ ಕರ್ನಾಟಕ ರಾಜ್ಯದ ಎಲ್ಲಾ ಬೀದಿಬದಿಯ ವ್ಯಾಪಾರಿಗಳಿಗೆ ಸಹಾಯ ಮಾಡಿದ್ದೀರಿ. ಬೀದಿಬದಿಯ ವ್ಯಾಪಾರಿಗಳಿಗೆ ವಸತಿ ಸೌಲಭ್ಯ, ಪಟ್ಟಣ ವ್ಯಾಪಾರ ವಲಯ, ಬಡ್ಡಿ ರಹಿತ ಸಾಲ ಸೌಲಭ್ಯ, ಉಚಿತ ಶಿಕ್ಷಣ ನೀಡಬೇಕಿದೆ. ಕೊರಟಗೆರೆ ಪಟ್ಟಣದ ಬೀದಿಬದಿ ವ್ಯಾಪಾರಿಗಳ ವಹಿವಾಟಿಗೆ ಸ್ಥಳಾವಕಾಶವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಮನವಿ ಸಲ್ಲಿಸಿ ಬಡವರ ಬಂಧು ಯೋಜನೆ ಮತ್ತೆ ಪ್ರಾರಂಭಕ್ಕೆ ಸರ್ಕಾರಕ್ಕೆ ಆಗ್ರಹಿಸುವಂತೆ ಮನವಿ ಮಾಡಿದರು.

ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಆಗ್ರಹ: ಹಾಲಿ ರೂಪಿಸಿರುವ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಸರ್ಕಾರಿ ಹೊಸ ಪಿಂಚಣಿ ವ್ಯಾಪ್ತಿಯಲ್ಲಿರುವ ನೌಕರರು ಹಾಗೂ ಸಿಬ್ಬಂದಿ ಹೊಸ ಪಿಂಚಣಿ ಯೋಜನೆ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಮಧುಗಿರಿ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ನಿಮಿತ್ತ ಇಲ್ಲಿನ ದಂಡಿಮಾರಮ್ಮ ದೇಗುಲದ ಬಳಿ ವಾಸ್ತವ್ಯ ಹೂಡಿದ್ದ ವೇಳೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ನೌಕರರನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ನೌಕರರ ಬೇಡಿಕೆ ಅರ್ಥಪೂರ್ಣವಾಗಿದ್ದು, ನಿವೃತ್ತಿ ನಂತರ ನೆಮ್ಮದಿ ಜೀವನ ನಡೆಸಲು ನಿಶ್ಚಿತ ಪಿಂಚಣಿ ಅತ್ಯವಶ್ಯಕ ಹಾಗೂ ನೌಕರರ ಹಕ್ಕು ದಶಕಗಳಿಂದಲೂ ಸರ್ಕಾರಗಳು ನೀಡುತ್ತಾ ಬಂದಿವೆ. 

ಪ್ರಸ್ತುತ ಸರ್ಕಾರ ನೌಕರರ ಈ ಬೇಡಿಕೆಯನ್ನು ಈಡೇರಿಸುವುದಿಲ್ಲ ಅವರ ಭವಿಷ್ಯ ಆತಂಕದಲ್ಲಿದೆ. ಪ್ರವಾಸದ ವೇಳೆ ರಾಜ್ಯದ ಬಹುತೇಕ ಕಡೆ ಈ ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸಿ ತಮ್ಮ ಕಷ್ಟಗಳನ್ನು ನೌಕರ ಬಂಧುಗಳು ತೋಡಿಕೊಂಡಿದ್ದಾರೆ. ಬರುವ 2023ರ ಚುನಾವಣೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿಮ್ಮ ಬೇಡಿಕೆ ಈಡೇರಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು. ಈ ವೇಳೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶಯ್ಯ, ಉಪಾಧ್ಯಕ್ಷ ಶಶಿಕುಮಾರ್‌, ಗೌರವಾಧ್ಯಕ್ಷ ರಂಗನಾಥ್‌, ಸಾವಿತ್ರಿ ಬಾಪುಲೆ ಸಂಘದ ಅಧ್ಯಕ್ಷೆ ಮೀನಾಕ್ಷಿ ಸೇರಿದಂತೆ ಅನೇಕರಿದ್ದರು.

Pancharatna Rathayatra: ದೊಡ್ಡಬಳ್ಳಾಪುರ ಗೆಲ್ಲೋದೆ ನಮ್ಮ ಗುರಿ: ಎಚ್‌.ಡಿ.ಕುಮಾರಸ್ವಾಮಿ

ರೌಡಿಶೀಟರ್‌ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ. ನನಗೆ ಬಡವರ ನೋವು ನೀಗಿಸುವುದು ಮುಖ್ಯ. ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಮೇಜರ್‌ ಸರ್ಜರಿಯ ಅವಶ್ಯಕತೆ ಇದೆ. ಇಲ್ಲವಾದರೇ ಜನಸಾಮಾನ್ಯರು ಬದುಕಲು ಸಾಧ್ಯವಿಲ್ಲ. ಕರ್ನಾಟಕ ಜಂಗಲ್‌ ರಾಜ್ಯ ಆಗ್ತಿದೆ. ಹೀಗಾಗಿ ಪ್ರಾದೇಶಿಕ ಅಸ್ಮಿತೆ ಇರುವ ಜನರ ಸಮಸ್ಯೆ ಕೇಳುವ ಜನನಾಯಕರ ಅವಶ್ಯಕತೆ ಇದೆ.
-ಎಚ್‌.ಡಿ.ಕುಮಾರಸ್ವಾಮಿ ಮಾಜಿ ಸಿಎಂ

Follow Us:
Download App:
  • android
  • ios