ವಿಂಬಲ್ಡನ್ ಗ್ರ್ಯಾನ್‌ಸ್ಲಾಂ: ಪ್ರಧಾನ ಸುತ್ತಿಗೇರಲು ರಾಮ್‌ಗೆ ಬೇಕಿದೆ ಇನ್ನೊಂದು ಗೆಲುವು..!
* ವಿಂಬಲ್ಡನ್ ಪ್ರಧಾನ ಸುತ್ತಿಗೇರಲು ರಾಮ್‌ಕುಮಾರ್‌ಗೆ ಇನ್ನೊಂದು ಹೆಜ್ಜೆ ಬಾಕಿ
* ಚೊಚ್ಚಲ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ರಾಮ್‌ಕುಮಾರ್ ರಾಮನಾಥನ್
* ಮಹಿಳಾ ಸಿಂಗಲ್ಸ್ ಆಟಗಾರ್ತಿ ಅಂಕಿತ ರೈನಾ ಹೋರಾಟ ಅಂತ್ಯ
ಲಂಡನ್(ಜೂ.24): ಭಾರತದ ರಾಮ್‌ಕುಮಾರ್ ರಾಮನಾಥನ್ ವಿಂಬಲ್ಡನ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಇನ್ನೊಂದು ಗೆಲುವು ದಾಖಲಿಸಿದರೆ ಚೊಚ್ಚಲ ಬಾರಿಗೆ ಗ್ರ್ಯಾನ್‌ಸ್ಲಾಂ ಪ್ರಧಾನ ಸುತ್ತಿಗೆ ಅರ್ಹತೆಗಿಟ್ಟಿಸಿಕೊಳ್ಳಲಿದ್ದಾರೆ. ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಅರ್ಜಿಂಟೀನಾದ ಥಾಮಸ್ ಎಕ್‌ವೆರ್ರಿ ಎದುರು 6-3, 6-4 ನೇರ ಸೆಟ್‌ಗಳಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಗೆಲುವು ದಾಖಲಿಸಿದ್ದಾರೆ.
ವಿಂಬಲ್ಡನ್ ಅರ್ಹತಾ ಸುತ್ತು: ಅಂಕಿತಾ ರೈನಾ ಔಟ್
ಭಾರತದ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೂರ್ನಿಯ ಪ್ರಧಾನ ಸುತ್ತಿಗೇರುವಲ್ಲಿ ವಿಫಲರಾಗಿದ್ದಾರೆ.
ಡೆಲ್ಲಿ ಕ್ರೀಡಾ ವಿವಿ ಉಪಕುಲಪತಿಯಾಗಿ ಒಲಿಂಪಿಕ್ ಪದಕ ವಿಜೇತೆ ಕರ್ಣಂ ಮಲ್ಲೇಶ್ವರಿ ನೇಮಕ
ಮಹಿಳಾ ಸಿಂಗಲ್ಸ್ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಅಮೆರಿಕದ ವಾರ್ವರಾ ಲೆಪ್ಚೆನ್ಕೋ ವಿರುದ್ಧ 3-6, 6-7 ಸೆಟ್‌ಗಳಲ್ಲಿ ಸೋಲುಂಡರು. ಪುರುಷರ ಸಿಂಗಲ್ಸ್‌ನ ಅರ್ಹತಾ ಸುತ್ತಿನಲ್ಲಿ ಪ್ರಜ್ನೇಶ್ ಗುಣೇಶ್ವರನ್ ಸಹ ಮೊದಲ ಪಂದ್ಯದಲ್ಲೇ ಸೋತು ಹೊರಬಿದ್ದಿದ್ದರು.